Avatar

Shramitha bejja

ಧರ್ಮಸ್ಥಳ ಬುರುಡೆ ಪ್ರಕರಣ .ಜಡ್ಜ್‌ ಮುಂದೆ ಚಿನ್ನಯ್ಯನ ಹೇಳಿಕೆ.

ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಆರೋಪಿ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯದಲ್ಲಿ BNSS 183 ಹೇಳಿಕೆ ನೀಡಲು ಮಂಗಳವಾರ ಶಿವಮೊಗ್ಗ ಜೈಲಿನಿಂದ ಪೊಲೀಸರು ಬೆಳ್ತಂಗಡಿ ಕೋರ್ಟ್ ಗೆ ಕರೆದುಕೊಂಡು ಬಂದು ಹಾಜರುಪಡಿಸಿದರು.ಈ ಪ್ರಕರಣದ ಬಗ್ಗೆ ಚಿನ್ನಯ್ಯ ಕೋರ್ಟ್ ನಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದರು. ಆರೋಪಿ ಚಿನ್ನಯ್ಯ 3 ಗಂಟೆಗೆ ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ ಎಚ್.ಟಿ ಮುಂದೆ ಹಾಜರು ಪಡಿಸಿ ಹೇಳಿಕೆ ದಾಖಲಿಸುವ ಕಾರ್ಯ ಆರಂಭಿಸಲಾಗಿತ್ತು. ಸಂಜೆ ನ್ಯಾಯಾಲಯದ ಪ್ರಕ್ರಿಯೆಗಳನ್ನು ಮುಗಿಸಿ ಆತನನ್ನು ವಾಪಸ್ ಶಿವಮೊಗ್ಗ…

Read More

‘ಎಲ್ಲ ಭಾಷೆಗಳ ಉದ್ದೇಶ ಮನುಕುಲದ ಉದ್ಧಾರ. ಇಲ್ಲಿ ಯಾವುದೇ ಭಾಷೆಯನ್ನು ಸಾಯಲು ಬಿಡಬಾರದು’ – ಡಾ.ಪುರುಷೋತ್ತಮ ಬಿಳಿಮಲೆ

ಮಂಗಳೂರು: ಭಾರತ ಹಲವು ಭಾಷೆಗಳ ರಂಗೋಲಿ. ಎಲ್ಲ ಭಾಷೆಗಳ ಉದ್ದೇಶ ಮನುಕುಲದ ಉದ್ಧಾರ. ಇಲ್ಲಿ ಯಾವುದೇ ಭಾಷೆಯನ್ನು ಸಾಯಲು ಬಿಡಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ- 2025ರ ಅಂಗವಾಗಿ ರಂಗ ಸಂಗಾತಿ‌ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಸಹಯೋಗದಲ್ಲಿ ಮಂಗಳವಾರ ಆಯೋಜಿಸಲಾದ 2ನೇ ವರ್ಷದ ಬಹುಭಾಷಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಕೆಲವು ಭಾಷೆಗಳು ಪತನಮುಖಿಯಾಗಿವೆ. ಇಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಬಹುಭಾಷಾ ಕವಿಗೋಷ್ಠಿ ಪೂರಕ. ಕವಿಗಳು ಹೊಸಲೋಕವನ್ನು…

Read More

ಪಳ್ಳದ ಕೊಟ್ಯ ಶ್ರೀ ಧೂಮಾವತಿ “ದೀಪಾವಳಿ ನೆಮೋತ್ಸವ “ಆಮಂತ್ರಣ ಪತ್ರಿಕೆ ಬಿಡುಗಡೆ.

ಕಾಸರಗೋಡು : ಕಾಸರಗೋಡು ಕೋಟೆ ಬಾಗಿಲಿನಲ್ಲಿರುವ ಪಳ್ಳದಕೊಟ್ಯ ಶ್ರೀ ಧೂಮಾವತಿ ದೈವ ಕೋಲ ವರ್ಷಮ್ರತಿ, ಕಾಸರಗೋಡು ಕೋಟೆ ನಾಯಕರ ಮನೆತನದವರು, ಸಮಾಜದವರು, ಹಾಗೂ ಊರವರ ಸಹಕಾರದೊಂದಿಗೆ ದೀಪಾವಳಿ ದಿನದಂದು, ಪಳ್ಳದಕೊಟ್ಯ ತರವಾಡಿನಿಂದ ವೈಭವದಿಂದ ಬಂಡಾರ ಮೆರವಣಿಗೆ ಮೂಲಕ ಬಂದು ನಡೆಯುವುದು ಪ್ರಾಚೀನದಿಂದ ನಡೆದು ಬರುವುದು ಇತಿಹಾಸ. ಈ ಐತಿಹಾಸಿಕ ಪರಂಪರೆಯ ಶ್ರೀ ಪಳ್ಳದಕೊಟ್ಯ ಶ್ರೀ ಧೂಮಾವತಿ ದೈವಕೋಲದ ಆಮಂತ್ರಣ ಪತ್ರಿಕೆ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ದಲ್ಲಿ ನಡೆಯುತ್ತಿರುವ ಕಾಸರಗೋಡು ದಸರಾ ಸಂಭ್ರಮ ವೇದಿಕೆಯಲ್ಲಿ…

Read More

ಕಾಂಗ್ರೆಸ್ ಹಿರಿಯ ಮುಖಂಡ ಅಬ್ದುಲ್ ರಹ್ಮಾನ್ ಭಟ್ಕಳ್ ನಿಧನ.

ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಅಬ್ದುಲ್ ರಹ್ಮಾನ್ ಭಟ್ಕಳ್ (72) ಮಂಗಳವಾರ ಮುಂಜಾನೆ ಹೃದಯಾಘಾತದಿಂದ ಬೆಂಗಳೂರಿನ ಫ್ರೇಜರ್ ಟೌನ್ ನಗರದ ನಿವಾಸದಲ್ಲಿ ನಿಧನರಾದರು. ಭಟ್ಕಳ ಮೂಲದವರಾಗಿದ್ದ ಅಬ್ದುಲ್ ರಹ್ಮಾನ್ ಅವರು ಮಂಗಳೂರಿನ ಭಟ್ಕಳ ಬಜಾರ್ ನಲ್ಲಿ ವಾಸವಾಗಿದ್ದರು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಹಲವು ತಿಂಗಳುಗಳಿಂದ ಪತ್ನಿ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದರು. ನೇರ ನಡೆ ನುಡಿಯ ಸರಳ ಸಜ್ಜನಿಕೆಯ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು ಜಿಲ್ಲೆಯ ಎಲ್ಲ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ದೂರದರ್ಶಿತ್ವ,…

Read More

ಫಿಶ್ ಕಟ್ಟಿಂಗ್ ಕಾರ್ಖಾನೆ ಮೇಲೆ ಕಾರ್ಮಿಕ ಇಲಾಖೆಯಿಂದ ಮಿಂಚಿನ ದಾಳಿ: 10 ಅಪ್ರಾಪ್ತ ಬಾಲ ಕಾರ್ಮಿಕರು ಪತ್ತೆ.

ಮಂಗಳೂರು: ಕಾರ್ಮಿಕ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಫಿಶ್ ಕಟ್ಟಿಂಗ್ ಯೂನಿಟ್ ಸಂಸ್ಥೆಗೆ ದಾಳಿ ನಡೆಸಿ, 10 ಬಾಲಕಾರ್ಮಿಕ/ ಕಿಶೋರ ಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ. ಸಾರ್ವಜನಿಕರ ದೂರಿನ ಮೇರೆಗೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ಮಕ್ಕಳು ಬಿಹಾರ ಮತ್ತು ನೇಪಾಳ ಮೂಲದವರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತ ನಾಜಿಯಾ ಸುಲ್ತಾನ, ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್, ಹಿರಿಯ ಕಾರ್ಮಿಕ ನಿರೀಕ್ಷಕ ರಾಜಶೇಖರ ರೆಡ್ಡಿ, ಯೋಜನಾ ನಿರ್ದೇಶಕ…

Read More

ಓಟ್ ಚೋರರ ಹಾರಾಟಕ್ಕೆ ಅಂತ್ಯ ಹಾಡಲು ಕಾಂಗ್ರೆಸ್ ಶತಃಸ್ಸಿದ್ಧ- ಪಿ.ಕೆ.ಫೈಸಲ್

ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆಯಲ್ಲಿ ಬಿಜೆಪಿಯು ನಿರ್ಲಜ್ಜ ಅಕ್ರಮವೆಸಗುವ ಮೂಲಕ ಅನ್ಯಾಯವಾಗಿ ಅಧಿಕಾರ ಗಳಿಸಿಕೊಂಡಿದೆ. ವಿವಿಧೆಡೆ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಸಹಸ್ರಾರು ಮತದಾರರನ್ನು ಅವರ ಅರಿವಿಗೇ ಬಾರದೆ ಯಾದಿಯಿಂದ ಹೊರತು ಪಡಿಸಿ ಅಷ್ಟೇ ಸಂಖ್ಯೆಯ ನಕಲಿ ಮತದಾರರನ್ನು ಕಳ್ಳತನದಿಂದ ಸೇರ್ಪಡೆಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲುಗೊಳಿಸಲಾಗಿದೆ. ಒಬ್ಬನಿಗೆ ಕಷ್ಟದಿಂದ ಇರಲು ಅಸಾಧ್ಯವಾದ ಕೊಠಡಿಗಳಲ್ಲಿ 80 ಕ್ಕಿಂತಲೂ ಹೆಚ್ಚಿನ ನಕಲಿ ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ. ತಂದೆಯ ಹೆಸರು ಇರುವಲ್ಲಿ ಮನಸಿಗೆ ಕಂಡ ಹೆಸರುಗಳನ್ನು, ಅಕ್ಷರಮಾಲೆಯಲ್ಲಿರುವ ಸಕಲ ಅಕ್ಷರಗಳನ್ನು ಬರೆಯಲಾಗಿದೆ….

Read More

ನಾಲ್ಕನೇ ತರಗತಿಯ ವಿದ್ಯಾರ್ಥಿ ಶಾಲೆಯ ಕ್ರೀಡಾ ಸ್ಪರ್ಧೆಯ ಮಧ್ಯೆ ಕುಸಿದು ಬಿದ್ದು ಸಾವು.

ಮಂಜೇಶ್ವರ: ನಾಲ್ಕನೇ ತರಗತಿಯ ವಿದ್ಯಾರ್ಥಿ ಶಾಲೆಯ ಕ್ರೀಡಾ ಸ್ಪರ್ಧೆಯ ಮಧ್ಯೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.. ಮಂಗಲ್ಪಾಡಿ ಜಿಎಲ್‌ಪಿ ಶಾಲೆಯ ವಿದ್ಯಾರ್ಥಿ ಹಸನ್ ರಝಾ (10) ಸಾವನ್ನಪ್ಪಿದ ದುರ್ದೈವಿ . ಮಂಗಳವಾರ ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಶಾಲೆಯ ಕ್ರೀಡಾ ಸ್ಪರ್ಧೆ ನಡೆಯುವಾಗ ಈ ದುರ್ಘಟನೆ ಸಂಭವಿಸಿದೆ. ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾದರೂ ಜೀವವನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಮೃತದೇಹವನ್ನು ಮಂಗಲ್ಪಾಡಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಉತ್ತರ ಪ್ರದೇಶದ ಮುರ್ಶಿದಾಬಾದ್ ಮೂಲದ ಇಲ್ಸಾಫಲಿ ಅವರ ಪುತ್ರನಾಗಿದ್ದಾರೆ .

Read More

ಉಡುಪಿ: ರಾಷ್ಟ್ರೀಯ ಲಾಂಛನ ಸ್ತಂಭ ನಿರ್ಮಿಸಲು ಆಗ್ರಹ.

ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ, ಇಂದ್ರಾಳಿಯ ಹಳೆ ಮೇಲ್ಸೇತುವೆಯ ಅಶೋಕ ಸ್ತಂಭಗಳು ಧರೆಗುರುಳಿ ಹಲವು ವರ್ಷಗಳು ಕಳೆದಿವೆ. ಹಳೆ ಸೇತುವೆ ನಿರ್ಮಾಣದ‌ ಸಮಯದಲ್ಲಿಯೇ ನಿರ್ಮಿಸಲ್ಪಟ್ಟ ಸ್ತಂಭಗಳು ಇವಾಗಿವೆ. ಶಿಥಿಲಗೊಂಡ ರಾಷ್ಟ್ರಲಾಂಛನದ ಅವಶೇಷಗಳು ಹೆದ್ದಾರಿಯ ಸನಿಹದ ಪೊದೆಗಳಲ್ಲಿ ಎಸೆದಿರುವುದು ಕಂಡುಬಂದಿದೆ. ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಕ್ಷಣವಾಗಿ ಸೇತುವೆಗೆ ಅಶೋಕ ಸ್ತಂಭಗಳನ್ನು ಹೊಸದಾಗಿ ನಿರ್ಮಿಸಬೇಕೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ‌ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ. ಭಾರತ ಸರಕಾರವು 1950 ರಲ್ಲಿ ಅಧಿಕೃತವಾಗಿ ಸಾರಾನಾಥದ…

Read More

ಗೋಹತ್ಯೆ ಪ್ರಕರಣವನ್ನು ಭೇದಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸ್‍ ಠಾಣಾ ಪೊಲೀಸರು.

ಬಂಟ್ವಾಳ: ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸರು ಆರೋಪಿಯೋರ್ವನನ್ನು ಬಂಧಿಸಿದ್ದಾರೆ. ದಂದೆಗೆ ಬಳಸಿದ ರಿಕ್ಷಾ ಹಾಗೂ ಮಾಂಸ ಮಾಡಲು ಕಟ್ಟಿ ಹಾಕಿದ ದನಗಳ ಸಹಿತ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.ಪೋಲೀಸರ ದಾಳಿ ವೇಳೆ ಪ್ರಮುಖ ಆರೋಪಿ ನಾಸೀರ್ ಸಹಿತ ಇತರರು ಪರಾರಿಯಾಗಿದ್ದು, ಮುಲ್ಕಿ ಕೃಷ್ಣಾಪುರ ಕಾರ್ನಾಡು ನಿವಾಸಿ ತೌಸೀಫ ಎಂಬಾತನನ್ನು ಬಂಧಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಕೆರೆ ಬಳಿ ನಾಸಿರ್ ಯಾನೆ…

Read More

ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ವ್ಯಕ್ತಿಯ ಕಿಸೆಯಲ್ಲಿದ್ದ ಲಕ್ಷ ರೂಪಾಯಿಗಳನ್ನು ಕಳವು ಮಾಡಿದ್ದ ಆರೋಪಿ ಬಂಧನ.

ಬಂಟ್ವಾಳ: ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ವ್ಯಕ್ತಿಯ ಕಿಸೆಯಲ್ಲಿದ್ದ ಲಕ್ಷ ರೂಪಾಯಿಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣಾ ಪೋಲೀಸರು ತಿಂಗಳ ಬಳಿಕ ಕಳ್ಳತನ ಮಾಡಿದ ಆರೋಪಿಯನ್ನು ಮಂಗಳೂರಿನಲ್ಲಿ ಬಂಧಿಸಿದ್ದಾರೆ.ತ್ರಿಶೂರ್ ಜಿಲ್ಲೆಯ ಕೇರಳ ರಾಜ್ಯದ ನಜೀರ್ ಪುನ್ನಯ್ಯೂರು ಎಂಬಾತನ ಬಂಧಿಸಲಾಗಿದೆ. ಅಗಸ್ಟ್ 15 ರಂದು ಕುಂದಾಪುರದ ನಿವಾಸಿಯಾಗಿರುವ ರಂಗನಾಥ ಬೆಳ್ಳಾಲ ಅವರು ಕೊಟ್ಟಿಗೆ ಹಾರಕ್ಕೆ ಹೋಗುವ ಉದ್ದೇಶದಿಂದ ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ವೇಳೆ ಇವರ ಕಿಸೆಯಲ್ಲಿದ್ದ 50…

Read More
error: Content is protected !!