Avatar

Shramitha bejja

55 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ.

55 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ Cr NO 32/1970 u/s 154,155 (2)MF Rules 1969 sec 86 of MF Act ( LPC :2/1972) ಪ್ರಕರಣದಲ್ಲಿ LPC ವಾರಂಟ್ ಆಸಾಮಿ ಯಾಗಿರುವ ಕೇರಳ ರಾಜ್ಯದ ಮಲ್ಲಪುರಂ ಜಿಲ್ಲೆಯ ಸಿಆರ್.ಚಂದ್ರನ್ (78 ವರ್ಷ) ಎಂಬುವವರು 55 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರು. ಇವರನ್ನು ಕೇರಳ ರಾಜ್ಯದ ಕ್ಯಾಲಿಕಟ್ ನ ಪುಲ್ಲಿಕಲ್ ಎಂಬಲ್ಲಿ ವಶಕ್ಕೆ…

Read More

ಕನ್ನಡ ಚುಟುಕು ಸಾಹಿತ್ಯ ಅಭಿಯಾನದ 6ನೇ ಕಾರ್ಯಕ್ರಮ.ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಅಭಿಯಾನ ಶ್ಲಾಘನೀಯ- ಸಿಸ್ಟರ್ ಮಾರ್ಸೆಲಿನ್ ಬ್ರಾಗ್ಸ್.

ಬೇಳ :’ಇಂದಿನ ವೇಗದ ಜಗತ್ತಿಗೆ ಚುಟುಕು ಸಾಹಿತ್ಯದ ಅಗತ್ಯ ಇದೆ. ಇಂತಹಾ ಶಿಬಿರಗಳಲ್ಲಿ ಮಕ್ಕಳು ಆಸಕ್ತಿಯಿಂದ ಭಾಗವಹಿಸಬೇಕು. ಕಾಸರಗೋಡಿನ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಈ ಅಭಿಯಾನ ಯೋಜನೆಯು ಶ್ಲಾಘನೀಯ’ ಎಂದು ಬೇಳ ಸಂತ ಬರ್ತಲೋಮೆಯ ಹಿರಿಯ ಬುನಾದಿ ಶಾಲೆಯ ಸಂಚಾಲಕಿ ಸಿಸ್ಟರ್ ಮಾರ್ಸೆಲಿನ್ ಬ್ರಾಗ್ಸ್ ಹೇಳಿದರು. ಅವರು ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ಬೇಳ ಸಂತ ಬರ್ತಲೋಮೆಯ ಹಿರಿಯ ಬುನಾದಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಡೆದ ಕನ್ನಡ…

Read More

ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರೆಂಟ್ ಅಸಾಮಿಯ ಬಂಧನ.

ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರೆಂಟ್ ಅಸಾಮಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಕಾಸರಗೋಡು ಕುಂಬಳೆಯ‌ ಹನೀಫ್ ಎಂದು ಗುರುತಿಸಲಾಗಿದೆ. ಮಂಗಳೂರು ಪೂರ್ವ ಪೊಲೀಸ್ ಠಾಣಾ ಅಕ್ರ: 135/2016 ಕಲಂ 323 324,354& 149 ಐಪಿಸಿ ಪ್ರಕರಣದಲ್ಲಿ ಮಂಗಳೂರಿನ 6ನೇ ಜೆಎಂಎಫ್ ಸಿ ನ್ಯಾಯಾಲಯದ ಸಿ ಸಿ ನಂಬರ್ 1059/2018 ರಂತೆ ವಿಚಾರಣೆಯಲ್ಲಿರುವ ಪ್ರಕರಣದಲ್ಲಿ ನ್ಯಾಯಾಲಯವು ಕಳೆದ ಒಂದು ವರ್ಷದಿಂದ 9 ಬಾರಿ ವಾರೆಂಟ್ ಹೊರಡಿಸಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಈತನ ವಿರುದ್ಧ ನ್ಯಾಯಾಲಯದ…

Read More

ವೆನ್ಲಾಕ್‌ನಲ್ಲಿ ಕರುಣೆಯ ತೊಟ್ಟಿಲು ಉದ್ಘಾಟನೆ.

ಮಂಗಳೂರು: ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ದೂರದ ಊರುಗಳಿಂದ ಬರುವವರ ಅನುಕೂಲಕ್ಕಾಗಿ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನಿಂದ ನಿರ್ಮಿಸಿದ ಕರುಣೆಯ ತೊಟ್ಟಿಲು- ಕ್ಲೋತ್ ಬ್ಯಾಂಕನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿ, ಶುಭ ಹಾರೈಸಿದರು. ಎಂಫೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಚೈರ್‌ಮ್ಯಾನ್ ಝಕರಿಯಾ ಜೋಕಟ್ಟೆ ಮಾತನಾಡಿ, ಟ್ರಸ್ಟ್ ಸ್ಥಾಪನೆಯಾಗಿ ಸುಮಾರು 12 ವರ್ಷಗಳಾಗಿದ್ದು, ಎಂಟು ವರ್ಷಗಳಿಂದ ನಿರಂತರ ವೆನ್ಲಾಕ್ ಆಸ್ಪತ್ರೆ ಒಳರೋಗಿಗಳ ಜೊತೆಗಾರರಿಗೆ ರಾತ್ರಿಯ ಊಟ ವಿತರಿಸುತ್ತಿದೆ. ದಾನಿಗಳ ನೆರವು ಮತ್ತು…

Read More

ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವ – ಕಾಸರಗೋಡು ಕನ್ನಡ ಗ್ರಾಮೋತ್ಸವದ ಪೋಸ್ಟರನ್ನು ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಅವರಿಂದ ಬಿಡುಗಡೆ.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ). ಕನ್ನಡ ಗ್ರಾಮ ,ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು 60 ನೇ ವರ್ಷದ ಜನ್ಮದಿನಾಚರಣೆ , ಮತ್ತು ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆಯುವ ಕಾಸರಗೋಡು ಕನ್ನಡ ಗ್ರಾಮೋತ್ಸವ-2025 ಒಂದು ದಿನ ಕಾರ್ಯಕ್ರಮವು ಕಾಸರಗೋಡು ಕನ್ನಡ ಗ್ರಾಮ ದಲ್ಲಿ 2025 ನವೆಂಬರ್ 04 ಮಂಗಳವಾರದಂದು ಬೆಳಗ್ಗೆ ಗಂಟೆ 11.00 ರಿಂದ ರಾತ್ರಿ 9.00 ರ ತನಕ ಕೇರಳ- ಕರ್ನಾಟಕ ಸಾಹಿತ್ಯ…

Read More

ಅಧಿವೇಶನದಲ್ಲಿ ಭಾಗವಹಿಸದೆ ಇರುವುದು ಮಂಜೇಶ್ವರ ಶಾಸಕರ ಬೇಜವಾಬ್ದಾರಿ ತನ -ಬಿಜೆಪಿ.

ಮೀoಜ: ಮಂಜೇಶ್ವರ ಶಾಸಕರ ಕಪಟ ನಾಟಕ ನಿಲ್ಲಿಸಬೇಕು, ಶಾಸಕರು ಅಧಿವೇಶನದಲ್ಲಿ ಭಾಗವಹಿಸದೆ ಇದ್ದುದ್ದು ಬೇಜವಾಬ್ದಾರಿ ತನದ ಪರಮಾವಧಿ ಅಭಿವೃದ್ಧಿಯಲ್ಲಿ ಮೂಲಭೂತ ಸೌಕರ್ಯ ದಲ್ಲಿ, ಅತಂತ್ಯ ಹಿಂದುಳಿದ ಪ್ರದೇಶವದ ಮಂಜೇಶ್ವರ ವಿ ಸಭಾ ಕೇತ್ರ ದ ಅಭಿವೃದ್ಧಿ ಯ ರೂಪುರೇಷೆ ಸಿದ್ದಪಡಿಸಿ ಅಧಿವೇಶನದಲ್ಲಿ ಭಾಗವಹಿಸಿ ಯೋಜನೆ ಗಳನ್ನು ಅನುಷ್ಠಾನ ಮಾಡಬೇಕಾದ ಶಾಸಕರು ಅಧಿವೇಶನ ದಲ್ಲಿ ಭಾಗವಹಿಸದೆ ಇರುವುದು ಬೇಜವಾಬ್ದಾರಿ, ಮಂಜೇಶ್ವರ ದಲ್ಲಿ ಬಂದು ಕಪಟ ನಾಟಕ ಹೋರಾಟ ಮಾಡುವುದು ನಿಲ್ಲಿಸಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾ ಉಸ್ತುವಾರಿ ನ್ಯಾ ಸಜೀವನ್…

Read More

ಅಕ್ಟೋಬರ್ 25 ರಂದು 4ನೇ ದುಬೈ ಗಡಿನಾಡ ಉತ್ಸವ : ಲೋಗೋ ಬಿಡುಗಡೆ.

ದುಬೈ : 2025 ರ ಅಕ್ಟೋಬರ್ 25ರಂದು ದುಬೈನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯು ಎ ಇ ಘಟಕದ ವತಿಯಿಂದ ನಡೆಯುವ 4ನೇ “ದುಬೈ ಗಡಿನಾಡ ಉತ್ಸವ”ದ ಲೋಗೋ ವನ್ನು ಅಬೂಹೈಲ್ ಸ್ಪೋರ್ಟ್ಸ್ ಬೈ ನಲ್ಲಿ ನಡೆದ ಸಮಾರಂಭದಲ್ಲಿ ದುಬೈನ ಹಿರಿಯ ಉದ್ಯಮಿ,ಸಮಾಜ ಸೇವಕ, ಕಲಾ ಪೋಷಕ ಜೇಮ್ಸ್ ಮೆಂಡೋನ್ಸ ಬಿಡುಗಡೆ ಗೊಳಿಸಿದರು. ನಂತರ ಮಾತನಾಡುತ್ತಾ ಕಳೆದ ಮೂರು ವರ್ಷಗಳಿಂದ ದುಬೈ ಗಡಿನಾಡ ಉತ್ಸವ ಕಾರ್ಯಕ್ರಮವನ್ನು ನೋಡುತ್ತಾ ಬಂದಿದ್ದೇನೆ.ನಾಲ್ಕನೇ ವರ್ಷದ ಕಾರ್ಯಕ್ರಮದ ಕ್ಷಣಗಣನೆಯಲ್ಲಿ ನೀವೆಲ್ಲ ಇದ್ದಿರಿ.ಒಂದು…

Read More

ಕಣ್ಣೂರಿನ ಎಟ್ಟಿಕುಳಂನಲ್ಲಿ ಸೆಪ್ಟೆಂಬರ್ 23 ರಿಂದ 25ರ ತನಕ ತಾಜುಲ್ ಉಲಮಾ 12ನೇ ಉರೂಸ್.

ಮಂಗಳೂರು: ಮದನಿ ದರ್ಗಾ ಶರೀಫನ್ನು ಕೇಂದ್ರೀಕರಿಸಿ ಕರ್ನಾಟಕದಲ್ಲಿ ಸುಮಾರು 70 ವರ್ಷಗಳ ಕಾಲ ಧಾರ್ಮಿಕ ನೇತೃತ್ವ ವಹಿಸಿದ, ಕನ್ನಡ ನಾಡಿನ ಸಹಸ್ರಾರು ಉಲಮಾಗಳ ಪ್ರೀತಿಯ ಗುರುವರ್ಯರೂ, ವಿದ್ವತ್ತು, ಆರಾಧನೆಗಳಲ್ಲಿ ಶತಮಾನ ಕಂಡ ಅತಿ ಶ್ರೇಷ್ಠರೂ ಆದ ಉಳ್ಳಾಲ ತಂಙಳ್, ಎಂದೇ ಖ್ಯಾತರಾಗಿದ್ದ ಶೈಖುನಾ ತಾಜುಲ್ ಉಲಮಾ ಸಯ್ಯದ್ ಅಬ್ದುರ್ರಹಮಾನ್ ಅಲ್ ಬುಖಾರಿ(ಖ.ಸಿ)ರವರ 12ನೇ ಉರೂಸ್ ಸಮಾರಂಭವುಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕುಳಂನಲ್ಲಿ ಸೆಪ್ಟೆಂಬರ್ 23,24,25 ದಿನಾಂಕಗಳಲ್ಲಿ ನಡೆಯಲಿದೆ ಎಂದು ಮದನೀಸ್ ಕೇಂದ್ರ ಸಮಿತಿಯ ಕಾರ್ಯದರ್ಶಿಯಾದ ಬಶೀರ್ ಮದನಿ ಕೂಳೂರು…

Read More

ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ವಿದ್ಯಾರ್ಥಿ ಒಕ್ಕೂಟಗಳು ಲಾ-ಕಾಲೇಜು ವಿದ್ಯಾರ್ಥಿಗಳ ಸಹಯೋಗದೊಂದಿಗೆ ಏಕದಿನ ಸೂಚನಾ ಮುಷ್ಕರ ಹಾಗೂ ಸಹಿ ಸಂಗ್ರಹ ಅಭಿಯಾನ.

ಮಂಜೇಶ್ವರ – ತೌಡುಗೋಳಿ ರಸ್ತೆಯು ರಾಷ್ಟ್ರೀಯ ಹೆದ್ದಾರಿ 66ನ್ನು ಸಂಪರ್ಕಿಸುವ, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಲಾ-ಕಾಲೇಜು, ಹಾರ್ಬರ್ ಆಫೀಸ್ ಜನಸಾಮಾನ್ಯರು ಸೇರಿದಂತೆ ಅತೀ ಹೆಚ್ಚು ಜನ ಬಾಹುಲ್ಯವಿರುವ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಜಂಕ್ಷನ್‌ನಲ್ಲಿ ಅತ್ಯಗತ್ಯವಾಗಿರುವ, ಫೂಟ್ ಓವರ್ ಬ್ರಿಡ್ಜ್ ಸ್ಥಾಪನೆಗಾಗಿ ಕಳೆದ ಒಂದೂವರೆ ವರ್ಷಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆಯಾದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಹೋರಾಟ ಸಮಿತಿಯ ನೇತೃತ್ವದಲ್ಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿದ್ದು ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಸಂಬಂಧ ಪಟ್ಟ ಇಲಾಖೆಗೆ ನ್ಯಾಯಾಲಯ…

Read More

ಸರ್ಕಾರಿ ಲೋವರ್ ಪ್ರೈಮರಿ ಶಾಲೆ (GLPS) ಬಡಾಜೆಯ 2025-26 ನೇ ಸಾಲಿನ ವಾರ್ಷಿಕ ಕ್ರೀಡೋತ್ಸವ.

ಬಡಾಜೆ: ಸರ್ಕಾರಿ ಲೋವರ್ ಪ್ರೈಮರಿ ಶಾಲೆ (GLPS) ಬಡಾಜೆಯ 2025-26 ನೇ ಸಾಲಿನ ವಾರ್ಷಿಕ ಕ್ರೀಡೋತ್ಸವವನ್ನು ಶಾಲಾ ಮೈದಾನದಲ್ಲಿ ಉತ್ಸಾಹಭರಿತವಾಗಿ ಆಚರಿಸಲಾಯಿತು. ಬೆಳಗ್ಗೆ 10.30 ಗಂಟೆಗೆ ಅಬ್ದುಲ್ ರಹಿಮಾನ್ ಮಜ್ಮ ಧ್ವಜಾರೋಹಣ ಮಾಡುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು ಶಾಲೆಯ ಮುಖ್ಯೋಪಾಧ್ಯಾಯರಾದ ಹರಿಣಾಕ್ಷಿ ಟೀಚರ್ ಕ್ರೀಡೋತ್ಸವವನ್ನು ಉದ್ಘಾಟಿಸಿದರು. ವಾರ್ಡ್ ಸದಸ್ಯರಾದ ಯಾದವ್ ಬಡಾಜೆ, ಪಿಟಿಎ ಅಧ್ಯಕ್ಷ ಯಾಕೂಬ್, ನೂರನೇ ವರ್ಷದ ಸಮಿತಿಯ ಅಧ್ಯಕ್ಷ ರಝಾಕ್ ಕಿಟ್ಟಗುಂಡಿ, ಕಾರ್ಯದರ್ಶಿ ಮುಸ್ತಫಾ ಕೋಡಿ, ಯವರು ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ…

Read More
error: Content is protected !!