Avatar

Shramitha bejja

ಪಂಜಾಬ್ ಪ್ರವಾಹ ಸಂತ್ರಸ್ತರಿಗೆ ನೆರವಿಗೆ ಕೋರಿ ಮಂಗಳೂರಿನ ಸಿಖ್ ಸಮುದಾಯದ ವತಿಯಿಂದ ನಾಳೆ ದೇಣಿಗೆ ಸಂಗ್ರಹಣೆ ಅಭಿಯಾನವು ನಡೆಯಲಿದೆ – ಕಮಲ್ ಜಿತ್ ಸಿಂಗ್

ಕಾಸರಗೋಡು: ಪಂಜಾಬ್ ಪ್ರವಾಹ ಸಂತ್ರಸ್ತರಿಗೆ ನೆರವಿಗೆ ಕೋರಿ ಮಂಗಳೂರಿನ ಸಿಖ್ ಸಮುದಾಯದ ವತಿಯಿಂದ ನಾಳೆ ಬೆಳ್ಳಿಗೆ 10 ರಿಂದ 5 ಗಂಟೆಯ ತನಕ ಕೊಟ್ಟಾರ ಚೌಕಿಯಲ್ಲಿ ದೇಣಿಗೆ ಸಂಗ್ರಹಣೆ ಅಭಿಯಾನವು ನಡೆಯಲಿದೆ ಎಂದು ಕಮಲ್ ಜಿತ್ ಸಿಂಗ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಸುಖ್ವಿಂದರ್ ಸಿಂಗ್ , ಇಂದು ಪಂಜಾಬ್ ರಾಜ್ಯದಲ್ಲಿ ತೀವ್ರ ಪ್ರವಾಹದ ಪರಿಣಾಮ ಸಾವಿರಾರು ಕುಟುಂಬಗಳು ತಮ್ಮ ಮನೆ, ಹೊಲ ಹಾಗೂ ಜೀವನೋಪಾಯ ಕಳೆದುಕೊಂಡಿವೆ. ಬೆಳೆಗಳು, ಜಾನುವಾರುಗಳು ಹಾಗೂ ಆಸ್ತಿ-ಪಾಸ್ತಿಗಳು…

Read More

ಕಾಸರಗೋಡು ಕನ್ನಡ ಗ್ರಾಮೋತ್ಸವ 2025 ನವಂಬರ್ 4ಕ್ಕೆ

ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮ ದಿನಾಚರಣೆ – ಜನ್ಮ ವರ್ಷಾಚರಣೆ ,ಅಭಿನಂದನಾ ಕಾರ್ಯಕ್ರಮವನ್ನು ಕೇರಳ – ಕರ್ನಾಟಕ ಸಾಹಿತ್ಯ, ಸಾಂಸ್ಕೃತಿಕ ಉತ್ಸವವನ್ನಾಗಿಸಿ ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ – ‘ಕಾಸರಗೋಡು ಕನ್ನಡ ಗ್ರಾಮೋತ್ಸವ ‘2025 ಎಂಬ ಶೀರ್ಷಿಕೆಯ…

Read More

ಮಂಜೇಶ್ವರದಲ್ಲಿ ಮಿನಿ ಹೈ ಮಾಸ್ಟ್ ಲೈಟ್ ಉದ್ಘಾಟನೆ ವಿಳಂಬ – ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ.

ಮಂಜೇಶ್ವರ: ಮಂಜೇಶ್ವರ ಕಣ್ಣೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು ಮುಂಭಾಗದಲ್ಲಿ ಶಾಸಕರ ನಿಧಿಯಿಂದ ನಿರ್ಮಿಸಲಾಗಿರುವ ಮಿನಿ ಹೈ ಮಾಸ್ಟ್ ಲೈಟ್ ವರ್ಷಗಳಾಗಿ ಸ್ಥಾಪನೆಯಾಗಿದ್ದು, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ತಾಂತ್ರಿಕ ಕಾಮಗಾರಿಗಳು ಪೂರ್ಣಗೊಂಡಿರುವಂತೆಯೇ, ಇನ್ನೂ ಅಧಿಕೃತವಾಗಿ ಉದ್ಘಾಟನೆಯಾಗದೇ ಇರುವುದು ಸ್ಥಳೀಯರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪ್ರದೇಶವಾಸಿಗಳ ಹೇಳಿಕೆಯಂತೆ ಈ ಲೈಟ್ ಯೋಜನೆಗೆ ಸುಮಾರು 2 ಲಕ್ಷ ರೂ. ವೆಚ್ಚವಾಗಿದ್ದು, ಬಹುತೇಕ ವರ್ಷದ ಹಿಂದೆ ಕಾಮಗಾರಿ ಪೂರ್ಣಗೊಂಡಿದ್ದರೂ ಈಗಾಗಲೇ ಉದ್ಘಾಟನೆಯಿಲ್ಲದ ಕಾರಣ ಅದು ‘ಊಟಕ್ಕಿಲ್ಲದ ಉಪ್ಪಿನಕಾಯಿ’ ಎಂಬಂತಾಗಿದೆ. ಇದರ ಪರಿಣಾಮವಾಗಿ…

Read More

ಸೆಪ್ಟೆಂಬರ್ 18 ಮತ್ತು 19 ರಂದು ಮಂಗಳೂರಿನ ಟೌನ್ ಹಾಲ್‌ನಲ್ಲಿ ಎರಡು ದಿನಗಳ ಮಾರಾಟಗಾರರ ಅಭಿವೃದ್ಧಿ ವಿಚಾರ ಸಂಕೀರಣ ಕಾರ್ಯಕ್ರಮ.

ಮಂಗಳೂರು: ಭಾರತ ಸರ್ಕಾರದ ಎಂಎಸ್‌ಎಂಇ ಸಚಿವಾಲಯದ ಶಾಖೆ , ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ ಮಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಬೈಕಂಪಾಡಿ, ಮಂಗಳೂರು, ಕೆನರಾ ಕೈಗಾರಿಕಾ ಸಂಘ ಮಂಗಳೂರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗಳ ಸಹಯೋಗದೊಂದಿಗೆ ಸೆಪ್ಟೆಂಬರ್ 18 ಮತ್ತು 19 ರಂದು ಮಂಗಳೂರಿನ ಟೌನ್ ಹಾಲ್‌ನಲ್ಲಿ ಎರಡು ದಿನಗಳ ಮಾರಾಟಗಾರರ ಅಭಿವೃದ್ಧಿ ವಿಚಾರ ಸಂಕೀರಣ ಕಾರ್ಯಕ್ರಮವನ್ನು ಆಯೋಜಿಸಲಾಗುವುದೆಂದು ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ಸುಂದರ್ ಎಸ್…

Read More

ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೃಹತ್ ಪ್ರತಿಭಟನಾ ಸಭೆ.

ಮಂಗಳೂರು: ಮದ್ದೂರಿನ ಗಣೇಶ ವಿಸರ್ಜನೆ ಸಮಯದಲ್ಲಿ ಮುಸ್ಲಿಂ ರಿಂದ ಕಲ್ಲು ತೂರಾಟದ ವಿರುದ್ಧ ಹಾಗೂ ರಾಜ್ಯದಾದ್ಯಂತ ಗಣೇಶ ವಿಸರ್ಜನೆಗೆ ತಡೆ ಒಡ್ಡುತ್ತಿರುವುದು ಹಾಗೂ ಪ್ರಾಂತ್ಯದ ಅನೇಕ ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳ ಪ್ರವೇಶಕ್ಕೆ ನಿಷೇಧ ಒಡ್ಡುತ್ತಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಿನಿ ವಿಧಾನಸೌಧದ ಮುಂಭಾಗ, ಮಂಗಳೂರು ಇಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು .

Read More

ಧರ್ಮಸ್ಥಳ ಪ್ರಕರಣ .ಬೆಳ್ತಂಗಡಿ ಎಸ್ಐಟಿ ಕಚೇರಿಗೆ ತೆರಳಿ ದೂರು ನೀಡಿದ ಮಹೇಶ್ ಶೆಟ್ಟಿ ತಿಮರೋಡಿ.

ಧರ್ಮಸ್ಥಳ ಗ್ರಾಮಕ್ಕೆ ಸೇರಿದ ವಿವಿಧ ವಸತಿ ಗೃಹಗಳಲ್ಲಿ 2006 ರಿಂದ 2010 ರ ಅವಧಿಯಲ್ಲಿ ಸಂಭವಿಸಿದ ನಾಲ್ಕು “ಅಪರಿಚಿತ ಸಾವುಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದಿದೆ.‌ಇವು ಸಂಭಾವ್ಯ ಕೊಲೆ ಪ್ರಕರಣಗಳಾಗಿರುವುದರಿಂದ ಎಸ್ ಐಟಿ ತಕ್ಷಣ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಸೌಜನ್ಯ ಪರ ಹೋರಾಟಗಾರ ಮಹೇಶ ಶೆಟ್ಟಿ ತಿಮರೋಡಿ ಎಸ್.ಐ.ಟಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ಗುರುವಾರ ರಾತ್ರಿ ಬೆಳ್ತಂಗಡಿ ಎಸ್ ಐಟಿ ಕಛೇರಿಗೆ ಮಹೇಶ್ ಶೆಟ್ಟಿಯವರು ಭೇಟಿ ನೀಡಿದ್ದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳನ್ನು…

Read More

ಮಾಧವಿ ಅಪಘಾತ ಸಾವಿಗೆ ಹೆದ್ದಾರಿ ಪ್ರಾಧಿಕಾರವೇ ಕಾರಣ – ಬಿಕೆ ಇಮ್ಮಿಯಾಜ್

ಮಂಗಳೂರು: ನಂತೂರಿನಿಂದ ಸುರತ್ಕಲ್ ವರೆಗಿನ ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರಕ್ಕೆ ಸಂಪೂರ್ಣ ಅಯೋಗ್ಯವಾಗಿದೆ ಹೆದ್ದಾರಿ ಪೂರ್ತಿ ಬೃಹತ್ ಗುಂಡಿಗಳು ನಿರ್ಮಾಣಗೊಂಡಿದೆ. ದ್ವಿಚಕ್ರ ವಾಹನ ಸವಾರರು ದಿನನಿತ್ಯ ಅಪಘಾತಕ್ಕೊಳಗಾಗಿ ಸಾವಿಗೀಡಾಗುತ್ತಿದ್ದಾರೆ .ಹೆದ್ದಾರಿ ಪ್ರಾಧಿಕಾರ ಮತ್ತು ನಮ್ಮ ಜನಪ್ರತಿನಿದಿನಗಳು ಗಾಢ ನಿದ್ರೆಯಲ್ಲಿದ್ದಾರೆ ಎಂದು ಡಿವೈಎಫ್‌ಐ ದ.ಕ ಜಿಲ್ಲಾಧ್ಯಕ್ಷ ಬಿ.ಕೆ ಇಮಿಯಾಜ್ ಹೇಳಿದರು. ಅವರು ಇಂದು ಕುಳೂರು ಜಂಕ್ಷನ್ ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹೆದ್ದಾರಿ ಗುಂಡಿಯಿಂದಾಗಿ ಅಪಘಾತಾಕ್ಕೊಳಗಾಗಿ ಸಾವನ್ನಪ್ಪಿದ ಮಾಧವಿ ಕುಟುಂಬಕ್ಕೆ ಗರಿಷ್ಠ ಪರಿಹಾರಕ್ಕೆ ಒತ್ತಾಯಿಸಿ, ಹೆದ್ದಾರಿ ಗುಂಡಿ…

Read More

ರಾಮಕ್ಷತ್ರಿಯ ಮಹಿಳಾ ಯಕ್ಷವೃಂದ ಜೆಪ್ಪು ಮಂಗಳೂರು ಸ0ಯುಕ್ತ ಆಶ್ರಯದಲ್ಲಿ ನಡೆದ ನುಡಿ ನಮನ, ಕೃತಿ ಬಿಡುಗಡೆ ಸಂಸ್ಮರಣೆ.

ಪರರ ಸೇವೆ ದೇವರ ಸೇವೆ ಎಂಬ ಧ್ಯೇಯವನ್ನು ತನ್ನದಾಗಿಸಿಕೊಂಡು ಬಾಳನ್ನು ಸಾಗಿಸಿದ್ದ ಶ್ರೀಮತಿ ದಿ. ಗಾಯತ್ರಿ ನಾಗೇಶ್ ರಾಮಕ್ಷತ್ರಿಯ ಸಮಾಜದ ಅಭಿಮಾನದ ಪುತ್ರಿ ಬಹುಮುಖ ಪ್ರತಿಭೆಯ ಗಾಯತ್ರಿ ಇವರ ವೈಕುಂಠ ಸಮಾರಾಧನೆ ಕ್ರಿಯೆಯ ದಿನದಂದು ಪೂರ್ವಾಹ್ನ 11.00 ರ ವೇಳೆಗೆ ಮಂಗಳೂರು ಶರವು ದೇವಸ್ಥಾನದ ಸಮೀಪವಿರುವ ಬಾಳಂಭಟ್ ರಾಧಾಕೃಷ್ಣ ಸಭಾಂಗಣದಲ್ಲಿ ಮರೆಯಲಾಗದವರು ವ್ಯಕ್ತಿ ಚಿತ್ರಣ ಕೃತಿ ಕನ್ನಡ ಭವನ ಪ್ರಕಾಶನ ಕಾಸರಗೋಡು, ಇದರ ಸಂಸ್ಥಾಪಕ ಅಧ್ಯಕ್ಷರು ಸಂಚಾಲಕರು ಆಗಿರುವಂತಹ ಡಾ. ವಾಮನ್ ರಾವ್ ಬೇಕಲ್ ಇವರ ನೇತೃತ್ವದಲ್ಲಿ…

Read More

ಸೆ. 14 ರಂದು ಸಾರ್ವಜನಿಕ ಮಸೀದಿ ದರ್ಶನ ಕುದ್ರೋಳಿ ಜಾಮಿಯಾ ಮಸೀದಿ ನೋಡ ಬನ್ನಿ ಕಾರ್ಯಕ್ರಮ

ಮಂಗಳೂರು: ಪ್ರವಾದಿ ಮುಹಮ್ಮದರು ಜನಿಸಿ 1500 ವರ್ಷಗಳೇ ಕಳೆದಿವೆ ಮತ್ತು ಇಸ್ಲಾಮ್ ಭಾರತಕ್ಕೆ ಆಗಮಿಸಿ ಸಾವಿರ ವರ್ಷಗಳೇ ಕಳೆದಿವೆ. ಆದರೆ ಮುಸ್ಲಿಮರ ಧರ್ಮ ಗ್ರಂಥ ಕು‌ ಆನ್ ಅದರ ಆರಾಧನಾ ಕೇಂದ್ರವಾಗಿರುವ ಮಸೀದಿಗಳು, ನಮಾಝ್, ಅದಾನ್ ಇತ್ಯಾದಿಗಳು ಈ ದೇಶಕ್ಕೆ ತೆರೆದುಕೊಂಡಿರುವುದು ಬಹಳ ಕಡಿಮೆ. ಇದರಿಂದಾಗಿ ಸಮಾಜದಲ್ಲಿ ಮಸೀದಿಗಳ ಬಗ್ಗೆ, ಮುಸ್ಲಿಮರ ಬಗ್ಗೆ ಅವರ ಕುರ್ ಆನಿನ ಬಗ್ಗೆ ಮತ್ತು ಆಚಾರ ವಿಚಾರಗಳ ಬಗ್ಗೆ ಹಲವು ಅನುಮಾನ, ಕುತೂಹಲಗಳು ಇರುವುದು ಸಹಜವಾಗಿದೆ. ಆದ್ದರಿಂದಲೇ ಪ್ರವಾದಿ ಜನಿಸಿದ ಈ…

Read More

“ಜಿಲ್ಲೆಯಲ್ಲಿ ಡಿಜೆ, ಮೈಕ್ ನಿರ್ಬಂಧಕ್ಕೆ ಹಿಂದೂ ಸಂಘಟನೆಗಳೇ ನೇರ ಕಾರಣ-ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಡಿಜೆ , ಮೈಕ್ , ಮೆರವಣಿಗೆಗೆ ಪೊಲೀಸ್ ಇಲಾಖೆ ವಿಧಿಸಿರುವ ನಿರ್ಬಂಧಗಳಿಂದ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಾ ಇದೆ . ಈ ನಿರ್ಬಂಧಗಳಿಗೆ ಕಾರಣ ಹಿಂದೂಪರ ಸಂಘನೆ ಆಗಿದೆ . ಜಿಲ್ಲೆಯ ಶಾಂತಿ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಪೊಲೀಸ್ ಅಧಿಕಾರಿಗಳು ಈ ರೀತಿಯ ನಿಯಮವನ್ನು ಕೈಗೊಂಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ತಿಳಿಸಿದರು . ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ದಕ್ಷಿಣ…

Read More
error: Content is protected !!