ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ‘ಎಸ್.ಐ.ಆರ್’ (S.I.R) ಮಹಾ ಅಭಿಯಾನ: ಬಿರುಸಿನ ಮನೆ-ಮನೆ ಸಂಪರ್ಕ ನಡೆಸಿದ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ‘ಎಸ್.ಐ.ಆರ್ (S.I.R) ಮಹಾ ಅಭಿಯಾನ’ದ ಅಂಗವಾಗಿ ವಿಧಾನ ಪರಿಷತ್ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ವಿವಿಧ ಬೂತ್‌ಗಳಿಗೆ ತೆರಳಿ ಬಿರುಸಿನ ಮನೆ-ಮನೆ ಸಂಪರ್ಕ ಹಾಗೂ ಪಕ್ಷದ ಪ್ರಮುಖರ ಭೇಟಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು. ಪ್ರಮುಖರ ಮನೆಗೆ ಭೇಟಿ ಹಾಗೂ ಸಮಾಲೋಚನೆ:ಅಭಿಯಾನದ ಅಂಗವಾಗಿ ಅದ್ಯಪಾಡಿ ಶಕ್ತಿ ಕೇಂದ್ರದ ಬೂತ್ ಸಂಖ್ಯೆ 174 ಹಾಗೂ 175 ರಲ್ಲಿ ಶಾಸಕರು ವ್ಯಾಪಕ ಸಂಚಾರ…

Read More

ಲಾವಣ್ಯ ಹತ್ಯೆ ಪ್ರಕರಣ: ಆರೋಪಿಗೆ ಜಾಮೀನು ನೀಡದೆ ಕಠಿಣ ಶಿಕ್ಷೆ ವಿಧಿಸಬೇಕು – ಕಾಂಗ್ರೆಸ್ ಮುಖಂಡೆ ಎಸ್. ಅಪ್ಪಿ

ಮಂಗಳೂರು:ಬಿ.ಸಿ.ರೋಡ್‌ನಲ್ಲಿ ನಡೆದ ಯುವತಿ ಲಾವಣ್ಯ ಹತ್ಯೆ ಪ್ರಕರಣದ ಆರೋಪಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷರಾದ ಎಸ್ ಅಪ್ಪಿ ಆಗ್ರಹಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಮೇಲಿನ ನಿರಂತರ ಹಿಂಸಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿವೆ. ಲಾವಣ್ಯ ಹತ್ಯೆ ಪ್ರಕರಣ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದು, ಮಹಿಳೆಯರು ಹಾಗೂ ಪೋಷಕರಲ್ಲಿ ತೀವ್ರ…

Read More

ನಿಟ್ಟೆ ಶಾಲೆಯಲ್ಲಿ ಮಾದಕ ದ್ರವ್ಯ ಜಾಗೃತಿ ಅಭಿಯಾನ: ವಿದ್ಯಾರ್ಥಿಗಳಿಗೆ ಪೊಲೀಸ್ ಅರಿವು

ಡಾ ll. ಎನ್. ಎಸ್. ಎ. ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆ, ನಿಟ್ಟೆ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಇವರ ಸಂಯುಕ್ತ ಆಶ್ರಯದಲ್ಲಿ ಮಾದಕ ದ್ರವ್ಯ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು  ಸಂಭ್ರಮ ಶನಿವಾರ ( ಬ್ಯಾಗ್ ರಹಿತ ದಿನ) ವಾಗಿ ಶಾಲೆಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮಮವನ್ನು ಉದ್ಘಾಟನೆ ಮಾಡಿದ ಕಾರ್ಕಳ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಪ್ರಸನ್ನ ಎಂ. ಎಸ್. ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು, ಹಾಗೂ…

Read More

ದಕ್ಷಿಣ ಕನ್ನಡ ಜಿಲ್ಲಾ ಖಾಝಿಯಾಗಿ ಪಾಣಕ್ಕಾಡ್ ಸಯ್ಯದ್ ನಾಸಿರ್ ಅಬ್ದುಲ್ ಹಯ್ಯ ಶಿಹಾಬುದ್ದೀನ್ ತಂಙಳ್ ನೇಮಕ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಅವರ ನಿಧನದಿಂದ ತೆರವಾದ ಜಿಲ್ಲಾ ಖಾಝಿ ಸ್ಥಾನಕ್ಕೆ ಪಾಣಕ್ಕಾಡ್ ಸಯ್ಯದ್ ನಾಸಿರ್ ಅಬ್ದುಲ್ ಹಯ್ಯ ಶಿಹಾಬುದ್ದೀನ್ ತಂಙಳ್ ಬಾ-ಅಲವಿ ಅವರನ್ನು ನೂತನ ಜಿಲ್ಲಾ ಖಾಝಿಯಾಗಿ ನೇಮಕ ಮಾಡಲಾಗಿದೆ ಎಂದು ಸ್ವಾಗತ ಸಮಿತಿಯ ಉಪಾಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ. ಅಶ್ರಫ್ ತಿಳಿಸಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಜಿಲ್ಲಾ ಖಾಝಿಯವರ ಸ್ವೀಕಾರ ಸಮಾರಂಭವು…

Read More

10ನೇ ತರಗತಿವರೆಗೆ ಶಾಲೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಜಂಕ್ ಫುಡ್‌ಗೆ ನಿಷೇಧ: ಯು.ಟಿ. ಖಾದರ್

ಮಂಗಳೂರು: ಬರ್ಗರ್, ಪಿಜ್ಜಾ ಸೇರಿದಂತೆ ಜಂಕ್ ಫುಡ್‌ಗಳಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, 10ನೇ ತರಗತಿವರೆಗಿನ ಶಾಲೆಗಳು ಹಾಗೂ ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ಇಂತಹ ಆಹಾರಗಳ ಮಾರಾಟವನ್ನು ನಿಷೇಧಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಅಭಿವೃದ್ಧಿ ಮತ್ತು ಕುಂದುಕೊರತೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಆಹಾರ ಸುರಕ್ಷತೆ ವ್ಯವಸ್ಥೆಯನ್ನು ಬಲಪಡಿಸಲು ಬೆಂಗಳೂರಿನ ಆಹಾರ ಪರೀಕ್ಷಾ…

Read More

ಸಂತ ಅಲೋಶಿಯಸ್ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ಕೃಷಿ ಪಾಠ

ಮಂಗಳೂರು: ಪಾಠದ ಜೊತೆಗೆ ಕೃಷಿ ಮತ್ತು ಗದ್ದೆ ನಾಟಿಯ ಕುರಿತು ಅರಿವು ಮೂಡಿಸುವ ವಿಶಿಷ್ಟ ಕಾರ್ಯಕ್ರಮವು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಕಾಲೇಜಿನ ವಿದ್ಯಾರ್ಥಿಗಳಿಗೆ ಕಟೀಲು ಸಮೀಪದ ಮಾರಡ್ಕ ದಲ್ಲಿ ಕೃಷಿಕ ಜಯ ಪೂಜಾರಿ ಯವರ ಗದ್ದೆಯಲ್ಲಿ ಲೂಕಸ್ ಸಲ್ದಾನ ಹಾಗೂ ಸತೀಶ್ ಸಲ್ದಾನ ರವರ ಸಹಕಾರದೊಂದಿಗೆ ಏರ್ಪಡಿಸಲಾಗಿತ್ತು. ಗದ್ದೆ ನಾಟಿಯ ವಿಧಾನ ಗಳು, ಪಾಡ್ದನ ಹಾಡುಗಳು, ಗದ್ದೆಗಳಲ್ಲಿ ಆಚರಿಸುವ ಸಾಂಪ್ರದಾಯಿಕ ಕ್ರಮಗಳು,ಕೃಷಿಯ ಬಗೆಗಿನ ಅರಿವು ಹಾಗೂ ರೈತರ ಶ್ರಮದ ಜೊತೆಗೆ ರೈತರು ಸಮಾಜಕ್ಕೆ ನೀಡುವ…

Read More

ಕುತ್ತಾರು: ಸನಾತನ ಹಿಂದು ಸೇವಾ ಪ್ರತಿಷ್ಠಾನ ವತಿಯಿಂದ ಬಾಲ ಸಂರಕ್ಷಣಾ ಕೇಂದ್ರ, ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ವನಮಹೋತ್ಸವ

ಸನಾತನ ಹಿಂದು ಸೇವಾ ಪ್ರತಿಷ್ಠಾನ ವತಿಯಿಂದ ಕುತ್ತಾರು: ಬಾಲ ಸಂರಕ್ಷಣಾ ಕೇಂದ್ರ, ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ವನಮಹೋತ್ಸವನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಚೌಟ ಕಕ್ಕೆಮಜಲು ಅವರು ಕೇಂದ್ರದ ಉದ್ಯಾನದಲ್ಲಿ ಗಿಡನೆಟ್ಟು ಮಾತನಾಡಿದ ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯವಾಗಿದ್ದು ಪರಿಸರ ರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಸುಂದರ ವಾತಾವರಣ ನಿರ್ಮಿಸಿಕೊಡೋಣ ಎಂದರು.ಕೋಶಾಧಿಕಾರಿ ಸುನಿಲ್ ಮಾತನಾಡಿ ನೂತನ ಪ್ರತಿಷ್ಠಾನದ ಮೂಲಕ ಬಹಳಷ್ಟು ಸೇವೆಗಳನ್ನು ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಅನೇಕ ಸೇವಾ ಚಟುವಟಿಕೆ ನಡೆಸಲಿದ್ದೇವೆ. ಬಡವರಿಗೆ ಸಹಕಾರ, ತೊಂದರೆ…

Read More

ಸಾಹಿತ್ಯ ಮತ್ತು ಶಿಕ್ಷಣದ ಮೂಲಕವೇ ಸಂಸ್ಕಾರಯುತ ನಾಗರಿಕ ಸಮಾಜ ನಿರ್ಮಾಣ – ಸಾಹಿತಿ ಚಂದ್ರಕಲಾ ನಂದಾವರ ಮಂಗಳೂರು ಮಿತ್ರ ಮಂಡಳಿಯ ಪುನಶ್ಚೇತನಕ್ಕೆ ಚಾಲನೆ

ಮಂಗಳೂರಿನ ಕೋರ್ಟ್ ಗುಡ್ಡೆಯ ಆಲದ ಮರದಡಿಯಲ್ಲಿ ಸಮಾನ ಸಾಹಿತ್ಯಾಸಕ್ತರು, ಕನ್ನಡ ಭಾಷಾ ಪಂಡಿತರ ಸಾಹಿತ್ಯ ಚರ್ಚೆಯಲ್ಲಿ ಆರಂಭವಾದ ಮಿತ್ರ ಮಂಡಳಿ ಸಾಹಿತ್ಯ ಲೋಕಕ್ಕೆ ದಿಗ್ಗಜ ಸಾಹಿತಿಗಳನ್ನು ನೀಡಿದೆ. ಮಿತ್ರ ಮಂಡಳಿಯಿಂದ ಬಿಡುಗಡೆಯಾದ ಪುಸ್ತಕಗಳು ಚರಿತ್ರೆಯ ಪುಟಗಳಲ್ಲಿ ಶ್ರೇಷ್ಟ ಸಾಹಿತ್ಯ ಪ್ರಕಾರಗಳಾಗಿ ದಾಖಲಾಗಿವೆ. ಇದರಲ್ಲಿ ಕೆನರಾ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರ, ವಿದ್ಯಾರ್ಥಿಗಳ ಕೊಡುಗೆ ದೊಡ್ಡದಿದೆ. ಆ ನಿಟ್ಟಿನಲ್ಲಿ ಮಿತ್ರ ಮಂಡಳಿಯನ್ನು ಮತ್ತೇ ಪುನರುಜ್ಜೀನವನಗೊಳಿಸುವ ಕಾರ್ಯವನ್ನು ಕೆನರಾ ಶಿಕ್ಷಣ ಸಂಸ್ಥೆ ಮಾಡಿರುವುದು ಉತ್ತಮ ಹೆಜ್ಜೆ ಎಂದು ಖ್ಯಾತ ಸಾಹಿತಿ ಚಂದ್ರಕಲಾ…

Read More

ಬಜಪೆಯಲ್ಲಿ ಗಿಡ ನೆಡುವ ಮೂಲಕ ಬ್ಯಾಂಕ್ ರಾಷ್ಟ್ರೀಕರಣದ 58ನೆ ವಾರ್ಷಿಕ ದಿನಾಚರಣೆ

ಮಂಗಳೂರು; ಜುಲೈ1969 19ರಂದು ದೇಶದ 14 ಪ್ರಮುಖ ಖಾಸಗಿ ಬ್ಯಾಂಕು‌ಗಳನ್ನುರಾಷ್ಟ್ರೀಕರಣಗೊಳಿಸಲಾಯಿತು. ಈ ಐತಿಹಾಸಿಕ ನಿರ್ಧಾರವು ದೇಶದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯನ್ನು ತಂದಿತು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು “ವರ್ಗ ಬ್ಯಾಂಕಿಂಗ್’ನಿಂದ “ಜನಸಾಮಾನ್ಯರ ಬ್ಯಾಂಕಿಂಗ್” ಆಗಿ ಪರಿವರ್ತಿಸಿತು ಎಂದು ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟದ ಹಿರಿಯ ಉಪಾಧ್ಯಕ್ಷರಾದ ಶಿವರಾಮ ಆಳ್ವ ತಿಳಿಸಿದ್ದಾರೆ. ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟ ದ ವತಿಯಿಂದ ಬ್ಯಾಂಕ್ ರಾಷ್ಟ್ರೀಕರಣದ ದಿನದ 58ನೆ ವರ್ಷಾರಣೆಯ…

Read More

ವೃತ್ತಿಪರ ಸೌಂದರ್ಯ ತರಬೇತಿಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಬ್ಯೂಟಿ ಸ್ಕಿಲ್ಸ್ ಮಾಸ್ಟರ್‌ಕ್ಲಾಸ್

ಬ್ಯೂಟಿ ಪ್ಲಾನೆಟ್ ಸಂಸ್ಥೆಯು ನೇಚರ್ಸ್ ಎಸೆನ್ಸ್ ಪ್ರೊಫೆಷನಲ್ ಕಂಪನಿಯ ಸಹಯೋಗದಲ್ಲಿ ಆಯೋಜಿಸಿದ್ದ ಸೌಂದರ್ಯ ತರಬೇತಿ ಮಾಸ್ಟರ್‌ಕ್ಲಾಸ್ ಜುಲೈ 14ರಂದು ಮಂಗಳೂರಿನ ಹೋಟೆಲ್ ಸಾಫ್ರನ್‌ನಲ್ಲಿ ನಡೆಯಿತು. ಮೇಕಪ್, ಕೇಶವಿನ್ಯಾಸ, ಸೀರೆ ಧರಿಸುವ ಕಲೆ ಹಾಗೂ ಹೈಡ್ರಾ ಫೇಶಿಯಲ್ ತಂತ್ರಗಳ ಕುರಿತು ತಜ್ಞರಿಂದ ಪ್ರಾತ್ಯಕ್ಷಿಕೆ ಮತ್ತು ತರಬೇತಿ ನೀಡಲಾಯಿತು. ಕಾರ್ಯಕ್ರಮವನ್ನು ಎಡ್ನಾ ಜಾಥನ್, ಐಶ್ವರ್ಯ ಚಂದ್ರಶೇಖರ್, ಅನ್ವಿತಾ, ಲತಾ ಶಿವಮೊಗ್ಗ ಶ್ರೀಮತಿ ಪ್ರಿಯಾಂಕಾ, ಅಮಿತ್, ಶ್ರೀಮತಿ ಫ್ಲೇವಿ ಗ್ಲಾಡಿಸ್ ಡಿ’ಮೆಲ್ಲೋ ಹಾಗೂ ಶ್ರೀಮತಿ ಲತಾ ಹರೀಶ್ ಉದ್ಘಾಟಿಸಿದರು. ತಜ್ಞರಾದ ESME…

Read More
error: Content is protected !!