ರಾಶಿ ರಾಶಿ ಬೂತಾಯಿ ಮೀನು.ಉಳ್ಳಾಲದ ಸಮುದ್ರ ತೀರದವರಿಗೆ ಮೀನಿನ ಸುಗ್ಗಿ
ಉಳ್ಳಾಲ: ಒಂದೇ ಸಮನೆ ಬೂತಾಯಿ ಮೀನಿನ ಸಾಲುಗಳು ದಡಕ್ಕೆ ಅಪ್ಪಳಿಸಿದ್ದು, ಉಳ್ಳಾಲ ಸಮುದ್ರ ತೀರದ ಮಂದಿಗೆ ಬೂತಾಯಿ ಮೀನಿನ ಸುಗ್ಗಿಯಾಗಿದೆ.ದೋಣಿಯೊಂದು ಸಾಗುವ ಸಂದರ್ಭ ಅದರಿಂದ ಕೇಳಿಬಂದ ಸದ್ದಿನಿಂದ ಸಾಲುಸಾಲಾಗಿ ಸಾಗುವ ಬೂತಾಯಿ ಮೀನುಗಳು ಹಾದಿ ಬದಲಿಸಿದ್ದು, ಪರಿಣಾಮ ಸಮುದ್ರ ತೀರಕ್ಕೆ ಅಪ್ಪಳಿಸಿದೆ. ಮಧ್ಯಾಹ್ನ 11 ರವೇಳೆಗೆ ಅಪ್ಪಳಿಸಿದ ಮೀನಿನ ರಾಶಿಯನ್ನು ಗಮನಿಸಿದ ಸ್ಥಳೀಯರು ನಾಮುಂದು ತಾ ಮುಂದು ಅನ್ನುತ್ತಾ ಅಲೆಗಳ ಅಬ್ಬರದ ನಡುವೆಯೂ ಮೀನನ್ನು ಸಂಗ್ರಹಿಸಿದರು. ಹಲವರು ವ್ಯವಹಾರವನ್ನು ನಡೆಸಿದರೆ, ಇನ್ನು ಕೆಲವರು ಮನೆಯಲ್ಲಿ ಸಾರು ಮಾಡಿದರು….
