ಭಾರತೀಯ ಜೈನ್ ಮಿಲನ್ ವಲಯ 8 ರ ಆಶ್ರಯದಲ್ಲಿ ಮಂಗಳೂರು ಜೈನ್ ಮಿಲನ್ ಅತಿಥೇಯತ್ವದಲ್ಲಿ ಪ್ರತಿಷ್ಠಿತ ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧಾ ಕಾರ್ಯಕ್ರಮ
ಭಾರತೀಯ ಜೈನ್ ಮಿಲನ್ ವಲಯ 8 ರ ಆಶ್ರಯದಲ್ಲಿ ಮಂಗಳೂರು ಜೈನ್ ಮಿಲನ್ ಅತಿಥೇಯತ್ವದಲ್ಲಿ ಪ್ರತಿಷ್ಠಿತ ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧಾ ಕಾರ್ಯಕ್ರಮವು ಜನವರಿ 3 ಹಾಗೂ 4 ರಂದು ಮಂಗಳೂರಿನ ಪಿಲಿಕುಳದಲ್ಲಿರುವ ಸ್ಕೌಟ್ಸ್ & ಗೈಡ್ಸ್ ಭವನದಲ್ಲಿ ಅದ್ದೂರಿಯಾಗಿ ನೆರವೇರಿತು. ಪರಮ ಪೂಜ್ಯ ಯುಗಲ ಮುನಿ ಮಹಾರಾಜರ ಆಶೀರ್ವಾದದೊಂದಿಗೆ ಶ್ರವಣಬೆಳಗೊಳ ಹಾಗೂ ಮೂಡುಬಿದಿರೆ ಮಠದ ಪೂಜ್ಯ ಭಟ್ಟಾರಕ ಮಹಾಸ್ವಾಮಿಗಳ ಭವ್ಯ ಉಪಸ್ಥಿತಿಯಲ್ಲಿ, ಪೂಜ್ಯ ರಾಜರ್ಷಿ ಡಿ ವೀರೇಂದ್ರ ಹೆಗ್ಗಡೆಯವರ ಭಾಗವಹಿಸುವಿಕೆಯಲ್ಲಿ ಜರುಗಿದ ಈ ಹಬ್ಬ…