ಮೂಡಬಿದ್ರೆ,:ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಡಿ ಆಶ್ರಯದಲ್ಲಿ ಲಯನ್ಸ್ ಸಂಸ್ಥಾಪಕ ಮೆಲ್ವಿನ್ ಜೋನ್ಸ್ ಅವರ ಪುತ್ಥಳಿಯನ್ನು ಪಾಸ್ಟ್ ಇಂಟರ್ನ್ಯಾಷನಲ್ ಡೈರೆಕ್ಟರ್ ಜೆ.ಪಿ. ಸಿಂಗ್ ಶನಿವಾರ ಅನಾವರಣಗೊಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಜಿಲ್ಲೆ 317ಡಿ ಗವರ್ನರ್ ಕುಡುಪಿ ಅರವಿಂದ್ ಶೆಣೈ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ದ್ವಿತೀಯ ಉಪರಾಜ್ಯಪಾಲ ವೆಂಕಟೇಶ್ ಹೆಬ್ಬಾರ್, ನಿಕಟಪೂರ್ವ ಸಂಪುಟ ಕಾರ್ಯದರ್ಶಿ ಚಂದ್ರೇಗೌಡ ಎಚ್.ಆರ್., ನಿಕಟಪೂರ್ವ ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ, ನಿಕಟಪೂರ್ವ ಸಾರ್ವಜನಿಕ ಸಂಪರ್ಕಾಧಿಕಾರಿ ಸುದರ್ಶನ್ ಪಡಿಯಾರ್ (ವಿಟ್ಲ), ನಿಕಟಪೂರ್ವ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ್ ರೈ (ಮೂಡಬಿದ್ರೆ), ಲಯನ್ಸ್ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶಿವಪ್ರಸಾದ್ ಹೆಗಡೆ, ಮೂಡಬಿದ್ರೆ ಲಯನ್ಸ್ ಕ್ಲಬ್ ಅಧ್ಯಕ್ಷ ರಿಚರ್ಡ್ ಕಾರ್ಡೋಜ ಸೇರಿದಂತೆ ಮಾಜಿ ಜಿಲ್ಲಾ ಗವರ್ನರ್‌ಗಳು, ವಿವಿಧ ಲಯನ್ಸ್ ಕ್ಲಬ್‌ಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಜಿಲ್ಲಾ ನಾಯಕರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಸೇವಾ ಚಟುವಟಿಕೆಗಳು ಹಾಗೂ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸಿ, ಮೆಲ್ವಿನ್ ಜೋನ್ಸ್ ಅವರ ಆದರ್ಶಗಳನ್ನು ಮುಂದುವರಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಲಾಯಿತು.


