ಉಳ್ಳಾಲ ಮಸೀದಿ ಹತ್ತಿರ ಬಾಂಬ್ ಬ್ಲಾಸ್ಟ್ ಮಾಡುತ್ತೇವೆ ಎಂದು ಬೆದರಿಕೆ: ಎಫ್ ಐಆರ್ ದಾಖಲು
ಮಂಗಳೂರು : ಮಂಗಳೂರಿನ ಉಳ್ಳಾಲ ಮಸೀದಿ ಹತ್ತಿರ ಬಾಂಬ್ ಬ್ಲಾಸ್ಟ್ ಮಾಡುತ್ತೇನೆ ಎಂದು ಫೇಸ್ ಬುಕ್‌ನಲ್ಲಿ ಮೆಸೇಜ್ ಮಾಡಿದ ವ್ಯಕ್ತಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಬೇರೊಬ್ಬರು ಹಂಚಿಕೊಂಡ ಪೋಸ್ಟ್‌ಗೆ ‘ಶಂಕರ್11916’ ಎಂಬ ಖಾತೆಯನ್ನು ಬಳಸಿ ಈ ರೀತಿ ಕಮೆಂಟ್ ಮಾಡಲಾಗಿದೆ. ಮೊಹಮ್ಮದ್ ರಿಯಾಜ್ ಕಡಂಬು ಅವರು ಈ ಕುರಿತು ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡು, ‘ಆರೋಪಿಯನ್ನು ಪೊಲೀಸರು ಆದಷ್ಟು ಬೇಗ ಬಂಧಿಸಬೇಕೆಂದು ತಿಳಿಸಿದ್ದಾರೆ . ಯಾವುದಕ್ಕೂ ಉಳ್ಳಾಲ…
