ಅನಿಲ ಸಾಗಾಟದ ಟ್ಯಾಂಕರ್‌ಗೆ ಟೆಂಪೋ ಡಿಕ್ಕಿ; ಚಾಲಕ ಗಾಯ, ಅನಿಲ ಸೋರಿಕೆ ಭೀತಿಯಲ್ಲಿ ರಕ್ಷಣೆ ಕಾರ್ಯಾಚರಣೆ
ಬಂಟ್ವಾಳ : ಖಾಸಗಿ ಸಂಸ್ಥೆಗೆ ಸೇರಿದ ಟೆಂಪೋ ವಾಹನವೊಂದು ಅನಿಲ ಸಾಗಾಟದ ಟ್ಯಾಂಕರ್ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿಯ ಕುದ್ರೆಬೆಟ್ಟು ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಕಲ್ಲಡ್ಕ ಫ್ಲೈ ಓವರ್ ನಲ್ಲಿ ಅತಿವೇಗದಿಂದ ಬಂದ ಟೆಂಪೋ ವಾಹನ ಸಮುದ್ರ ಹೋಟೆಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಗೆ ಹಿಂದಿನಿಂದ ಡಿಕ್ಕಿಯಾಗಿದೆ. ಪರಿಣಾಮ ಚಾಲಕನ ಕೈ ವಾಹನಗಳನಡುವೆ ಸಿಲುಕಿಕೊಂಡಿತ್ತು. ಗ್ಯಾಸ್ ಟ್ಯಾಂಕರ್ ಗೆ ವಾಹನ ಡಿಕ್ಕಿಯಾಗಿದ್ದರಿಂದ, ಅನಿಲ ಸೋರಿಕೆಯ ಭಯದಿಂದ ಯಾರೂ ವಾಹನಗಳ…
