ಮನೆಗೆ ನುಗ್ಗಿದ ಗೂಡ್ಸ್ ಟೆಂಪೋ; ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಟೆಂಪೋವೊಂದು ಮನೆಗೆ ಡಿಕ್ಕಿ ಹೊಡೆದ ಘಟನೆ ಹೆಜಮಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬಳಿ ರಾ.ಹೆ. 66ರಲ್ಲಿ ಸಂಭವಿಸಿದೆ. ಪಡುಬಿದ್ರಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಗೂಡ್ಸ್ ಟೆಂಪೋ, ಹೆಜಮಾಡಿಯಲ್ಲಿ ನಿಯಂತ್ರಣ ತಪ್ಪಿ ಇಸ್ಮಾಯಿಲ್ ಮಂಜತೋಟ ಎಂಬವರ ಮನೆಗೆ ಗುದ್ದಿದೆ. ಈ ಸಂದರ್ಭ ಮನೆಯವರು ಮತ್ತು ಗೂಡ್ಸ್ ಚಾಲಕ, ಸಣ್ಣ ಪುಟ್ಟ ಗಾಯಗೊಂದಿಗೆ ಪಾರಾಗಿದ್ದಾರೆ.ಘಟನಾ ಸ್ಥಳಕ್ಕೆ ಹೆಜಮಾಡಿ ಟೋಲ್ ಸಿಬ್ಬಂದಿ ಮತ್ತು ಪಡುಬಿದ್ರಿ ಪೋಲೀಸರು ಸ್ಥಳೀಯರ ಸಹಕಾರದಲ್ಲಿ ಗೂಡ್ಸ್ ವಾಹನವನ್ನು…

Read More

ಉಡುಪಿ ಜಿಲ್ಲೆಯಾದ್ಯಂತ ಹೆಚ್ಚುವರಿ ಪೊಲೀಸ್, ಪೆಟ್ರೋಲಿಂಗ್, ಡ್ರೋನ್ ನಿಗಾ ಹೊಸ ವರ್ಷಾಚರಣೆ ಪೋಲಿಸ್ ಬಂದೋಬಸ್ತ್ ಕುರಿತು ಎಸ್ಪಿ ಹರಿರಾಮ್ ಶಂಕರ್ ಮಾಹಿತಿ

ಉಡುಪಿ: : ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಹೆಚ್ಚುವರಿ ಪೊಲೀಸ್ ಬಲ, ಪೆಟ್ರೋಲಿಂಗ್ ಹಾಗೂ ನಿಗಾ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗಿದೆ. ಪ್ರತಿಯೊಬ್ಬರು ಜವಾಬ್ದಾರಿಯುತವಾಗಿ ಹೊಸವರ್ಷವನ್ನು ಆಚರಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಹೊಸ ವರ್ಷ ಆಚರಣೆಯ ಪೊಲೀಸ್ ಬಂದೋಬಸ್ತ್ ಕುರಿತು ಮಾಹಿತಿ ನೀಡಿದ ಅವರು ಹೊಸ ವರ್ಷದ…

Read More

ಪುತ್ತೂರು ಬೈಪಾಸ್ ರಸ್ತೆಯಲ್ಲಿ ಹೋರಿ ಕರುವಿಗೆ ಅಪರಿಚಿತ ವಾಹನ ಡಿಕ್ಕಿ – ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಕಾರ್ಯಕರ್ತರಿಂದ ಕರುವಿನ ರಕ್ಷಣೆ

ಪುತ್ತೂರು: ಪುತ್ತೂರು ಬೈಪಾಸ್ ಅಶ್ಮಿ ಕಂಫರ್ಟ್ ನ ಬಳಿ ಅಪರಿಚಿತ ವಾಹನವೊಂದು ಹೋರಿ ಕರುವಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಪುತ್ತೂರಿನ ಬೈಪಾಸ್ ನಲ್ಲಿ ನಡೆದಿದೆ. ಇಂದು ಬೆಳಗ್ಗಿನ ಜಾವ ಹೋರಿ ಕರುವಿಗೆ ಡಿಕ್ಕಿ ಹೊಡೆದ ಘಟನೆ ತಿಳಿದ ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಕಾರ್ಯಕರ್ತರು ತಕ್ಷಣ ಧಾವಿಸಿ ತುರ್ತು ಚಿಕಿತ್ಸೆಗೆ ಸರಕಾರಿ ಪಶು ಆಸ್ಪತ್ರೆಗೆ ಕರೆದೊಯ್ಯಲಾಯಿತು.ಪಶು ಆಸ್ಪತ್ರೆಯಲ್ಲಿ ಕರುವಿಗೆ ಚಿಕಿತ್ಸೆಯ ನಂತರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಧೇನು ಗೋಶಾಲೆಗೆ ಸೇರಿಸಲಾಯಿತು.ಪಿಕಪ್ ವ್ಯವಸ್ಥೆಯನ್ನು ಧರಿತ್ರಿ ಅಸೋಸಿಯೇಟ್ಸ್ ನ…

Read More

ಬಡವರ ಕಾಲೋನಿಯಲ್ಲಿ ಬುಲ್ಡೋಜರ್, ಅಕ್ರಮಗಳ ಮುಂದೆ ಶರಣಾದ ಶಾಸಕರು – ಪ್ರಜಾಪ್ರಭುತ್ವಕ್ಕೆ ಅವಮಾನ- ಎಸ್‌ಡಿಪಿಐ

ಬಂಟ್ವಾಳ: ಬೆಂಗಳೂರು ಫಕೀರ್ ಲೇಔಟ್‌ನಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ ತಕ್ಷಣ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಬಡವರ ಮೇಲೆ ನಡೆಯುತ್ತಿರುವ ಬುಲ್ಡೋಜರ್ ರಾಜಕೀಯವನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಇಂದು ಬಿ.ಸಿ.ರೋಡ್ ಕೈಕಂಬ ಜಂಕ್ಷನ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡುತ್ತಾ ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಡಿಜೆ ಹಾಕಿ ಕುಣಿಯುವ ಹಾಗೂ ಅಕ್ರಮ ಕೋಳಿ ಅಂಕ ನಡೆಸುವ ಸಂದರ್ಭಗಳಲ್ಲಿ ಅದನ್ನು ತಡೆಯಲು…

Read More

ಮುಸ್ಲಿಮರ ಮತ ಓಲೈಕೆಗಾಗಿ ಸಿ. ಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೋಗಿಲು ಲೇಔಟ್ ನ ೩- ೪ ಕಿಲೋ ಮೀಟರ್ ವ್ಯಾಪ್ತಿ ದೂರದಲ್ಲೇ ಹೊಸ ಮನೆ ಕಟ್ಟಿಸಿಕೊಡುತ್ತಿದೆ : ಶಾಸಕ ಡಾ. ಭರತ್ ಶೆಟ್ಟಿ ವೈ

ಮಂಗಳೂರು: ಕೋಗಿಲು ಲೇಔಟ್ ನಲ್ಲಿ ಅಕ್ರಮವಾಗಿ ಜನ ಬಂದು ನೆಲೆಸಿದ್ದಾರೆ ಅವರಿಗೆ ಸಿದ್ದರಾಮ್ಯನ ನೇತೃತ್ವದ ಸರಕಾರ ಮನೆ ಕಟ್ಟಿಕೊಡುವ ಕೆಲಸ ಮಾಡುತ್ತಿದೆ . ಇದು ಮುಸ್ಲಿಂ ಮತ ಓಲೈಕೆ ಮತ್ತು ಕೇರಳದ ರಾಜಕೀಯ ಲಾಭ ಪಡೆಯುವ ಹುನ್ನಾರ ಅಡಗಿದೆ ಎಂದು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ. ಭರತ್ ಶೆಟ್ಟಿ ವೈ ತಿಳಿಸಿದರು. ಅವರು ಮಂಗಳೂರು ಪಾಲಿಕೆಯಲ್ಲಿರುವ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಹಿಂದೆ ಅಕ್ರಮ ಒತ್ತುವರಿ ಮಾಡಿ ತೆರೆವು ಮಾಡಿದ…

Read More

ಮಂಚಿ – ಕೊಳ್ನಾಡು ಪ್ರೌಢಶಾಲೆಯ 48ನೇ ವಾರ್ಷಿಕೋತ್ಸವ

ಮಂಗಳೂರು: “ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳು ವಿದ್ಯಾರ್ಥಿಗಳ ಸೊತ್ತಾಗಬೇಕು. ಆಧುನಿಕ ತಂತ್ರಜ್ಞಾನಗಳ ಪರಿಣಾಮಕಾರಿ ಪ್ರಭಾವದಿಂದ ಸನ್ನಡತೆಗೆ ವಿಮುಖರಾಗದೆ ಬದುಕಿನ ಮೌಲ್ಯಗಳಿಗೆ ಬೆಲೆ ನೀಡಬೇಕಾಗಿದೆ. ಅಂಕಗಳ ಜೊತೆಗೆ ಕೌಶಲಗಳ ಬೆಳವಣಿಗೆಗೆ ಹೆಚ್ಚು ಒತ್ತು ನೀಡುವ ಮೂಲಕ ಬದುಕಿನ ಭದ್ರತೆಗೆ ಬುನಾದಿ ಹಾಕಬೇಕಾಗಿದೆ.” ಎಂದು ನಿವೃತ್ತ ಶಿಕ್ಷಣ ಅಧಿಕಾರಿ ಹಾಗೂ ಶಿಕ್ಷಣ ಚಿಂತಕರಾದ ಡಾ. ಕುಮಾರಸ್ವಾಮಿ ಎಚ್ ಇವರು ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯ 48ನೇ ವಾರ್ಷಿಕೋತ್ಸವದ ಮುಖ್ಯ ಶೈಕ್ಷಣಿಕ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತು ನುಡಿದರು. ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಎಲ್ಲಾ…

Read More

ತುಳುವಿನ ಪ್ರಪ್ರಥಮ ಕ್ಯಾಲೆಂಡರ್ “ಕಾಲ ಕೋಂದೆ”ಯ 13ನೇ ವರ್ಷದ ಯಶಸ್ವಿ ಬಿಡುಗಡೆ…. !

ಮಂಗಳೂರು: ತುಳುನಾಡಿನ ಸರ್ವ ಧರ್ಮೀಯರ ಹಬ್ಬ, ಆಚರಣೆ ಹಾಗೂ ತುಳುನಾಡಿನ ಆಯನ ಜಾತ್ರೆ ಮುಂತಾದ ವಿಶೇಷ ದಿನಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒಳಗೊಂಡ “ಕಾಲ ಕೋಂದೆ” ತುಳು ದಿನದರ್ಶಿಕೆಯು 13ನೇ ವರ್ಷದ ಬಿಡುಗಡೆ ಪತ್ರಿಕಾಭವನದಲ್ಲಿ ನಡೆಯಿತು . ಬಳಿಕ ಮಾತನಾಡಿದ ಪ್ರಥಮ ಡಿಜಿಟಲ್ ತುಳು ಲಿಪಿ ವಿನ್ಯಾಸಕ ಡಾ| ಪ್ರವೀಣ್‌ ರಾಜ್ ಎಸ್. ರಾವ್ , ತುಳುವರ ‘ಸಿಂಗೊಡೆ’ಯಿಂದ ಪ್ರಾರಂಭವಾಗಿ ಸಂಕ್ರಾಂತಿ, ತಿಥಿ, ನಕ್ಷತ್ರ ಗಳನ್ನು (ಭರಣಿ, ಕಿರ್ತಿಕೆ ಇತ್ಯಾದಿ) ಕೆಡ್ವಾಸ, ತುಳು ದೀಪಾವಳಿ ಬಲಿಲೆಪ್ಪುನ ದಿನ,…

Read More

ಜನವರಿ 14 ಹಾಗೂ 15 ರಂದು ಕಾರ್ಮೆಲ್ ಹಿಲ್, ಬಿಕರ್ನಕಟ್ಟೆಯಲ್ಲಿ ದಿವ್ಯಬಾಲ ಯೇಸುವಿನ ವಾರ್ಷಿಕ ಮಹೋತ್ಸವ

ಮಂಗಳೂರು: ಮಂಗಳೂರಿನ ಬಾಲ ಯೇಸುವಿನ ಪುಣ್ಯಕ್ಷೇತ್ರ, ಕಾರ್ಮೆಲ್ ಹಿಲ್, ಬಿಕರ್ನಕಟ್ಟೆಯ ವಾರ್ಷಿಕ ಮಹೋತ್ಸವವು ಜನವರಿ 14 ಹಾಗೂ 15 ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಬಾಲಯೇಸುವಿನ ಪುಣ್ಯಕ್ಷೇತ್ರದ ನಿರ್ದೇಶಕ ವಂದನೀಯ ಫಾ| ಸ್ಟೀಫನ್ ಪಿರೇರಾ ಹೇಳಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಜನವರಿ 14ರಂದು ಸಂಜೆ 6ಕ್ಕೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನು ಅತೀ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ, ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ನಡೆಸಿಕೊಡಲಿದಾರೆ. ಅದೇ ದಿನ ಬೆಳಿಗ್ಗೆ 10ಕ್ಕೆ ವೃದ್ಧರು ಹಾಗೂ ಅಸ್ವಸ್ಥರಿಗಾಗಿ ಅತೀ…

Read More

ಕಂಬಳ ಕೂಟದಲ್ಲಿ ಮಿತಿ ಮೀರುತ್ತಿದೆ ದುರ್ವರ್ತನೆ! ಹಿರಿಯರಿಗೆ ಅಪಮಾನ, ನಿಂದನೆ! ಹೇಳೋರಿಲ್ಲ, ಕೇಳೋರಿಲ್ಲ!

ಮಂಗಳೂರು : ಕಂಬಳದ ಭೀಷ್ಮ ಎಂದೇ ಖ್ಯಾತಿ ಗಳಿಸಿರುವ ಹಿರಿಯ ತೀರ್ಪುಗಾರ ಗುಣಪಾಲ ಕಡಂಬ ಅವರಿಗೆ ಅರುಣ್ ಶೆಟ್ಟಿ ಬಜ್ಪೆ ಎಂಬಾತ ವೇದಿಕೆಯಲ್ಲೇ ಅವಮಾನ ಮಾಡಿರುವ ನಾಚಿಕಗೇಡಿನ ಘಟನೆ ವರದಿಯಾಗಿತ್ತು. ಇದು ಬಹಿರಂಗವಾಗಿ ನಡೆದರೆ, ಅದನ್ನೂ ಮೀರಿ ಕ್ಯಾಮೆರಾದ ಹಿಂದೆ ಮತ್ತೊಂದು ಕೃತ್ಯವೂ ನಡೆದಿದೆ ಎಂದು ವರದಿಯಾಗಿದೆ. ಮಂಗಳೂರು: ಕಂಬಳ ಕ್ರೀಡೆ ಇತ್ತೀಚಿನ ದಿನಗಳಲ್ಲಿ ಕರಾವಳಿ ಕರ್ನಾಟಕವನ್ನು ಮೀರಿ ದೇಶಾದ್ಯಂತ ಪ್ರಸಿದ್ಧಿಯನ್ನು ಪಡೆಯುತ್ತಿದೆ. ತುಳುನಾಡಿನ ಹೆಮ್ಮೆಯ ಪಾರಂಪರಿಕ ಕ್ರೀಡೆ ಕಂಬಳ ನೋಡುಗರಿಗೆ ಮನರಂಜನೆಯನ್ನು ನೀಡುತ್ತಿದೆಯಾದರೂ, ಅದರೊಳಗೆ ನಡೆಯುತ್ತಿರುವ…

Read More

ಕದ್ರಿ ಪಾರ್ಕ್ ನಲ್ಲಿ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ

ಮಂಗಳೂರು: ಕದ್ರಿ ಪಾರ್ಕ್ ನಲ್ಲಿ ಜನವರಿ 10 ಶನಿವಾರ 2026 ರಂದು ಮಧ್ಯಾಹ್ನ ಗಂಟೆ 3:30 ರಿಂದ 5:30 ರವರೆಗೆಮಕ್ಕಳಿಗೆ ಚಿತ್ರ ಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.2 ರಿಂದ 4ನೇ ತರಗತಿ, 5 ರಿಂದ 7ನೇ ತರಗತಿ, 8 ರಿಂದ 10ನೇ ತರಗತಿ, ಹಾಗೂ ಕಾಲೇಜು ವಿಭಾಗ ಈ ಚಿತ್ರ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಬಹುದು.ಸ್ಪರ್ಧಾಳುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನದ ಜೊತೆ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೂ ಅಭಿನಂದನಾ ಪತ್ರ ಮತ್ತು ಪದಕ ನೀಡಲಾಗುವುದು. ಸ್ಪರ್ಧೆಯ ವಿಷಯ :2 ರಿಂದ…

Read More
error: Content is protected !!