ಮಳೆಯಿಂದಾಗಿ ಹಲವೆಡೆ ಅನಾಹುತ-ತೀವ್ರ ಹಾನಿಯಾದ ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್ ಭೇಟಿ

ಮಂಗಳೂರು ನಗರದಲ್ಲಿ ಎಡೆ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಅನಾಹುತಗಳು ಸಂಭವಿಸಿದ್ದು ಮಂಗಳೂರು ನಗರ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಪಾಂಡೇಶ್ವರದ ಪೋರ್ಟ್ ವಾರ್ಡ್ ಸಂಖ್ಯೆ 45 ರಲ್ಲಿ ಮನೆಯೊಂದಕ್ಕೆ ತೀವ್ರ ಹಾನಿಯಾದ ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್ ರವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸತತ ಮಳೆಯಿಂದಾಗಿ ಸೇಸಪ್ಪ ಎಂಬುವವರ ಮನೆಗೆ ತೀವ್ರ ಹಾನಿಯುಂಟಾಗಿದೆ. ಗೋಡೆಗಳು ಸಂಪೂರ್ಣ ಜರಿದಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಕೂಡಲೇ ಈ ಮನೆಯವರಿಗೆ ಗರಿಷ್ಠ ಮಟ್ಟದ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಯಾವುದೇ…

Read More

ಕರ್ನಾಟಕ: ಮುಂಗಾರು ಅಧಿವೇಶನ ಆಗಸ್ಟ್ 11 ರಿಂದ-ಧರ್ಮಸ್ಥಳದ ಸಮಗ್ರ ತನಿಖೆಗೆ ಸರಕಾರ ಸಂಪೂರ್ಣ ಸಹಕಾರ ನೀಡುತ್ತದೆ -ಸಭಾಧ್ಯಕ್ಷರಾದ ಯು ಟಿ ಖಾದರ್

ಕರ್ನಾಟಕದಲ್ಲಿ ಮುಂಗಾರು ಅಧಿವೇಶನ ಆಗಸ್ಟ್ 11 ರಿಂದ 20 ರ ತನಕ ನಡೆಯಲಿದೆ ಎಂದು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಭಾಧ್ಯಕ್ಷರಾದ ಯು ಟಿ ಖಾದರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಬಜೆಟ್ ನಲ್ಲಿ ಘೋಷಣೆ ಆದಂತೆ ಉಳ್ಳಾಲ ಗ್ರಾಮಾಂತರ ಭಾಗದಲ್ಲಿ ಬಾಲಕಿಯರಿಗೆ ಶಿಕ್ಷಣ ಸಂಸ್ಥೆಯನ್ನು ತೆರೆಯಲಾಗುವುದು. ವಸತಿ ಶಾಲಾ ಕಾಲೇಜು ಇದಾಗಿದ್ದು ಈ ಶಿಕ್ಷಣ ಸಂಸ್ಥೆಯನ್ನು ಕೊಣಾಜೆ ಅಥವಾ ಫಜೀರು ಭಾಗದಲ್ಲಿ ನಿರ್ಮಾಣ ಮಾಡುವ ಸಾಧ್ಯತೆ ಇದೆ. ಬಜೆಟ್ ನಲ್ಲಿ…

Read More

ಅಂಚೆ ಕಚೇರಿ ನೇಮಕಾತಿ, ಅರ್ಜಿದಾರರ ಸಮಸ್ಯೆಗಳನ್ನು ಬಗೆಹರಿಸಬೇಕು : ಯೂತ್ ಕಾಂಗ್ರೆಸ್

ಮಂಜೇಶ್ವರ : ಅಂಚೆ ಕಚೇರಿಯ ನೇಮಕಾತಿ ಸಂಬಂಧಿಸಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಭಾಷಾ ಅಲ್ಪಸಂಖ್ಯಾತ ಉದ್ಯೋಗರ್ಥಿಗಳು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಕನ್ನಡ ಮಾಧ್ಯಮ ಕಲಿತ ಉದ್ಯೋಗಾರ್ಥಿಗಳು ಅರ್ಜಿ ಸಲ್ಲಿಸುವಾಗ ಭಾಷೆ ಮಲಯಾಳಂನ ಬದಲು ಕಲಿತ ಭಾಷೆಯಾದ ಕನ್ನಡ ಆಯ್ಕೆ ಮಾಡುವಾಗ ರಾಜ್ಯ ಕೇರಳದ ಬದಲು ಕರ್ನಾಟಕ ರಾಜ್ಯ ಎಂದು ತೋರಿಸುತ್ತದೆ, ಇದು ಕನ್ನಡ ಉದ್ಯೋಗಾರ್ಥಿಗಳ ಒಂದು ಸಮಸ್ಯೆ ಮಾತ್ರವಲ್ಲದೆ ಕೇರಳದ ಕಾಸರಗೋಡಿನ ಗಡಿ ಪ್ರದೇಶದ ಕನ್ನಡಿಗರು ಅಂಚೆ ಕಚೇರಿಯಲ್ಲಿ ಉದ್ಯೋಗ ಪಡೆಯುವುದಕ್ಕೆ ವಂಚಿತರಾಗಿದ್ದಾರೆ. ಅಂಚೆ…

Read More

ಅಮೃತ ಪ್ರಕಾಶ ಪತ್ರಿಕೆಯ 12ನೇಯ ವಾರ್ಷಿಕೋತ್ಸವ

ಮಾಲತಿ ಶೆಟ್ಟಿ, ಮಾಣೂರು ಸಂಪಾದಕತ್ವದ ಅಮೃತ ಪ್ರಕಾಶ ಪತ್ರಿಕೆಯ 12ನೇ ವರ್ಷದ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿದರು .ಪತ್ರಿಕೆ ನಡೆಸುವುದು ಸುಲಭ ಕೆಲಸವಲ್ಲ ಅದಕ್ಕೆ ಕಠಿಣ ಪರಿಶ್ರಮ ಅಗತ್ಯ. ಪತ್ರಿಕೆಯ ಜೊತೆಗೆ ಸಾಹಿತ್ಯ ಪರ ಕಾರ್ಯ ನಿರಂತರವಾಗಿ ಮಾಡುತ್ತಿದ್ದಾರೆ . ಅಮೃತ ಪ್ರಕಾಶ ಪತ್ರಿಕೆಗೆ ಶುಭ ಹಾರೈಸಿದರು. ಅಮೃತ ಪ್ರಕಾಶ ಪತ್ರಿಕೆಯ 12ನೇಯ…

Read More

ಕನ್ನಡ ಕಟ್ಟುವ ಕೆಲಸ ಕೇವಲ ಮಾತಿನಿಂದಲ್ಲ, ಹೃದಯದಿಂದ ಆಗಬೇಕು ಡಾ. ಸಿ ಸೋಮಶೇಖರ್.

ಕೋಲಾರ ಪತ್ರಿಕಾ ಭವನದಲ್ಲಿ ಕನ್ನಡ ಭವನ ಕಾಸರಗೋಡು ಮತ್ತು ಮೇಘ ಮೈತ್ರಿ ಸಾಹಿತ್ಯ ಸಂಘ ಬಾಗಲಕೋಟ, ಕಮತಗಿ ಸಂಯುಕ್ತ ಆಶ್ರಯದಲ್ಲಿ ನಡೆದ ಗಡಿನಾಡು ಸಾಹಿತ್ಯ ಸಮ್ಮೇಳನ 19.7.2025.ಶನಿವಾರ ನಡೆಯಿತು. ಕರ್ನಾಟಕ ಸರಕಾರದ ಗಡಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿದರು. “ಗಡಿನಾಡು ಪ್ರದೇಶಗಳಲ್ಲಿ ಮಾತ್ರವಲ್ಲದೆ ಒಳನಾಡಿನಲ್ಲೂ ಕನ್ನಡಕ್ಕೆ, ಕನ್ನಡ ಶಾಲೆಗಳಿಗೆ, ಕನ್ನಡ ಸಾಹಿತ್ಯ ಕ್ಷೇತ್ರಗಳಲ್ಲಿಯೂ ಆತಂಕ ಹುಟ್ಟುವ ರೀತಿಯಲ್ಲಿ ಹಿನ್ನಡೆ ಕಾಣುತ್ತಿದೆ, ಕನ್ನಡ, ಕನ್ನಡ ಸಾಹಿತ್ಯ, ಸಂಸ್ಕೃತಿ ಪ್ರೀತಿಸುವ…

Read More

ಧರ್ಮಸ್ಥಳದಲ್ಲಿ ನಡೆದ ಸರಣಿ ಕೊಲೆ ಪ್ರಕರಣ – ಸೂಕ್ತ ತನಿಖೆಗೆ ವುಮೆನ್ ಇಂಡಿಯಾ ಮೊಮೆಂಟ್ ಆಗ್ರಹ

ದೇಶದಾದ್ಯಂತ ಸಂಚಲನವನ್ನು ಮೂಡಿಸಿದ ಧರ್ಮಸ್ಥಳದಲ್ಲಿ ನಡೆದ ಸರಣಿ ಕೊಲೆ ಪ್ರಕರಣ ಸರಿಯಾದ ಕ್ರಮದಲ್ಲಿ ತನಿಖೆ ಆಗಬೇಕೆಂದು ವುಮೆನ್ ಇಂಡಿಯಾ ಮೊಮೆಂಟ್ ನ ರಾಜ್ಯಧ್ಯಕ್ಷರಾದ ಫಾತಿಮಾ ನಸೀಮಾ ನಗರದ ಎಸ್ ಡಿ ಪಿ ಐ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಿಯಾದ ಸಾಕ್ಷಿಗಳು ಇದ್ದರೂ ಕೂಡ ತನಿಖೆಗಳು ಯಾಕೆ ನಡೆಯುತ್ತಿಲ್ಲ ?!. ಇಲ್ಲಿ ನಡೆದ ಕೊಲೆಯ ಬಗ್ಗೆ ಸರಕಾರ ಸೂಕ್ತ ತನಿಖೆಯನ್ನು ನಡೆಸಬೇಕು. ಲವ್ ಜಿಹಾದ್ ವಿಚಾರವನ್ನು ಪ್ರಶ್ನೆ ಮಾಡುವ ಹಿಂದೂ ನಾಯಕರು ಈ…

Read More

ತುಳು ಅಕಾಡೆಮಿಯಿಂದ ತುಳು ನೋಟ್ ಪುಸ್ತಕ ಬಿಡುಗಡೆ

ಮಂಗಳೂರು : ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ತುಳು ಪಠ್ಯ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸುವ ಸಲುವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹೊರ ತಂದ ತುಳು ನೋಟ್ ಪುಸ್ತಕವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಶನಿವಾರ ಬಿಡುಗಡೆ ಮಾಡಿದರು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸರಕಾರಿ, ಅನುದಾನಿತ , ಖಾಸಗಿ, ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಸುಮಾರು 2,000 ವಿದ್ಯಾರ್ಥಿಗಳು ತೃತೀಯ ಭಾಷೆಯಾಗಿ ತುಳು ಪಠ್ಯವನ್ನು ಅಧ್ಯಯನ ಮಾಡುತ್ತಿದ್ದಾರೆ. ರಾಜ್ಯ…

Read More

ಚೆರ್ಕಳ : ಬೈಕ್ ಗಳು ಡಿಕ್ಕಿ : ಓರ್ವ ಮೃತ್ಯು

ಕಾಸರಗೋಡು: ಚೆರ್ಕಳ ಬಳಿಯ ಪೊವ್ವಲ್ ನಲ್ಲಿ ಬೈಕುಗಳು ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಫಘಾತದಲ್ಲಿ ಓರ್ವ ಮೃತಪಟ್ಟಿದ್ದಾರೆ. ಪೊವ್ವಲ್ ನಿವಾಸಿ ಕಬೀರ್(42) ಮೃತಪಟ್ಟವರು. ಇಂದು (ಸೋಮವಾರ) ಬೆಳಗ್ಗೆ 7 ಗಂಟೆಗೆ ಈ ಘಟನೆ ನಡೆದಿದೆ. ಕಬೀರ್ ಅವರು ಪೊವ್ವಲ್ ಎಲ್.ಬಿ.ಎಸ್. ಇಂಜಿನಿಯರಿಂಗ್ ಕಾಲೇಜು ಬಳಿ ನೂತನ ಮನೆ ನಿರ್ಮಿಸಿದ್ದು ಅದರ ನಿನ್ನೆ (ಆದಿತ್ಯವಾರ) ಗೃಹಪ್ರವೇಶ ನಡೆದಿತ್ತು. ಇಂದು ಬೆಳಗ್ಗೆ ಅವರು ಮನೆಯಿಂದ ಬೋವಿಕಾನ ಭಾಗಕ್ಕೆ ಹೊರಟಾಗ ಅವರ ಬೈಕು ಮುಳ್ಳೇರಿಯ ಭಾಗದಿಂದ ಬರುತ್ತಿದ್ದ ಇನ್ನೊಂದು ಬೈಕಿಗೆ ಡಿಕ್ಕಿ…

Read More

ಚಿಕೂನ್ ಗುನ್ಯಕ್ಕೆ 10 ವರ್ಷದ ಬಾಲಕಿ ಬಲಿ

ಕಾಸರಗೋಡು: ಚಿಕೂನ್ ಗುನ್ಯ ರೋಗ ಬಾಧಿತಳಾದ 10 ವರ್ಷ ಪ್ರಾಯದ ಬಾಲಕಿ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಮೃತಪಟ್ಟ ಘಟನೆ ನಡೆದಿದೆ. ಪಾಣತ್ತೂರು ನಿವಾಸಿ ಗೌತಂ ಶರ್ಮ ಎಂಬವರ ಪುತ್ರಿ ಶಿವಾನಿ ಶರ್ಮ ಮೃತಪಟ್ಟ ಬಾಲಕಿ. ನಿನ್ನೆ (ಆದಿತ್ಯವಾರ) ಮುಂಜಾನೆ ಪೆರಿಯಾರಂ ಮೆಡಿಕಲ್‌ ಕಾಲೇಜಿನಲ್ಲಿ ಆಕೆ ಕೊನೆಯುಸಿರೆಳೆದಳು. ಕಳೆದ ಕೆಲವು ತಿಂಗಳುಗಳಿಂದ ಶಿವಾನಿ ಲಿವರ್ ಸಂಬಂಧ ರೋಗದಿಂದ ಬಳಲುತ್ತಿದ್ದರೆನ್ನಲಾಗಿದೆ. ರೋಗ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಶನಿವಾರದಂದು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಬಾಲಕಿಯ ಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ಪೆರಿಯಾರಂ…

Read More

272 .16 ಲೀಟರ್ ವಿದೇಶಿ ಮದ್ಯ ವಶ ಪಡಿಸಿದ ಅಬಕಾರಿ ಇಲಾಖೆ ಪರಾರಿಯಾದ ಆರೋಪಿಗಳು

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 272.16 ಲೀಟರ್ ಕರ್ನಾಟಕ ನಿರ್ಮಿತ ವಿದೇಶ ಮದ್ಯವನ್ನು ಕಾಸರಗೋಡು ಚೌಕಿ, ಸಿಪಿ.ಸಿ.ಆ‌ರ್.ಐ. ಪರಿಸರದಿಂದ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎಕ್ಸೆಸ್ ಎನ್ಫೋರ್ಸ್ ಮೆಂಟ್ & ಆಂಟಿ ನರ್ಕೋಟಿಕ್ ಸ್ಪೆಶಲ್ ತಂಡ ಹಾಗೂ ಎಕ್ಸೆಸ್ ಸರ್ಕಲ್ ಆಫೀಸ್ ತಂಡದ ನೇತೃತ್ವದಲ್ಲಿ ಕುಂಬಳೆ ಆರಿಕ್ಕಾಡಿ ಬಳಿ ವಾಹನ ತಪಾಸಣೆ ನಡೆಸುವ ವೇಳೆ ಕಾರೊಂದು ನಿಲ್ಲಿಸದೆ ಪರಾರಿಯಾಗಿತ್ತು. ಈ ಕಾರನ್ನು ಬೆನ್ನಟ್ಟಿ ಚೌಕಿ ಪರಿಸರದಿಂದ ಹಿಡಿದಾಗ ಕರ್ಣಾಟಕ ನಿರ್ಮಿತ ವಿದೇಶ ಮದ್ಯ ವಶಪಡಿಸಲಾಗಿದೆ. ಕಾರಿನಲ್ಲಿದ್ದವರು ಓಡಿ ಪರಾರಿಯಾದರು. ಅಸಿಸ್ಟೆಂಟ್…

Read More
error: Content is protected !!