ಬಂಟ್ವಾಳ:ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ,ಯುವ ಕಾಂಗ್ರೆಸ್ ,ಮಹಿಳಾ ಕಾಂಗ್ರೆಸ್ ಹಾಗೂ ಎನ್.ಎಸ್.ಯು.ಐ.ಇವರ ವತಿಯಿಂದ NEET. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ವಿರುದ್ದ ಬೃಹತ್ ಪ್ರತಿಭಟನೆ ಬಿಸಿರೋಡಿನ ಪ್ಲೈ ಓವರ್ ಕೆಳಭಾಗದಲ್ಲಿ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ಯುಪಿಎ ಸರಕಾರ ಇರುವಾಗ ಹಾಗೂ ಬಿಜೆಪಿ ಎನ್‌ಡಿಎ ಸರಕಾರದ ಅವಧಿಯಲ್ಲಿನ ಕಚ್ಚಾತೈಲದ ಬೆಲೆಯ ಬಗ್ಗೆ ಸಾರ್ವಜನಿಕರು ಅವಲೋಕನ ಮಾಡಬೇಕಾಗಿದೆ ಎಂದು ಹೇಳಿದರು.
ಅ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾಗಿದ್ದರೂ ಕೂಡ ಜನರಿಗೆ ಹೊರೆಯಾಗದಂತೆ ಯು.ಪಿ.ಎ.ಸರಕಾರ ಜನರಿಗೆ ಸುಲಭವಾಗಿ ಸಿಗುವಂತೆ ಮಾಡಿದೆ ಎಂದು ಅವರು ತಿಳಿಸಿದರು.
ಇವತ್ತು ನಿರಂತರವಾಗಿ ದುರುದ್ದೇಶದಿಂದ ಬೆಲೆ ಏರಿಕೆ ಮಾಡುತ್ತಾ ಇದೆ. ಬಿಜೆಪಿ ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸ ಮಾಡುತ್ತಿದೆ. ನಮ್ಮ ವರ್ತನೆಗಳು ಹಾಗೆ ಆಗಿವೆ.ಯಥಾಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಜಾಯಮಾನ ನಮ್ಮದಾಗಬೇಕು ಎಂದರು.
ಬಡವರ ಕಿಸೆಗೆ ಕೈ ಹಾಕಿ ಶ್ರೀಮಂತೆಮರ ಕಿಸೆಗೆ ಹಾಕುವುದು ಬಿಜೆಪಿ ಇತಿಹಾಸವಾದರೆ, ಶ್ರೀಮಂತರ ಕಿಸೆಯಿಂದ ಬಡವರ ಕಿಸೆಗೆ ಹಾಕುವುದು ಕಾಂಗ್ರೆಸ್ ಸಂಸ್ಕೃತಿ ಎಂದು ಅವರು ಹೇಳಿದರು. ಮೋದಿ ಏನು ಮಾಡಿದರೂ ಸರಿ ಎನ್ನುವ ಭಕ್ತರು,ಮೂರ್ಖರು ಇಲ್ಲಿ ಇದ್ದಾರೆ ಎಂದು ಲೇವಡಿ ಮಾಡಿದರು.
ದುರ್ಬಲ ವರ್ಗದವರು ಇರುವ ಪಕ್ಷದವರು ನಂಬುತ್ತಾರೆ ಎಂದು ಬಿಜೆಪಿ ಬುದ್ದಿವಂತರು ತಿಳಿದಿರಬಹುದು. ಆದರೆ ಕಾಂಗ್ರೆಸ್ ಪಕ್ಷದ ಜನರು ದಡ್ಡರಾಗಬಾರದು,ಮೋಸ ಹೋಗಬಾರದು ಎಂದು,ಸತ್ಯಾಸತ್ಯತೆ ಬಗ್ಗೆ ವಿಮರ್ಶೆ ಮಾಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರಿಗೆ ಒಮ್ಮೆ ಅವಕಾಶ ಮಾಡಿಕೊಡಿ,ಯಾವ ರೀತಿ ಆಡಳಿತ ಮಾಡುತ್ತಾರೆ ಎಂಬುದನ್ನು ನೋಡುವ ಅವಕಾಶ ನೀಡಿ ಎಂದು ಅವರು ತಿಳಿಸಿದರು.
ಅವಿದ್ಯಾವಂತ ಹೆಬ್ಬೆಟ್ಟು ಒತ್ತುವವರು ಬಿಜೆಪಿಯಲ್ಲಿ ಮಂತ್ರಿಗಳಾಗುತ್ತಿದ್ದಾರೆ,ಇದರಿಂದ ದೇಶಕ್ಕೆ ಕೇಡು ಎಂದ ಅವರು ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು ಒಂದು ಒತ್ತಾಯ ಮಾಡಿದರು.
ಇದು ಬ್ಯಾನರ್ ಹಾಕುವ ಕಾಲವಲ್ಲ,ಇದು ಜನರ ಸಮಸ್ಯೆಗೆ ಪರಿಹಾರ ಹುಡುಕುವ ಕಾಲ ಎಂದು ತಿಳಿಸಿದ ಅವರು ಬಿಜೆಪಿಯಿಂದ ದೇಶದ ಸ್ವಾಭಿಮಾನದ ಮೇಲೆ ದಾಳಿಯಾಗಿದೆ,ದೇಶದ ಮಾನಮರ್ಯಾದೆ ಕಳೆದುಹೋಗುವಂತಾಗಿದೆ ಎಂದರು.
ಎಂ.ಜಿ.ಹೆಗಡೆ ಮಾತನಾಡಿ, ಮೋದಿ ಸರ್ಕಾರ ಸರ್ವಾಧಿಕಾರಿದ ಮನಸ್ಥಿತಿಯಲ್ಲಿ ಪ್ರಶ್ನೆ ಕೇಳುವರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಒಡೆದ ಪ್ರಾಮಾಣಿಕವಾಗಿ ಜನಬೆಂಬಲ ಬಿಜೆಪಿಗಿಲ್ಲ, ಒಡೆದು ಆಳುವ ನೀತಿ ಬಿಜೆಪಿಯದ್ದು, ಹೆಣ ಹಾಕಿ ಮತಪಡೆಯವ ಬಿಜೆಪಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವತ್ತು ದೊಡ್ಡ ಮಾಫಿಯಾದ ಕೈಗೆ ದೇಶವನ್ನು ಆಡಳಿತ ಮಾಡಲು ಜನರು ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, ಜನಸಾಮಾನ್ಯರು ಬೆಲೆಏರಿಕೆಯಿಂದ ತತ್ತರಿಸಿಹೋದರೆ, ದೇಶದ ಪ್ರಧಾನಿ ವಿದೇಶ ಪ್ರವಾಸದ ಮೋಜಿನಲ್ಲಿ ಇರುವುದು ನ್ಯಾಯನಾ? ಎಂದು ಪ್ರಶ್ನೆ ಮಾಡಿದರು. ಕೇಂದ್ರ ಸರಕಾರದ ಜನವಿರೋಧಿ ಆಡಳಿತ ದೇಶವನ್ನು ಆರ್ಥಿಕವಾಗಿ ಹಿನ್ನಡೆಗೆ ತಳ್ಳುತ್ತಿದೆ ಎಂದು ಆರೋಪ ಮಾಡಿದರು.
ಪ್ರತಿಭಟನೆಯಲ್ಲಿ ಪಿಯೂಸ್ ಎಲ್ ರೋಡ್ರಿಗಸ್, ಬೇಬಿ ಕುಂದರ್, ಪದ್ಮಶೇಖರ್ ಜೈನ್, ಅಬ್ಬಾಸ್ ಅಲಿ, ಪದ್ಮನಾಭ ರೈ, ಸುದೀಪ್‌ಕುಮಾರ್ ಶೆಟ್ಟಿ, ಚಂದ್ರ ಶೇಖರವಭಂಡಾರಿ, ಬಾಲಕೃಷ್ಣ ಅಂಚನ್, ಸಂಜೀವ ಪೂಜಾರಿ, ಸದಾಶಿವ ಬಂಗೇರ, ಜಯಂತಿ ಪೂಜಾರಿ, ಮಧುಸೂದನ್, ಶೈಲಜಾ ರಾಜೇಶ್, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಮಹಮ್ಮದ್ ನಂದಾವರ, ಚಿತ್ತರಂಜನ್ ಶೆಟ್ಟಿ, ವಾಸು ಪೂಜಾರಿ, ಮೋಹನ್ ಶೆಟ್ಟಿ, ವೆಂಕಪ್ಪ ಪೂಜಾರಿ, ನಿರಂಜನ್ ರೈ, ಜಗದೀಶ್ ಕುಂದರ್, ಶೈಲೇಶ್ ಪೂಜಾರಿ, ಸಿದ್ದೀಕ್ ಬೋಗೊಡಿ, ಇಬ್ರಾಹಿಂ ನವಾಜ್, ಉಮೇಶ್ ನರಿಕೊಂಬು, ಮಹಮ್ಮದ್ ಶರೀಫ್, ಕುಶಲ ಪೆರಾಜೆ ಮತ್ತಿತರರು ಉಪಸ್ಥಿತರಿದ್ದರು.