ವಿವೇಕ್ ಎಕ್ಸ್‌ಪ್ರೆಸ್‌ನಲ್ಲಿಯೂ ಅತಿಯಾದ ನೂಕುನುಗ್ಗಲು ; ದೃಢೀಕೃತ ಟಿಕೆಟ್ ಹೊಂದಿದರೂ ಸಂಕಷ್ಟ ಅನುಭವಿಸಿದ ಕುಟುಂಬ
ಮಂಗಳೂರು: ವಿವೇಕ್ ಎಕ್ಸ್ಪ್ರೆಸ್ ರೈಲು ಸಂಖ್ಯೆ 22851 ರಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದು ಬೋಗಿಯಲ್ಲಿನ ಅನಧಿಕೃತ ಪ್ರಯಾಣಿಕರ ಪ್ರವೇಶದಿಂದ ಅತಿಯಾದ ನೂಕುನುಗ್ಗಲಿನಿಂದ ಕುಟುಂಬ ಒಂದು ಸಂಕಷ್ಟ ಅನುಭವಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಏಳು ಮಂದಿ ಸದಸ್ಯರ ಕುಟುಂಬವು ದೃಢೀಕೃತ ಟಿಕೆಟ್ ಹೊಂದಿದ್ದರೂ, ಬೋಗಿಯೊಳಗೆ ಅನಧಿಕೃತ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಿರುವುದರಿಂದ ಕುಳಿತುಕೊಳ್ಳಲು ಹಾಗೂ ಚಲಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಲಾಗಿದೆ. ಬೋಗಿಯ ದಾರಿಗಳು ಹಾಗೂ ಸಂಪರ್ಕ ಭಾಗಗಳಲ್ಲಿ ಜನ ಕುಳಿತಿರುವುದರಿಂದ ಶೌಚಾಲಯ ಬಳಸಲು…
