ಢಾಕಾ ಶಾಲಾ ಕಟ್ಟಡದ ಮೇಲೆ ತರಬೇತಿ ಜೆಟ್ ಬ್ಲಾಸ್ಟ್ : ಮಡಿದವರ ಸಂಖ್ಯೆ 27ಕ್ಕೆ ಏರಿಕೆ

ಢಾಕಾ:ಬಾಂಗ್ಲಾದೇಶದ ವಾಯುಪಡೆಯ ಎಫ್-7 ಬಿಜಿಐ ತರಬೇತಿ ಜೆಟ್ ಪತನಗೊಂಡು ಶಾಲಾ ಕಟ್ಟಡಕ್ಕೆ ಅಪ್ಪಳಿದ ದುರಂತಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿದವರ ಸಂಖ್ಯೆ ಇದೀಗ 27ಕ್ಕೆ ಏರಿಕೆಯಾಗಿದೆ.ಸಾವನ್ನಪ್ಪಿದವರಲ್ಲಿ 25 ವಿದ್ಯಾರ್ಥಿಗಳಿದ್ದಾರೆ . ಸುಮಾರು 170 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಹಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಶಾಲೆಯ ಸಿಬ್ಬಂದಿ ಸೈದೂರ್ ರೆಹಮಾನ್ ಮಾಹಿತಿ ನೀಡಿದ್ದಾರೆ.


ಜುಲೈ 21ರ ಮಧ್ಯಾಹ್ನ 1:06ರ ಸುಮಾರಿಗೆ ಬಾಂಗ್ಲಾದೇಶದ ವಾಯುಪಡೆಯ ಎಫ್-7 ಬಿಜಿಐ ತರಬೇತಿ ಜೆಟ್ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ಢಾಕಾದ ಉತ್ತರದ ಮೈಲ್‌ಸ್ಟೋನ್ ಶಿಕ್ಷಣ ಸಂಸ್ಥೆಯ ಕ್ಯಾಂಟೀನ್ ಮೇಲೆ ಪತನವಾಗಿತ್ತು.ಪತನವಾದ ಎಫ್-7 ಬಿಜಿಐ ತರಬೇತಿ ವಿಮಾನವು ಬಾಂಗ್ಲಾದೇಶದ ನಿರ್ವಹಿಸುತ್ತಿರುವ 16 ವಿಮಾನಗಳ ಪೈಕಿ ಒಂದಾಗಿದೆ. ಇದು ಚೀನಾದ ಜೆ-7 ಯುದ್ಧ ವಿಮಾನದ ಮುಂದುವರಿದ ಆವೃತ್ತಿಯ ವಿಮಾನವಾಗಿದೆ ಎಂದು ತಿಳಿದುಬಂದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!