ರಷ್ಯಾ ಅಧ್ಯಕ್ಷ ವ್ಯಾಡಿಮಿರ್ ಪುಟಿನ್ಗೆ ಪ್ರಧಾನಿ ನರೇಂದ್ರ ಮೋದಿ ಭಗವದ್ಗೀತೆ ಉಡುಗೊರೆ…. !

ಹೊಸದಿಲ್ಲಿ ಭಾರತ-ರಷ್ಯಾದ 23ನೇ ವಾರ್ಷಿಕ ಶೃಂಗಸಭೆಗಾಗಿ ರಷ್ಯಾ ಅಧ್ಯಕ್ಷ ವ್ಯಾಡಿಮಿರ್ ಪುಟಿನ್ ಅವರು ಗುರುವಾರ(ಡಿ.4) ಸಂಜೆ ಭಾರತಕ್ಕೆ ಆಗಮಿಸಿದ್ದಾರೆ. ಖುದ್ದು ದೆಹಲಿ ಏರ್ಪೋಟ್‌್ರಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರು ಪುಟಿನ್ ಅವರನ್ನು ಬರಮಾಡಿಕೊಂಡರು.
ರಷ್ಯಾ ಅಧ್ಯಕ್ಷ ವ್ಯಾಡಿಮಿರ್ ಪುಟಿನ್ ಅವರ ಎರಡು ದಿನಗಳ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಭಗವದ್ಗೀತೆಯ ರಷ್ಯನ್ ಆವೃತ್ತಿಯನ್ನು ಉಡುಗೊರೆಯಾಗಿ ನೀಡಿದರು.

ಪ್ರಧಾನಿ ಮೋದಿ ಅವರು X ನಲ್ಲಿ ಆ ಕ್ಷಣದ ಛಾಯಾಚಿತ್ರವನ್ನು ಹಂಚಿಕೊಂಡಿದ್ದು, ಅಧ್ಯಕ್ಷ ಪುಟಿನ್ ಅವರಿಗೆ ರಷ್ಯನ್ ಭಾಷೆಯಲ್ಲಿ ಗೀತೆಯ ಪ್ರತಿಯನ್ನು ನೀಡಲಾಯಿತು. ಗೀತೆಯ ಬೋಧನೆಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಪೂರ್ತಿ ನೀಡುತ್ತವೆ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!