ಉಡುಪಿ:ಅಲೆವೂರಿನಲ್ಲಿ ಶೀರೂರು ಶ್ರೀಗಳಿಗೆ ಹುಟ್ಟೂರ ಸನ್ಮಾನ ನಡೆಯಿತು.ಅಲೆವೂರು ಗುಡ್ಡೆ ಅಂಗಡಿ ಕಟ್ಟೆ ಗಣಪತಿ ಸನ್ನಿಧಿಯಲ್ಲಿ ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಹುಟ್ಟೂರ ಸನ್ಮಾನ ನಡೆಯಿತು. ಅಲೆವೂರಿಗೆ ಆಗಮಿಸಿದ ಶ್ರೀಗಳಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಭವ್ಯ ಸ್ವಾಗತ ಕೋರಲಾಯಿತು.
ಅಲೆವೂರು ಕಟ್ಟೆ ಗಣಪತಿ ಸನ್ನಿಧಿ ಶೀರೂರು ಮಠಾಧೀಶರಾಗಿದ್ದ ಲಕ್ಷ್ಮೀವರ ತೀರ್ಥರಿಗೆ ಬಹಳ ಪ್ರಿಯವಾದ ತಾಣ. ಈ ನಿಟ್ಟಿನಲ್ಲಿ ಅಲೆವೂರಿನ ಭಕ್ತರಿಗೆ ಶೀರೂರು ಪರ್ಯಾಯ ವಿಶೇಷ ಸಂಭ್ರಮವನ್ನು ತಂದಿದೆ. ಬಳಿಕ ಕಟ್ಟೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ಗಳು ಆರತಿ ಬೆಳಗಿದರು.
ಸಮಿತಿಯ ಪರವಾಗಿ ಊರ ನಾಗರಿಕರ ಪರವಾಗಿ ಶ್ರೀಗಳಿಗೆ ಗೌರವದ ಅಭಿನಂದನೆ ಸಲ್ಲಿಸಲಾಯಿತು.ನಂತರ ಸಂಕಲ್ಪ ಸಭಾಂಗಣದಿಂದ ಶ್ರೀಪಾದರಿಗೆ ವಿವಿಧ ಭಜನಾ ತಂಡಗಳು, ಕೊಂಬು, ವಾದ್ಯ, ಚೆಂಡೆ, ಬ್ಯಾಂಡ್ ಗಳೊಂದಿಗೆ ರಜತ ವಾಹನದಲ್ಲಿ ಅಲೆವೂರು ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ನಡೆಯಿತು.ಮೆರವಣಿಗೆ ಬಳಿಕ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಅದ್ಯಕ್ಷ ಸಮರನಾಥ್ ಶೆಟ್ಟಿ , ಊರ ನಾಗರಿಕರು ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.