ಪಟ್ಲ ಫೌಂಡೇಶನ್ ಟ್ರಸ್ಟ್: ಕೇಂದ್ರೀಯ ಮಹಿಳಾ ಘಟಕದ ವಾರ್ಷಿಕೋತ್ಸವ

ಹಳೆಯಂಗಡಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಕೇಂದ್ರ ಮಹಿಳಾ ಫಟಕದ ನವಮ ವಾರ್ಷಿಕೋತ್ಸವ ಪಾವಂಜೆ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಅಶೋಕ್ ಶೆಟ್ಟಿ ತಡಂಬೈಲ್ ವಹಿಸಿದ್ದರು.
ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಗುತ್ತು ಸತೀಶ್ ಶೆಟ್ಟಿ ಅವರು ಅಸಕ್ತ ಕಲಾವಿದರ ಬದುಕಿಗೆ ಶಕ್ತಿ ತುಂಬಿದ್ದಾರೆ. ಕಲಾವಿದರ ವೈಯಕ್ತಿಕ ಬದುಕಿನ ಸತ್ಯವನ್ನು ಶೋಧಿಸಿದ ಪಟ್ಲರವರು ಆ ಕಾರಣಕ್ಕಾಗಿಯೇ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಿ ಕಲಾವಿದರಿಗೆ ಆಸರೆಯಾದರು ಎಂದವರು ತಿಳಿಸಿದರು.


ಕಲಾವಿದರಿಗೆ ಮನೆ ನಿರ್ಮಣಕ್ಕೆ ಕಲಾವಿದರ ಮಕ್ಕಳಿಗೆ ಶಿಕ್ಷಣ ಮತ್ತು ಕಲಾವಿದರ ಆರೋಗ್ಯಕ್ಕೆ ಟ್ರಸ್ಟ್ ನಿಂದ ಸಹಾಯ ಮಾಡುತ್ತಿರುವುದನ್ನು ನಾವು ಕಾಣಬಹುದಾಗಿದೆ. ಟ್ರಸ್ಟ್ ಮೂಲಕ ನಿರಂತರ ಕಾರ್ಯಯೋಜನೆಗಳನ್ನು ಕೈಗೊಳ್ಳುತಿರುವ ಪಟ್ಲರ ಸಾಧನೆ ಶ್ಲಾಘನೆಗೆ ಪಾತ್ರವಾಗಿದೆ ಎಂದರು.
ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಕೇಂದ್ರೀಯ ಮಹಿಳಾ ಘಟಕ ಕಳೆದ ಒಂಬತ್ತು ವರ್ಷಗಳಿಂದ ಕಲಾ ಸೇವೆ ಮಾಡುತ್ತಾ ಬಂದಿರುತ್ತದೆ. ಕೇಂದ್ರೀಯ ಘಟಕ ಎಲ್ಲಾ ಕಡೆ ವಿಸ್ತರಣೆಯಾಗಲಿ ಎಂದರು.
ಸಮಾರಂಭದಲ್ಲಿ ಕಲಾ ಪೋಷಕರಾದ ಶಕುಂತಲಾ ರಮಾನಂದ ಭಟ್ ಇಡ್ಯಾ, ರೂಪರಾಣಿ ಶೆಟ್ಟಿ ಬೆಳ್ಮಣ್, ಆಶಾ ಪ್ರಭಾಕರ ರಾವ್ ಮಂಗಳೂರು, ಕವಿತಾ ಶಾಸ್ತ್ರಿ ಮಂಗಳೂರು, ಸರೋಜ ಟಿ ಶೆಟ್ಟಿ ಸುರತ್ಕಲ್, ರಾಜೇಶ್ವರಿ ಡಿ ಶೆಟ್ಟಿ ಸುರತ್ಕಲ್, ವಿದ್ಯಾಚಂದ್ರಹಾಸ ಶೆಟ್ಟಿ ಬಂಟ್ವಾಳ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸುರತ್ಕಲ್ ದುರ್ಗಾಂಬಾ ಮಹಿಳಾ ತಾಳಮದ್ದಲೆ ಬಳಗದ ಅಧ್ಯಕ್ಷರಾದ ಸುಲೋಚನ ರಾವ್ ತಡಂಬೈಲ್, ಕೆರೆಕಾಡು ಮಕ್ಕಳ ಮೇಳದ ರಂಗಸಹಾಯಕರಾದ ರೇಷ್ಮಾರನ್ನು ಸನ್ಮಾನಿಸಲಾಯಿತು. ಪೂಜಾ ಕೆರೆಕಾಡು ಅವರಿಗೆ ಯಕ್ಷಧ್ರುವ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿ ಎ ಸುದೇಶ್ ಕುಮಾರ್ ರೈ, ಕೇಂದ್ರೀಯ ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆಳ್ವ, ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಪೂರ್ಣಿಮಾ ಶಾಸ್ತ್ರಿ ಉಪಸ್ಥಿತರಿದ್ದರು. ಡಾ ಸುಧಾ ಚಂದ್ರಶೇಖರ ಶೆಟ್ಟಿ, ವಸುಂಧರ ಹರೀಶ್ ಶೆಟ್ಟಿ ಕಾರ್ಯಕ್ರಮ‌ ನಿರ್ವಹಿಸಿದರು. ಬಳಿಕ ಪಟ್ಲ ಸತೀಶ್ ಶೆಟ್ಟಿ ಇವರ ನೇತೃತ್ವದಲ್ಲಿ ಪಾವಂಜೆ ಮೇಳದವರಿಂದ ಛಾಯಾನಂದನ ಯಕ್ಷಗಾನ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!