ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದ ಅಡ್ಡೆಗೆ ವಿಟ್ಲ ಪೋಲೀಸರ ತಂಡ ದಾಳ ನಡೆಸಿದ್ದು ಅರೋಪಿಗಳ ಸಹಿತ ಮರಳುಗಾರಿಕೆಗೆ ಬಳಸಲಾದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಟ್ವಾಳ, ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಎಂಬಲ್ಲಿ, ಆರೋಪಿತನಾದ ಅಬ್ದುಲ್ ಸಮದ್ ಎಂಬಾತನು ಹೊಳೆಯಿಂದ ಯಂತ್ರದ ಮೂಲಕ ಮರಳನ್ನು ಅಕ್ರಮವಾಗಿ ತೆಗೆದು ಸಂಗ್ರಹಿಸಿಟ್ಟಿರುವ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ವಿಟ್ಲ ಪೋಲೀಸರಿಂದ ದಾಳಿ ನಡೆದಿದೆ.
ಕೇರಳ ಗಡಿಭಾಗದಿಂದ ಅಂದಾಜು ಒಂದು ಕಿ.ಮೀ ದೂರದ ಸಾಲೆತ್ತೂರು ಕಟ್ಟತ್ತಿಲ ಹೊಳೆಯ ಸೇತುವೆ ಬಳಿ, ಸುಮಾರು 2 ರಿಂದ 3 ಪಿಕಪ್ ನಷ್ಟು ಮರಳು ಮತ್ತು ಹೊಳೆಯಿಂದ ಮರಳನ್ನು ತೆಗೆಯಲು ಉಪಯೋಗಿಸುತ್ತಿದ್ದ ಯಂತ್ರ, ಕಬ್ಬಿನದ ಜಾಲರಿ, ಪೈಬರ್ ಬುಟ್ಟಿಗಳು, ಕಬ್ಬಿಣದ ಹಾರೆ ಹಾಗೂ ಕೃತ್ಯಕ್ಕೆ ಬಳಸಿದ ಇತರೆ ಸೊತ್ತುಗಳು ಕಂಡುಬಂದಿದ್ದು, ಸದ್ರಿ ಸೊತ್ತುಗಳನ್ನು ಸ್ವಾಧೀನಪಡಿಸಿ, ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ:93/2025 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೋಲೀಸ್ ಇಲಾಖೆ ಮಾಹಿತಿ ನೀಡಿದೆ.