ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಕನ್ನಡ ಸೇನೆಯು ಸುಮಾರು ನಾಲ್ಕು ದಶಕಗಳಿಂದಲೂ ಸತತವಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿರುತ್ತದೆ. ಇದರ ರಾಜ್ಯಾಧ್ಯಕ್ಷರಾಗಿ ಕೆ ಆರ್ ಕುಮಾರ್ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುತ್ತಾರೆ. ಕನ್ನಡ ಸೇನೆ ಘಟಕಗಳು ಎಲ್ಲಾ ಜಿಲ್ಲೆಯಲ್ಲೂ ರೂಪುಗೊಂಡಿದ್ದು ಅದರಂತೆ ದಕ್ಷಿಣ ಕನ್ನಡ ಜಿಲ್ಲೆಗೂ ಸಹ ವಿಸ್ತರಿಸುವ ಉದ್ದೇಶವನ್ನು ಹೊಂದಿದೆ ಎಂದು ಸಮಿತಿಯ ಉಪಾಧ್ಯಕ್ಷರಾದ ಎನ್ ನಾಗೇಂದ್ರ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿಯಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಿತಿಯು ಈಗಾಗಲೇ
ಹೊಸ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕನ್ನಡ ಕಟ್ಟುವ ಕಾಯಕದಲ್ಲಿ ನಿರತವಾಗಿದೆ . ಜಿಲ್ಲಾ ಘಟಕವನ್ನು ರಚನೆ ಮಾಡಿ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಾದ ಕಾರ್ಯ ಚಟುವಟಿಗಳ ಬಗ್ಗೆ ಸರಿಯಾದ ತೀರ್ಮಾನವನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು .
ಕನ್ನಡ ಸೇನೆಯ ಧೈಯೋದ್ದೇಶವನ್ನು ತಿಳಿಸಿ , ನಾಡು ನುಡಿ ನೆಲ ಜಲ ಸಂಸ್ಕೃತಿಯ ರಕ್ಷಣೆ , ಕನ್ನಡವನ್ನು ಬಳಸುವುದು ಬೆಳೆಸುವುದು ಮತ್ತು ಉಳಿಸುವುದು , ರಕ್ತದಾನ ಶಿಬಿರ , ದಂತ ವೈದ್ಯಕೀಯ ಚಿಕಿತ್ಸೆ ಶಿಬಿರ , ವಿವಿಧ ಕ್ಷೇತ್ರದ ಪ್ರತಿಭೆಗಳನ್ನು ಗುರುತಿಸುವುದು ,
ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತರುವ ಸಲುವಾಗಿ ಸಂಗೀತ, ನೃತ್ಯ, ನಾಟಕ,ಚಿತ್ರಕಲೆ ಭಜನೆ ಮುಂತಾದ ಕ್ಷೇತ್ರದಲ್ಲಿ ಇರುವವರಿಗೆ ಪ್ರೋತ್ಸಾಹ ನೀಡುವುದು ಹೀಗೆ ನಾನಾ ಸಾಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸೇನೆಯ ಜಿಲ್ಲಾಧ್ಯಕ್ಷರಾದ ರತ್ನಾಕರ್ ಸುವರ್ಣ ಜಪ್ಪು, ಸಮಿತಿಯ ಸದಸ್ಯರಾದ ಮೊಹಮ್ಮದ್ ಸುನೈಫ್ ಅಬ್ದುಲ್ಲ ಡೆಂಜಿಪಾಡಿ , ರಾಘವೇಂದ್ರ ಎಂ.ಎಸ್ , ಸತೀಶ್ ಶೆಟ್ಟಿ ಸಹಿತ ಮುಂತಾದವರು ಉಪಸ್ಥಿತರಿದ್ದರು .