ಸಂಯುಕ್ತ ಟ್ರೇಡ್ ಯೂನಿಯನ್‌ಗಳು ಕರೆ ನೀಡಿರುವ ರಾಷ್ಟ್ರೀಯ ಭಾರತ ಬಂದ್ ಯಶಸ್ವಿ

ಮಂಜೇಶ್ವರ: ಕೇಂದ್ರ ಸರಕಾರದ ಕಾರ್ಮಿಕ ಹಾಗೂ ಕೃಷಿಕ ವಿರೋಧಿ ನೀತಿಗಳಿಗೆ ವಿರೋಧವಾಗಿ ಸಂಯುಕ್ತ ಟ್ರೇಡ್ ಯೂನಿಯನ್‌ಗಳು ಕರೆ ನೀಡಿರುವ ರಾಷ್ಟ್ರೀಯ ಭಾರತ ಬಂದ್ ಮಂಜೇಶ್ವರದಲ್ಲಿ ಬಹುತೇಕ ಪೂರ್ಣಗೊಂಡಿದೆ.
ಮಂಗಳವಾರ ರಾತ್ರಿ 12ರಿಂದ ಬುಧವಾರ ರಾತ್ರಿ 12ರವರೆಗೆ 24 ಗಂಟೆಗಳ ಕಾಲ ಮುಷ್ಕರವಾಗಿದ್ದು, ಈ ಅವಧಿಯಲ್ಲಿ ಮಂಜೇಶ್ವರ ಸಂಪೂರ್ಣ ಸ್ಥಬ್ಧವಾಗಿದೆ.

ಖಾಸಗಿ ಬಸ್‌ಗಳ ಜೊತೆ ಜೆ.ಎಸ್.ಆರ್.ಟಿ.ಸಿ ಕೂಡ ಭಾರತ ಬಂದ್ ಮುಷ್ಕರಕ್ಕೆ ಬೆಂಬಲ ನೀಡಿರುವುದರಿಂದ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಬೆಳಿಗ್ಗೆಯಿಂದ ಕರ್ನಾಟಕ ಕೆ.ಎಸ್.ಆರ್.ಟಿ.ಸಿ ಬಸ್‌ಗಳೂ ರಸ್ತೆಗಿಳಿದಿಲ್ಲ. ಇವು ಎಲ್ಲವೂ ಪ್ರಯಾಣಿಕರಿಗೆ ತೀವ್ರ ತೊಂದರೆಯನ್ನು ಉಂಟುಮಾಡಿದೆ.

ಮಂಜೇಶ್ವರದಲ್ಲಿ ಕೆಲವೊಂದು ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿದ್ದರೂ ಆದರೆ ಬಹುತೇಕ ಅಂಗಡಿಗಳು, ಮಾರುಕಟ್ಟೆಗಳು ಸಂಪೂರ್ಣವಾಗಿ ಮುಚ್ಚಿವೆ. ಹೊಸಂಗಡಿಯಲ್ಲಿ ಪ್ರತಿಭಟನಾಕಾರರು ಭಾರಿ ಮೆರವಣಿಗೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!