ಮಂಗಳೂರು: ಜಗದ್ಗುರು ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಕಾಶೀಮಠಾಧೀಶರಾದ ಪರಮಪೂಜ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮಂಗಳೂರಿನ ಕೊಂಚಾಡಿಯಲ್ಲಿರುವ ಕೆನರಾ ವಿಕಾಸ ಕಾಲೇಜು ಮೈದಾನದಲ್ಲಿ ಶತಸ್ಮರಣ ಶತವಾದ್ಯನಮನ ಕಾರ್ಯಕ್ರಮ ನಡೆಯಿತು.
ಕರ್ನಾಟಕ, ಕೇರಳ, ಮಹಾರಾಷ್ಟ್ರ ಸಹಿತ ಭಾರತದ ವಿವಿಧ ರಾಜ್ಯಗಳ 125 ಕಲಾವಿದರು ಒಂದೇ ವೇದಿಕೆಯಲ್ಲಿ ತಬಲಾ, ಹಾರ್ಮೋನಿಯಂ, ವೀಣೆ, ಸಿತಾರ , ಕೊಳಲು ಸಹಿತ ವಿವಿಧ ವಾದ್ಯಗಳನ್ನು ನುಡಿಸುವ ಮೂಲಕ ವಾದ್ಯ ನಮನ ಸಲ್ಲಿಸಿದರು.