ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆದ ಆದಿಶಿಲೆ ಪ್ರತಿಷ್ಠೆ

ಮಂಜೇಶ್ವರ:ಕನಿಲ ಶ್ರೀ ಭಗವತಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳ ಅಂಗವಾಗಿ ಕ್ಷೇತ್ರದ ಅತಿಪ್ರಧಾನ ಧಾರ್ಮಿಕ ಕಾರ್ಯಕ್ರಮವಾದ ದಂಬೆ ಕಲ್ಲು ಆದಿಶಿಲೆ ಪ್ರತಿಷ್ಠೆ ಕಾರ್ಯಕ್ರಮವು ದಿನಾಂಕ 21.01.2026 ಬುಧವಾರ ಬೆಳಗ್ಗೆ 8 ಗಂಟೆಗೆ ಕ್ಷೇತ್ರದಲ್ಲಿ ಭಕ್ತಿಭಾವಪೂರ್ಣವಾಗಿ ಮತ್ತು ಯಶಸ್ವಿಯಾಗಿ ನೆರವೇರಿತು.

ಕ್ಷೇತ್ರದ ಆಚಾರಪಟ್ಟವರು ಹಾಗೂ ಗುರಿಕಾರರ ಪವಿತ್ರ ವಿಧಿವಿಧಾನಗಳೊಂದಿಗೆ ಆದಿಶಿಲೆ ಪ್ರತಿಷ್ಠೆ ನೆರವೇರಿಸಲ್ಪಟ್ಟಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಊರಿನ ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿ ಶ್ರೀ ಭಗವತಿಯ ಕೃಪೆಗೆ ಪಾತ್ರರಾದರು.

ಕಾರ್ಯಕ್ರಮದ ವೇಳೆ ವೇದಮಂತ್ರೋಚ್ಚಾರಣೆ, ಪೂಜೆ–ಪುನಸ್ಕಾರಗಳು ಶ್ರದ್ಧಾಭಕ್ತಿಯಿಂದ ನಡೆದವು. ಜೀರ್ಣೋದ್ಧಾರ ಕಾರ್ಯಗಳು ಸುಗಮವಾಗಿ ಹಾಗೂ ವೇಗವಾಗಿ ಸಾಗುತ್ತಿರುವುದಕ್ಕೆ ಭಕ್ತರು ಸಂತಸ ವ್ಯಕ್ತಪಡಿಸಿದರು.

ಅಂತಿಮವಾಗಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಭಕ್ತಾದಿಗಳಿಗೆ ಹಾಗೂ ಸೇವಾರ್ಥಿಗಳಿಗೆ ಕನಿಲ ಶ್ರೀ ಭಗವತಿ ಕ್ಷೇತ್ರ ಜೀರ್ಣೋದ್ಧಾರ ಸಮಿತಿಯವರು ಕೃತಜ್ಞತೆ ಸಲ್ಲಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!