ಮಂಗಳೂರು : ಬೆಳ್ತಂಗಡಿ ಕಣಿಯೂರು ಗ್ರಾಮದ ಮುದಲ್ತಿಯಾರ್ ಎಂಬಲ್ಲಿ ಅಕ್ರಮವಾಗಿ ಡೀಸಿಲ್‌ನ್ನು ಸಂಗ್ರಹ ಮಾಡಲಾಗಿದ್ದು, ಅದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬ್ಯಾರಲ್ ಮತ್ತು ಕ್ಯಾನ್ ಗಳಲ್ಲಿ ಡೀಸಿಲ್ ಶೇಖರಿಸಿಟ್ಟುರುವುದಾಗಿ ಮಾಹಿತಿ ಬಂದ ಮೇರೆಗೆ, ಉಪ್ಪಿನಂಗಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರು ಹಾಗೂ ಉಪ್ಪಿನಂಗಡಿ ಠಾಣಾಧಿಕಾರಿಗಳನ್ನು ಕರೆಸಿ ಬೆಳ್ತಂಗಡಿ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ ದಾಳಿ ನಡೆಸಿದ್ದಾರೆ. ನಾಲ್ಕು ಸಾವಿರ ಲೀಟರ್ ಡೀಸೆಲ್ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ.
ಮಾರ್ಚ್ 9ರಂದು ರಾತ್ರಿ ಪೊಲೀಸರು ಕಣಿಯೂರು ನಿವಾಸಿಯೊಬ್ಬರ ಮನೆಯ ಸಮೀಪದ ಶೆಡ್ ನಲ್ಲಿ ತಪಾಸಣೆ ನಡೆಸಿದಾಗ, ಸುಮಾರು 200 ಲೀಟರ್ ಸಾಮರ್ಥ್ಯದ 20 ಬ್ಯಾರೆಲ್ ಹಾಗೂ ಸುಮಾರು 35 ಲೀಟರ್ ಸಾಮರ್ಥ್ಯದ 05 ಕ್ಯಾನ್ ಗಳಲ್ಲಿ ಒಟ್ಟು ಸುಮಾರು 4,175 ಲೀಟರ್ ಡೀಸೆಲ್ ತುಂಬಿಟ್ಟಿರುವುದು ಕಂಡುಬಂದಿತ್ತು.
ಸ್ಥಳದಲ್ಲಿ ಇನ್ನಷ್ಟು ಖಾಲಿ ಬ್ಯಾರೆಲ್ ಗಳು ಹಾಗೂ ಖಾಲಿ ಕ್ಯಾನ್ ಮತ್ತು ಇತರೇ ಸೊತ್ತುಗಳು ಪತ್ತೆಯಾಗಿವೆ.