ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಗ್ರ್ಯಾಂಡ್ ವಿನ್ನರ್ ಕಿರೀಟ ಮುಡಿಗೇರಿಸಿಕೊಂಡ ಮಂಗಳೂರಿನ ಬೆಡಗಿ ವಿದ್ಯಾ ಸಂಪತ್

ಪಿಲಿಪೈನ್ಸ್‌ನಲ್ಲಿ ಡಿ.2ರಿಂದ ಡಿ.10ರವರೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಗ್ರ್ಯಾಂಡ್ ವಿನ್ನರ್ ಪ್ರಶಸ್ತಿಯನ್ನು ಮಂಗಳೂರು ಮೂಲದ ವಿದ್ಯಾ ಸಂಪತ್ ಪಡೆದುಕೊಂಡಿದ್ದಾರೆ.ಪಿಲಿಫೈನ್ಸ್‌ನ ನಡೆದ ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಸ್ಪರ್ಧೆಯೂ ಒಂಬತ್ತು ದಿನಗಳ ಕಾಲ ನಡೆದಿದ್ದು, 22ಕ್ಕೂ ಅಧಿಕ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ನಾನಾ ದೇಶಗಳ ನಡುವೆ ಭಾರತವನ್ನು ಪ್ರತಿನಿಧಿಸಿದ ವಿದ್ಯಾ ಸಂಪತ್ ಗ್ರ್ಯಾಂಡ್ ವಿನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಸ್ಪರ್ಧೆಯೂ ವಿವಿಧ ಹಂತಗಳಲ್ಲಿ ನಡೆದಿದ್ದು, ಟ್ಯಾಲೆಂಟ್ ರೌಂಡ್, ರಾಷ್ಟ್ರೀಯ ಕಾಸ್ಟ್ಯೂಮ್, ಕ್ಲೋಸ್ ರೂಂ ಇಂಟರ್‌ವ್ಯೂ ಸೇರಿದಂತೆ ಅನೇಕ ಹಂತಗಳಲ್ಲಿ ನಡೆದಿದ್ದು, ನ್ಯಾಷನಲ್ ಕಾಸ್ಟ್ಯೂಮ್‌ಗೆ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ, ನವಿಲು ಹಾಗೂ ತಾವರೆ ಹೂವಿನ ಸಂಕೇತ ಹೊಂದಿರುವ ವಸ್ತ್ತ ಮನ ಸೆಳೆದಿತ್ತು.ಪತ್ರಿಕಾಗೋಷ್ಠಿಯಲ್ಲಿ ಮಿಸೆಸ್‌ ಇಂಡಿಯಾ ಕರ್ನಾಟಕ ಮಂಗಳೂರು ನಿರ್ದೇಶಕ ಪಾತ್‌ವೇ ಎಂಟರ್‌ಪ್ರೈಸಸ್ ಮಾಲಕ ದೀಪಕ್ ಗಂಗೂಲಿ, ಮರ್ಸಿ ವೀಣಾ ಡಿಸೋಜಾ ಉಪಸ್ಥಿತರಿದ್ದರು. ತವರಿಗೆ ಮರಳಿದ ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಕಿರೀಟ ಗೆದ್ದ ವಿದ್ಯಾ ಸಂಪತ್‌ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ

ಪಿಲಿಪೈನ್ಸ್‌ನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಗ್ರ್ಯಾಂಡ್ ವಿನ್ನರ್ ಪ್ರಶಸ್ತಿ ಗೆದ್ದ ಮಂಗಳೂರಿನ ವಿದ್ಯಾ ಸಂಪತ್ ಸೋಮವಾರ ತವರಿಗೆ ಮರಳಿದ ಅವರಿಗೆ ಮಂಗಳೂರು‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.ವಿಮಾನ ನಿಲ್ದಾಣದಲ್ಲಿ ತುಳುನಾಡನ್ನು ಪ್ರತಿನಿಧಿಸುವ ಬಾವುಟ ಹಾಗೂ ಭಾರತದ ಧ್ವಜಗಳೊಂದಿಗೆ ಆಗಮಿಸಿದ ವಿದ್ಯಾ ಸಂಪತ್ ಅವರಿಗೆ ಚೆಂಡೆ ವಾದನ ಸಹಿತವಾಗಿ ಸ್ವಾಗತಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಬಂಧು ಮಿತ್ರರು ಮಾಲೆ ಹಾಕಿ, ಹೂಗುಚ್ಛ ನೀಡಿ, ಅಪ್ಪುಗೆ ನೀಡಿ ಹಾರೈಸಿ ಬರ ಮಾಡಿಕೊಂಡರು.

ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ನಿರ್ದೇಶಕರಾದ ಪಾತ್‌ವೇ ಮಾಡೆಲಿಂಗ್ ಸ್ಟುಡಿಯೋದ ದೀಪಕ್ ಗಂಗೂಲಿ, ಮರ್ಸಿ ಬ್ಯೂಟಿ ಅಕಾಡೆಮಿಯ ಮರ್ಸಿ ವೀಣಾ ಡಿಸೋಜಾ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

SHARE
Loading spinner

One thought on “ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಗ್ರ್ಯಾಂಡ್ ವಿನ್ನರ್ ಕಿರೀಟ ಮುಡಿಗೇರಿಸಿಕೊಂಡ ಮಂಗಳೂರಿನ ಬೆಡಗಿ ವಿದ್ಯಾ ಸಂಪತ್

Leave a Reply

Your email address will not be published. Required fields are marked *

error: Content is protected !!