ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ: ಮನೆಯ ಅಂಗಳಕ್ಕೆ ಕುಸಿದ ತೆಂಗಿನ ಮರ!

ಮನೆಯ ಮುಂಭಾಗದಲ್ಲಿದ್ದ ತೆಂಗಿನ ಮರ ತುಂಡಾಗಿ ಮನೆಯ ಅಂಗಳಕ್ಕೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೈಚಾರ್ ಎಂಬಲ್ಲಿ ನಡೆದಿದೆ.
ಮನೆಯ ಅಂಗಳದಲ್ಲಿ ನಿಂತಿದ್ದ ಶಾಫಿ ಪ್ರಗತಿಯವರ ಹಿರಿಯ ಸಹೋದರ ಹಸೈನಾರ್‌ ಎಂಬುವವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

ಮನೆಯ ಸ್ಲ್ಯಾಬ್ ಮೇಲಿನಿಂದ ಬೀಳುತ್ತಿದ್ದ ಮಳೆ ನೀರನ್ನು ಬಕೆಟ್‌ನಲ್ಲಿ ತುಂಬುತ್ತಿದ್ದ ವೇಳೆ ಈ ಘಟನೆ ನಡೆದಿದೆ. ತುಂಡಾಗಿ ತೆಂಗಿನ ಮರ ಬೀಳುವುದನ್ನು ಕಂಡ ಇವರು ಅಲ್ಲಿಂದ ಓಡಿ ಅಪಾಯದಿಂದ ಪಾರಾದರು. ಇದೇ ಸ್ಥಳದಲ್ಲಿ ಘಟನೆ ಸಂಭವಿಸುವ ಮೊದಲು ಶಾಫಿಯವರ ತಾಯಿ ಆ ಜಾಗದಲ್ಲಿದ್ದರೆಂದು ತಿಳಿದು ಬಂದಿದೆ. ಮರ ಬೀಳುವ ದೃಶ್ಯ ಸಿಸಿ ಟಿವಿ ಫೂಟೇಜ್‌ನಿಂದ ಲಭಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!