123ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಅಮೃತ ಪ್ರಕಾಶ ಪತ್ರಿಕೆ ಹಾಗೂ ಅಶೋಕನಗರ ಆಂಗ್ಲ ಮಾಧ್ಯಮ ಶಾಲೆ ಜಂಟಿ ಆಶ್ರಯದಲ್ಲಿ123ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮವು ಅಶೋಕನಗರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 28 ನವೆಂಬರ್ 2026 ಶನಿವಾರ 10:15 ರಿಂದ 11ರ ತನಕ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶೋಕನಗರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿಣಿ ಶ್ರೀಮತಿ ಪೂರ್ಣಿಮಾ ವಹಿಸುವುದು. ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ತುಳು ಕನ್ನಡ ಬರಹಗಾರ್ತಿ ರೂಪಕಲಾ ಆಳ್ವ ,ಹಾಗೂ ಹಿರಿಯ ಸಾಹಿತಿ ಎನ್.ಸುಬ್ರಾಯ ಭಟ್ ಮತ್ತು ರೂವಾರಿ ಡಾಟ್ ಕಾಮ್ ಡಿಜಿಟಲ್ ಪತ್ರಿಕೆ ಪ್ರಧಾನ ಸಂಪಾದಕಿ ಶ್ರೀಮತಿ ರತ್ನಾವತಿ ಜೆ ಬೈಕಾಡಿ. ಅತಿಥಿಗಳಾಗಿ ಭಾಗವಹಿಸುವರು. ಅಮೃತ ಪ್ರಕಾಶ ಪತ್ರಿಕೆ , ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು , ನಿವೃತ್ತ ಶಿಕ್ಷಕಿ ಹಾಗೂ ಸಾಹಿತಿ ಡಾ. ಅರುಣ ನಾಗರಾಜ್. ಉಪಸ್ಥಿತರಿರುವರು. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

