ನವರಾತ್ರಿಗೆ ಉಡುಗೆರೆಕೊಟ್ಟ ನಂದಿನಿ ಸಂಸ್ಥೆ ….. !

ಬೆಂಗಳೂರು: ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇಕಡ 12 ರಿಂದ ಶೇ. 5ಕ್ಕೆ ಇಳಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22 ರಿಂದ ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ಸೇರಿದಂತೆ ನಂದಿನಿ ವಿವಿಧ ಉತ್ಪನ್ನಗಳ ದರ ಕಡಿಮೆಯಾಗಲಿದೆ.


ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ(ಕೆಎಂಎಫ್) ನಿಂದ ಕೇಂದ್ರ ಸರ್ಕಾರದ ಸೂಚನೆಯಂತೆ ಉತ್ಪನ್ನಗಳ ಜಿಎಸ್‌ಟಿ ಕಡಿಮೆ ಮಾಡಲು ಮುಂದಾಗಿದೆ.ಹಾಲಿನ ಉತ್ಪನ್ನಗಳ ಜಿಎಸ್ಟಿ ತೆರಿಗೆ ದರ ಕಡಿಮೆ ಮಾಡಿರುವುದರಿಂದ ಸೆ. 22ರಿಂದ ನಂದಿನಿ ಉತ್ಪನ್ನಗಳ ದರ ಶೇಕಡ 7ರಷ್ಟು ಕಡಿಮೆಯಾಗಲಿದೆ ಎನ್ನಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!