ಉಡುಪಿ: ಆಟೋ ರಿಕ್ಷಾಕ್ಕೆ ಲಾರಿ ಢಿಕ್ಕಿ . ಆಟೋ ಚಾಲಕ ಮೃತ .

ಉಡುಪಿ: ಲಾರಿಯೊಂದು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಬೈಪಾಸ್ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಹೆಜಮಾಡಿ ಮಾಸ್ತಿಕಟ್ಟೆ ನಿವಾಸಿ ರಫೀಕ್ (37) ಮೃತಪಟ್ಟವರು.

ರಫೀಕ್ ಇಂದು ಮುಂಜಾನೆ ಮನೆಯಿಂದ ಮಸೀದಿಗೆ ರಿಕ್ಷಾದಲ್ಲಿ ತೆರಳಿದ್ದರು. ಈ ವೇಳೆ ಹೆಜಮಾಡಿ ಬೈಪಾಸ್ ಬಳಿ ಮಂಗಳೂರು ಕಡೆಯಿಂದ ಬಂದ ಲಾರಿಯೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ರಫೀಕ್ ಅವರನ್ನು ಕೂಡಲೇ ಸ್ಥಳೀಯರು ಅಸ್ಪತ್ರೆಗೆ ಸಾಗಿಸಿದ್ದು, ಈ ವೇಳೆ ಮೃತಪಟ್ಟಿದ್ದಾರೆ.ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!