ಮಂಗಳೂರು: ಜಿಲ್ಲೆಯ ಜನ ಸಾಮಾನ್ಯರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ, ಜಿಲ್ಲೆಯ ಜನರ ಬದುಕಿನ ಮೌಲ್ಯಗಳ ಬಲವರ್ಧನೆಗಾಗಿ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು “ಜನತೆಯ ನಡಿಗೆ ಉತ್ತಮ ಬದುಕಿನ ಕಡೆಗೆ” ಎಂಬ ಘೋಷಣೆ ಅಡಿಯಲ್ಲಿ ಬೃಹತ್ ಹೋರಾಟ ರೂಪಿಸಲಾಯಿತು . ಈ ಬೃಹತ್ ಹೋರಾಟದಲ್ಲಿ ಮಂಗಳೂರು ನಗರದ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದ ಸಾವಿರಾರು ಜನರು ಭಾಗವಹಿಸಿದ್ದರು . .ನಗರದ ಡಾ| ಬಿ.ಆರ್ ಅಂಬೇಡ್ಕರ್ (ಜ್ಯೋತಿ) ವೃತ್ತದಿಂದ ಕ್ಲಾಕ್ ಟವರ್ ತನಕ ಬೃಹತ್ ಮೆರವಣಿಗೆ ನಡೆಯಿತು .
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರು , ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು .