ಮಂಗಳೂರು: ಲೋಕ ಸಭೆಯ ಶೂನ್ಯವೇಳೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷವು ನಿಷೇಧಿತ ಸಂಘಟನೆಯೊಂದಿಗೆ ಸಂಧಿಸಿದೆ ಎಂದು ನೇರವಾಗಿ ಆರೋಪವನ್ನು ಮಾಡಿದ್ದಾರೆ . ಇದು ಅವರ ಪಕ್ಷದ ಕಾರ್ಯಕರ್ತರ ನಡುವೆ ಮೈಲೇಜ್ ಹೆಚ್ಚಿಸಿಕೊಳ್ಳುವ ಹುನ್ನಾರವಾಗಿದೆ ಅದು ಬಿಟ್ಟು ಜಿಲ್ಲೆಯ ಅಭಿವೃದ್ಧಿ ವಿಷಯಗಳನ್ನು ಲೋಕಸಭೆಯಲ್ಲಿ ಮಾತನಾಡುವುದಿಲ್ಲವೆಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಕಿಡಿಕಾರಿದ್ದಾರೆ .
ಅವರು ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಲೋಕಸಭೆಯ ಅಧಿವೇಶನದಲ್ಲಿ ದಕ್ಷಿಣ ಕನ್ನಡ ಸಂಸದರಾದ ಬ್ರಿಜೇಶ್ ಚೌಟ ರವರು SDPI ಬಗ್ಗೆ ಬೇಜವಾಬ್ದಾರಿ ಮತ್ತು ಅವಿವೇಕಿ ಹೇಳಿಕೆ ನೀಡಿರುತ್ತಾರೆ . ಇದನ್ನು ನಾನು ಖಂಡಿಸುತ್ತೇನೆ . ಪ್ರಜಾಪ್ರಭುತ್ವದ ಸಂವಿಧಾನ ತತ್ವಗಳ ರಕ್ಷಣೆಯಾಗಬೇಕೆಂದು ನಿರಂತರವಾಗಿ ಹೋರಾಟವನ್ನು ಮಾಡುವವರು ನಮ್ಮ ಪಕ್ಷದವರು . ಎಲ್ಲಿ ತಮ್ಮ ಪಕ್ಷ ಏಳಿಗೆಯನ್ನು ಕಾಣುತ್ತದೆಯೋ ಎನ್ನುವ ಭಯದಿಂದ ಸಂಸದರು ಈ ರೀತಿಯ ಹೇಳಿಕೆಗಳನ್ನು ಹೇಳ್ತಾ ಇದ್ದಾರೆ . ಇವರಿಗೆ ಏಳಿಗೆ ಕಾರ್ಯದ ಬಗ್ಗೆ ಆಸಕ್ತಿ ಇಲ್ಲದ ಇವರು ಭಾವನಾತ್ಮಕ ವಿಷಯದ ಬಗ್ಗೆ ಹೆಚ್ಚಿಗೆ ಮಾತನಾಡುತ್ತಾರೆ .
sdpi ಪಕ್ಷವನ್ನು ಸೈದಾಂತಿಕವಾಗಿ ಎದುರಿಸಲು ಸಾಧ್ಯವಾಗದು ಎಂದು ಅರಿತ ಇವರು ಈ ರೀತಿಯ ಹೇಳಿಕೆಯನ್ನು ಆಡುತ್ತಿದ್ದಾರೆ . ಈ ರೀತಿಯಲ್ಲಿ ಮಾತನಾಡುವ ಇಂಥವರಿಗೆ ಸ್ವೀಕರ್ ಸರಿಯಾದ ಮಾರ್ಗದರ್ಶವನ್ನು ನೀಡಬೇಕೆಂದು ಆಗ್ರಹಿಸಿದರು .
ಜಿಲ್ಲೆಯಲ್ಲಿ ವೈದ್ಯಕೀಯ ಮಾಫಿಯಾ , ಶಿಕ್ಷಣ ಮಾಫಿಯಾಗಳು ನಡೆಯುತ್ತಿದೆ ಆದರೆ ಈ ಬಗ್ಗೆ ಇವರು ಮಾತನಾಡುವುದಿಲ್ಲ , ನಿಮ್ಮ ಪಕ್ಷದಲ್ಲೇ ದೊಡ್ಡ ಸಂಖ್ಯೆಯಲ್ಲಿರುವ ಅಡಿಕೆ ಕೃಷಿಗಾರರ ಸಮಸ್ಯೆಯ ಬಗ್ಗೆ ಮಾತನಾಡುವುದಿಲ್ಲ ,ಅದು ಬಿಟ್ಟು sdpi ಪಕ್ಷದ ಬಗ್ಗೆ ಬೇಜವಾಬ್ದಾರಿ ಹೇಳಿಕೆಯನ್ನು ನೀಡುತ್ತೀರಾ . ಈ ಬೇಜವಾಬ್ದಾರಿ ಮಾತುಗಳನ್ನು ಕೂಡಲೇ ಹಿಂಪಡೆಯಬೇಕೆಂದು ಸಾದತ್ ಸಂಸದರಿಗೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ sdpi ಪಕ್ಷದ ಸದಸ್ಯರಾದ ಅಶ್ರಫ್ ಅಡ್ಡೂರು , ಅಶ್ರಫ್ ತಲಪಾಡಿ , ಮುನಿಷಾ ಆಲಿ . ಸಹಿತ ಮುಂತಾದವರು ಉಪಸ್ಥಿತರಿದ್ದರು .