ಮಂಗಳೂರು: ಕಲ್ಕೂರ ಪ್ರತಿಷ್ಠಾನ ಮಂಗಳೂರು ವತಿಯಿಂದ ಪೇಜಾವರ ಹರಿಪಾದ ಹರಿಪಾದಗೈದಿರುವ ಪೇಜಾವರ ಶ್ರೀಗಳ ಷಷ್ಠಮ ಸಂಸ್ಕರಣಾರ್ಥ ಪೇಜಾವರ ವಿಶ್ವೇಶತೀರ್ಥ ನಮನ ೨೦೨೫ ಕಾರ್ಯಕ್ರಮವು ಗುರು ವಂದನೆ , ಪ್ರಶಸ್ತಿ ಪ್ರದಾನ , ಕೃಷ್ಣ ಗಾಯನ ಕಾರ್ಯಕ್ರಮದೊಂದಿಗೆ ಪೇಜಾವರ ವಿಶ್ವೇಶತೀರ್ಥ ವೇದಿಕೆ , ವಾದಿರಾಜ ಮಂಟಪ ಕದ್ರಿಯ ಮಂಜುಪ್ರಸಾದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶ ತೀರ್ಥರು , ಮೂಡಬಿದರೆ ಜೈನ ಮಠದ ಶ್ರೀ ಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ ದಿವ್ಯ ಉಪಸ್ಥಿಯಲ್ಲಿ ಇದ್ದು ಆಶೀರ್ವಚನವನ್ನು ನೀಡಿದರು.


ಇದೇ ಸಂದರ್ಭದಲ್ಲಿ ವೇ।ಮೂ। ಕುಡುಪು ನರಸಿಂಹ ತಂತ್ರಿ ಶ್ರೀ ವಿಶ್ವೇಶತೀರ್ಥರ ಸಂಸ್ಮರಣೆ ಮಾಡಿದರು.ಕದ್ರಿ ಪ್ರಭಾಕರ ಅಡಿಗ, ಕದ್ರಿ ನವನೀತ ಶೆಟ್ಟಿ ಜಿ.ಕೆ. ಭಟ್ ಸೆರಾಜೆ ಮೊದಲಾದವರಿದ್ದರು.ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ, ಪ್ರಸ್ತಾವಿಸಿ, ನಿರೂಪಿಸಿದರು. ವಿವಿಧ ತಂಡಗಳಿಂದ ಕೃಷ್ಣ ಗೀತ ಗಾಯನ, ಗುರು ವಂದನೆ , ಪ್ರಶಸ್ತಿ ಪ್ರದಾನ ನಡೆಯಿತು.

