ಪುತ್ತೂರು ಬೈಪಾಸ್ ರಸ್ತೆಯಲ್ಲಿ ಹೋರಿ ಕರುವಿಗೆ ಅಪರಿಚಿತ ವಾಹನ ಡಿಕ್ಕಿ – ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಕಾರ್ಯಕರ್ತರಿಂದ ಕರುವಿನ ರಕ್ಷಣೆ

ಪುತ್ತೂರು: ಪುತ್ತೂರು ಬೈಪಾಸ್ ಅಶ್ಮಿ ಕಂಫರ್ಟ್ ನ ಬಳಿ ಅಪರಿಚಿತ ವಾಹನವೊಂದು ಹೋರಿ ಕರುವಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಪುತ್ತೂರಿನ ಬೈಪಾಸ್ ನಲ್ಲಿ ನಡೆದಿದೆ.


ಇಂದು ಬೆಳಗ್ಗಿನ ಜಾವ ಹೋರಿ ಕರುವಿಗೆ ಡಿಕ್ಕಿ ಹೊಡೆದ ಘಟನೆ ತಿಳಿದ ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಕಾರ್ಯಕರ್ತರು ತಕ್ಷಣ ಧಾವಿಸಿ ತುರ್ತು ಚಿಕಿತ್ಸೆಗೆ ಸರಕಾರಿ ಪಶು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪಶು ಆಸ್ಪತ್ರೆಯಲ್ಲಿ ಕರುವಿಗೆ ಚಿಕಿತ್ಸೆಯ ನಂತರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಧೇನು ಗೋಶಾಲೆಗೆ ಸೇರಿಸಲಾಯಿತು.
ಪಿಕಪ್ ವ್ಯವಸ್ಥೆಯನ್ನು ಧರಿತ್ರಿ ಅಸೋಸಿಯೇಟ್ಸ್ ನ ಮಾಲಕರಾದ ಮುರಳಿಕೃಷ್ಣ ಹಸಂತಡ್ಕ ಅವರು ಮಾಡಿದರು. ಈ ಸಮಯದಲ್ಲಿ ಬಜರಂಗದಳ ಪುತ್ತೂರು ಗೋರಕ್ಷಾ ಪ್ರಮುಖ್ ಧನರಾಜ್ ಬೆಳ್ಳಿಪ್ಪಾಡಿ, ಬಜರಂಗದಳ ಸುರಕ್ಷಾ ಪ್ರಮುಖ್ ಜೀವನ್ ಆಚಾರ್ಯ, ಚಾಲಕ ಚಾಮಯ್ಯ ಬಲ್ನಾಡ್, ಹಾಗೂ ಅಜಯ್, ಮತ್ತಿತರರ ಕಾರ್ಯಕರ್ತರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!