ನರೇಗ ಬಚಾವೋ ಸಂಗ್ರಾಮ ರಾಷ್ಟ್ರವ್ಯಾಪಿ ಹೋರಾಟ: ಕೇಂದ್ರ ಸರಕಾರದ ವಿರುದ್ಧ ಬಂಟ್ವಾಳದಲ್ಲಿ ಕಾಂಗ್ರೆಸ್ ಪಾದಯಾತ್ರೆ ಘೋಷಣೆ – ರಮಾನಾಥ್ ರೈ

ಬಂಟ್ವಾಳ: ಯುಪಿಎ ಸರಕಾರದ ಅವಧಿಯಲ್ಲಿ ಜಾರಿಯಾದ ಮಹತ್ವಾಕಾಂಕ್ಷೆಯ ಕಾಯ್ದೆಯ ಮತ್ತು ಯೋಜನೆಗಳ ಹೆಸರು ಬದಲಾವಣೆ ಮಾಡಲು ಹೊರಟು ಕಾರ್ಯಕ್ರಮಗಳ ಮೂಲ ಸ್ಚರೂಪವೇ ಬದಲಾಗಿದೆ.ಅ ಕಾರಣಕ್ಕಾಗಿ ಕೇಂದ್ರ ಸರಕಾರದ ವಿರುದ್ದ ನರೇಗ ಬಚಾವೋ ಸಂಗ್ರಾಮ ಹಮ್ಮಿಕೊಂಡಿದ್ದು,ರಾಷ್ಟ್ರ ವ್ಯಾಪಿ ಸಂಗ್ರಾಮವಾಗಿದೆ. ಇದು ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮಗಳನ್ಬು ಬೇರೆ ಬೇರೆ ರೀತಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ್ ರೈ ಹೇಳಿದರು.ಅವರು ಪಾಣೆಮಂಗಳೂರು ಮತ್ತು ಬಂಟ್ವಾಳ ಕಾಂಗ್ರೆಸ್ ವತಿಯಿಂದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಹಾತ್ಮ ಗಾಂಧಿ ಉದ್ಯೋಗ ಖಾತರಿಯೋಜನೆ ಉದ್ಯೋಗ ಖಾತರಿಗೊಳಿಸ ತಕ್ಕಂತಹ ಕಾರ್ಯಕ್ರಮವಾಗಿದೆ.ಉದ್ಯೋಗ ಇಲ್ಲದೆ ಊಟಕ್ಕೆ ಕಷ್ಟದ ಸಂದರ್ಭದಲ್ಲಿ ಕೃಷಿಕರಿಗೆ ಉದ್ಯೋಗ ಕೊಡಿಸತಕ್ಕಂತಹ ಮತ್ತು ಉದ್ಯೋಗ ಖಾತರಿಕೊಡಿಸುವ ಯೋಜನೆ ಉದ್ಯೋಗ ಖಾತರಿ ಯೋಜನೆಯಾಗಿದೆ.ಈ ಕಾರ್ಯಕ್ರಮಕ್ಕೆ ಆಗಿನ ಸಂದರ್ಭದಲ್ಲಿ ವಿಪಕ್ಷಗಳು ಟೀಕೆ ಮಾಡಿದ್ದವು.ಜಾಗತಿಕ ಮಟ್ಟದಲ್ಲಿ ಹೆಸರುಗಳಿಸಿದ ಯೋಜನೆ ಇದಾಗಿತ್ತು.ಯೋಜನೆಯಿಂದ ಅನೇಕ ಜನರ ಭವಿಷ್ಯ ಉತ್ತಮವಾಗಿತ್ತು.ಗ್ರಾಮೀಣ ಭಾಗದಲ್ಲಿ ಗ್ರಾ.ಪಂ.ಗಳ ವಿವಿಧ ಕಾಮಗಾರಿಗಳ ಮೂಲಕ ಅನೇಕರಿಗೆ ಉದ್ಯೋಗ ಕೂಡ ಸಿಕ್ಕಿತ್ತು.


ಕೋಟ್ಯಾಂತರ ರೂಪಾಯಿ ಕಾಮಗಾರಿಯನ್ನು ಗ್ರಾ.ಪಂ.ಗಳು ಮಾಡಿ ಉತ್ತಮ ಪಂಚಾಯತ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅಭಿವೃದ್ಧಿ ಕೆಲಸಕ್ಕೆ ಉದ್ಯೋಗ ಖಾತರಿ ಯೋಜನೆ ಪೂರಕವಾಗಿವೆ ಎಂದು ಅವರು ಹೇಳಿದರು.ಆಹಾರ ಭದ್ರತೆ, ಶಿಕ್ಷಣದ ಹಕ್ಕು , ಮಾಹಿತಿ ಹಕ್ಕು, ಹೀಗೆ ಬೇರೆ ಬೇರೆ ಹಕ್ಕನ್ನು ಕಾಯ್ದೆ ಮೂಲಕ ಜಾರಿ ಮಾಡಿದ್ದು ಇದ್ದರೆ ಕಾಂಗ್ರೆಸ್ ಪಕ್ಷ ಎಂದು ಅವರು ಹೇಳಿದರು. ಯುಪಿಎ ಸರಕಾರದ ಅಡಳಿತದ ಅವಧಿಯಲ್ಲಿ ಜಾರಿಯಾದ ನಿರ್ಮಲ ಗ್ರಾಮ ಕಾರ್ಯಕ್ರಮವೇ ಸ್ಚಚ್ಚ ಗ್ರಾಮ ಕಾರ್ಯಕ್ರಮವಾಗಿದೆ. ಇಂತಹ ಅನೇಕ ಯೋಜನೆಗಳ ಮೂಲ ಸ್ವರೂಪವೇ ಬದಲಾಯಿಸುವ ಕಾರ್ಯಗಳು ಬಿಜೆಪಿಯಿಂದಾಗುತ್ತಿದೆ ಎಂದು ಅವರು ಆರೋಪ ಮಾಡಿದರು.

ಹಾಗಾಗಿ ಕೇಂದ್ರ ಸರಕಾರದ ಈ‌ನಡೆಯ ವಿರುದ್ದ ಪ್ರತಿ ತಾಲೂಕುಗಳ ಕನಿಷ್ಠ ಐದು ಕಿ.ಮೀ ವ್ಯಾಪ್ತಿಯಲ್ಲಿ ಪಾದಯಾತ್ರೆ ಕಾರ್ಯಕ್ರಮಗಳು ಆಯೋಜಿಸಿದ್ದೇವೆ.ಜ. 27 ರಂದು ಮಂಗಳವಾರ ಮಣಿಹಳ್ಳ ದಿಂದ ಪಾದಯಾತ್ರೆ ಮೂಲಕ ಪ್ರತಿಭಟನಾ ಕಾರ್ಯಕ್ಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಚಾಲನೆ ನೀಡಲಾಗುತ್ತದೆ.ಮಣಿಹಳ್ಳದಿಂದ ಹೊರಟ ಪಾದಾಯಾತ್ರೆ ಕೈಕಂಬದವರೆಗೆ ಸಾಗಿ ಅಲ್ಲಿಂದ ಮತ್ತೆ ಬಿಸಿರೋಡಿನ ಪೇಟೆ ಮೂಲಕ ಮಿನಿವಿಧಾನ ಸೌಧದವರೆಗೆ ಬಂದು ಅದರ ಮುಂಭಾಗದಲ್ಲಿ ಪ್ರತಿಭಟನೆ ಕಾರ್ಯಕ್ರಮ ನಡೆಸಲಿದ್ದೇವೆ.
ಜ.27 ರ ಮೊದಲು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಗ್ರಾಮ ಮಟ್ಟದಲ್ಲಿ ಕೂಡ ಪ್ರತಿಭಟನೆ ಮಾಡಲಿದ್ದು , ಕಾಂಗ್ರೆಸ್ ಬೆಂಬಲಿತ ಆಡಳಿತ ಇರುವ ಗ್ರಾ.ಪಂ.ನಿಂದ ಉದ್ಯೋಗ ಖಾತರಿ ಯೋಜನೆ ಹೆಸರು ಬದಲಾವಣೆ ಮಾಡದಂತೆ ನಿರ್ಣಯ ಮಾಡಲಿದ್ದು, ಆಡಳಿತ ವಿಲ್ಲದ ಗ್ರಾ.ಪಂ‌.ನಲ್ಲಿ ಮನವಿ ನೀಡುವ ಕಾರ್ಯ ಮಾಡುತ್ತೇವೆ ಎಂದು ಅವರು ತಿಳಿಸಿದರು.ಜಿ.ಎಸ್.ಟಿ ಬಂದ ಬಳಿಕ ತೆರಿಗೆ ಹೊರೆ ರಾಜ್ಯ ಸರಕಾರದ ಮೇಲೆ ಬೀಳುತ್ತಿದ್ದು,ಕೆಲವು ರಾಜ್ಯಗಳು ಸೊರಗಿ ಹೋಗಿವೆ ಎಂದು ಹೇಳಿದರು.

ಪ್ರಮುಖರಾದ ಸುದರ್ಶನ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್,ಪಿಯೂಸ್ ಎಲ್ ರೋಡ್ರಿಗಸ್, ಬೇಬಿ ಕುಂದರ್, ಮಲ್ಲಿಕಾ ಶೆಟ್ಟಿ, ಲವೀನಾ ವಿಲ್ಮ ಮೊರಾಸ್, ಬಾಲಕೃಷ್ಣ ಅಂಚನ್, ಚಂದ್ರಶೇಖರ ಭಂಡಾರಿ, ಲುಕ್ಮಾನ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!