ಬಂಟ್ವಾಳ:ಇಲ್ಲಿ ಕಸ ತಂದು ಹಾಕುವ ದಿವ್ಯ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ,ಈ ಕಸದಂತೆಯೇ ನಿಮ್ಮ ಜೀವನವೂ ಆದಷ್ಟು ಬೇಗನೇ ಕೊಳೆತು ಹೋಗಲಿ ಎನ್ನುವ ಬ್ಯಾನರ್ ಇದೀಗ ಎಲ್ಲೆಡೆ ವೈರಲ್ ಅಗ್ತಾ ಇದೆ ಅಸಲಿಗೆ ಈ ಬ್ಯಾನರ್ ನ ದರ್ಶನವಾಗುವುದು ಕಲ್ಲಡ್ಕ ಪೇಟೆಯಲ್ಲಿ.ಹೌದು ಕಲ್ಲಡ್ಕ ಜಂಕ್ಷನ್ ನ ಕಮಲಾ ಕಾಂಪ್ಲೆಕ್ಸ್ ನ ಮುಂಭಾಗದಲ್ಲಿ ಇರುವ ವಿದ್ಯುತ್ ಕಂಬಕ್ಕೆ ಬ್ಯಾನರ್ ನ್ನು ಹಾಕಲಾಗಿದೆ.ಜನನಿಬಿಡ ಪ್ರದೇಶವಾಗಿರುವ ಕಲ್ಲಡ್ಕ ಕಮಲಾ ಕಾಂಪ್ಲೆಕ್ಸ್ ನಲ್ಲಿರುವ ಕೆ.ಟಿ.ಹೋಟೆಲ್ ನ ಮುಂಭಾಗದಲ್ಲಿ ಕಸವನ್ನು ತಂದು ಹಾಕಿ ಹೋಗುತ್ತಿದ್ದರು.ಕಮಲಾ ಕಾಂಪ್ಲೆಕ್ಸ್ ನಲ್ಲಿ ಚಿಕಿತ್ಸಾಲಯ, ಹೋಟೆಲ್, ಬ್ಯಾಂಕ್ ಹಾಗೂ ಹತ್ತಿರದಲ್ಲಿ ಶ್ರೀರ ಮಂದಿರ ಇದ್ದು ನಿತ್ಯ ಬೆಳಿಗ್ಗೆ ಇಲ್ಲಿ ಕಸದ ರಾಶಿ ಕೊಳೆತು ವಾಸನೆ ಬರುತ್ತಿತ್ತು.
ಜನರು ನಿತ್ಯ ಓಡಾಡುವ ಜಾಗದಲ್ಲಿ ಕಸವನ್ನು ಹಾಕಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದನ್ನು ಕಂಡು ಸಾರ್ವಜನಿಕರೇ ಬ್ಯಾನರ್ ಅಳವಡಿಸಿದ್ದಾರೆ. ಕಸ ತಂದು ಹಾಕುವವರನ್ನು ತಡೆಯಲು ಸಾಧ್ಯವಾಗದೆ ಅತ್ಯಂತ ನೋವಿನಿಂದ ಇಲ್ಲಿನ ಸಾರ್ವಜನಿಕರು ನೋವು ತರುವ ಬರಹವನ್ನು ಬ್ಯಾನರ್ ನಲ್ಲಿ ಮುದ್ರಿಸಿ ಹಾಕಿದ್ದಾರೆ. ಬ್ಯಾನರ್ ನ ಬರಹ ನೋಡಿದ ಸಾರ್ವಜನಿಕರು ಒಂದು ಕ್ಷಣ ನಿಬ್ಬೆಗೆರಗಾಗುವುದು ಮಾತ್ರ ಸತ್ಯ.ನಿಟ್ಟೆಗರು ಶಹಬ್ಬಾಸ್ ಎಂದು ಊರಿನವರನ್ನು ಕೊಂಡಾಡಿದ್ದಾರೆ .