ಮಂಜೇಶ್ವರ: ಖ್ಯಾತ ಸ್ಯಾಕ್ಸೋಫೋನ್ ವಾದಕ ಜಯರಾಮ ಮಂಜೇಶ್ವರ ರಿಗೆ ‘ನಾದಚಿಂತಾಮಣಿ’ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕೆನಡಾ ಕಂದಸಾಮಿ ದೇವಸ್ಥಾನದಲ್ಲಿ ಲೆಜೆಂಡರಿ ಸಂಗೀತಗಾರರಾದ ಡಾ.ಎಂ.ಪಿ.ನಕೀಂತೀರನ್ (ನಾಥಸ್ವರಂ) ಅಣ್ಣಾ ಮತ್ತು ಡಾ.ಟಿ.ಜಿ.ಮುತ್ತುಕುಮಾರಸ್ವಾಮಿ ಅಣ್ಣಾ (ಥವಿಲ್) ಅವರ ಗೌರವಾನ್ವಿತ ಸಮ್ಮುಖದಲ್ಲಿ ದೇವಾಲಯದ ಅಧ್ಯಕ್ಷರಾದ ಶ್ರೀ ಎಸ್.ಮುತ್ತುರಾಜಲಿಂಗಂ ಅವರಿಂದ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಜಯರಾಮ ಮಂಜೇಶ್ವರ ‘ಈ ಮನ್ನಣೆಯನ್ನು ಪಡೆದಿದ್ದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಮತ್ತು ನಿಜವಾಗಿಯೂ ವಿನಮ್ರನಾಗಿದ್ದೇನೆ ಎಂದರು .
‘ನನ್ನ ಪ್ರತಿಭೆಯನ್ನು ಗುರುತಿಸಿ ನನ್ನ ಸಂಗೀತ ಪ್ರಯಾಣವನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಇಡೀ ದೇವಾಲಯ ಸಮಿತಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಈ ಕ್ಷಣ ನನಗೆ ತುಂಬಾ ಅರ್ಥಪೂರ್ಣವಾಗಿದೆ ಮತ್ತು ನಾನು ಇದನ್ನು ಯಾವಾಗಲೂ ಪಾಲಿಸುತ್ತೇನೆ’ಎಂದು ಭಾವುಕರಾಗಿ ನುಡಿದರು.