ಮನ್‌ರೇಗಾ ಮಾರ್ಪಾಡು ಬಡವರಿಗೆ ಅನ್ಯಾಯ: ಮೋದಿ ಸರ್ಕಾರದ ವಿರುದ್ಧ ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಉಪವಾಸ ಸತ್ಯಾಗ್ರಹ

ಮಂಗಳೂರು:ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರಿಗೆ ಮುಖ್ಯವಾಗಿ ಬಡವರಿಗೆ ತೊಂದರೆ ಆಗಿಲ್ಲ ಆದರೆ ನಮ್ಮ ಪಕ್ಷದಿಂದ ಜಮೀನ್ದಾರರಿಗಳಿಗೆ ಬಂಡವಾಳ ಶಾಹಿಗಳಿಗೆ, ಭೂಮಾಲಕರಿಗೆ ತೊಂದರೆ ಆಗಿದೆ. ಆದರೆ ಬಿಜೆಪಿಯಿಂದ ಎಲ್ಲರಿಗೂ ತೊಂದರೆ ಆಗಿದೆ. ಕೇಂದ್ರದ ಮೋದಿ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಮಾರ್ಪಾಡು ಮಾಡುವ ಮೂಲಕ ಬಡವರಿಗೆ ಅನ್ಯಾಯ ಮಾಡಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು.ಮನ್‌ರೇಗಾ ಯೋಜನೆಯ ಹೆಸರನ್ನು ತಿದ್ದುವಡಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ದಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಗಾಂಧಿ ಟೋಪಿ ಹಾಕಿ, ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದ ಬಳಿಯಿರುವ ರಾಜಾಜಿ ವಾರ್ಕ್ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದರು.

ಈ ಹಿಂದಿನ ಅವಧಿಯಲ್ಲೂ ಸಿದ್ದರಾಮಯ್ಯ ಸರ್ಕಾರ ಅದ್ಭುತ ಅಭಿವೃದ್ಧಿಯನ್ನು ಮಾಡಿತ್ತು ಈಗ ಗ್ಯಾರಂಟಿ ಯೋಜನೆಗಳಿದ್ದರೂ ನಮಗ್ರ ಅಭಿವೃದ್ಧಿ ಮಾಡಿದೆ. ಸರ್ಕಾರ ವಕ್ಷತೀತವಾಗಿ ಎಲ್ಲ ಶಾಸಕರಿಗೂ ಸಮಾನ ಅನುದಾನ ಕೊಡಲಾರಂಭಸಿದೆ. ಅದೇ ನಿಧಿಯನ್ನು ಬಳಸಿಕೊಂಡ ಬಿಜೆಪಿ ಶಾಸಕರು ರಸ್ತೆ ಅಭಿವೃದ್ಧಿ ಮಾಡಿ ಬ್ಯಾನರ್ 0 ಅಳವಡಿಸ್ತಿದ್ದಾರೆ. ಅವರು ಪ್ರಚಾರದಲ್ಲಿ ಮುಂದಿದ್ದಾರೆ. ನಮಗೆ ಪ್ರಚಾರ ಮುಖ್ಯವಲ್ಲ, ಬಡವರ ಕಲ್ಯಾಣ ಮುಖ್ಯ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತಾಡಿ, ಗ್ರಾಮೀಣ ಬಡವರ ಹೊಟ್ಟೆಗೆ ಯಾಕೆ ಹೊಡೆದಿರಿ? ಬಡವರನ್ನು ಯಾಕೆ ಬದುಕಲು ಬಿಡುತ್ತಿಲ್ಲ? ಬಡವರ ಮೇಲೆ, ದೇಶಕ್ಕಾಗಿ ತ್ಯಾಗ ಮಾಡಿದ ಗಾಂಧಿಯ ಮೇಲೆ ಯಾಗೆ ದ್ವೇಷ? ಗಾಂಧೀ ಹೆಸರು ನೋಡಲು ಸಹಿಸಲಾಗದೆ ಮನ್‌ರೇಗಾ ಹೆಸರನ್ನು ಬದಲಿಸಿದ್ದೀರಿ ಎಂದು ಪ್ರಶ್ನಿಸಿದರು ಮನ್‌ರೇಗಾ ಯೋಜನೆಯ ಮೂಲ ಉದ್ದೇಶವನ್ನು ಮರೆಮಾಚುವ ಮತ್ತು ಬಡವರ ಹಕ್ಕುಗಳ ಮೇಲೆ ರಾಜಕೀಯ ಒತ್ತಡದ ಪ್ರಯತ್ನವನ್ನು ಖಂಡಿಸಿದರು

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತಾಡಿ, “ಗ್ರಾಮೀಣ ಬಡವರ ಹೊಟ್ಟೆಗೆ ಯಾಕೆ ಹೊಡೆದಿರಿ? ಬಡವರನ್ನು ಯಾಕೆ ಬದುಕಲು ಬಿಡುತ್ತಿಲ್ಲ? ಬಡವರ ಮೇಲೆ, ದೇಶಕ್ಕಾಗಿ ತ್ಯಾಗ ಮಾಡಿದ ಗಾಂಧಿಯ ಮೇಲೆ ಯಾಗೆ ದ್ವೇಷ? ಗಾಂಧೀ ಹೆಸರು ನೋಡಲು ಸಹಿಸಲಾಗದೆ ಮಸ್‌ಗಾ ಹೆಸರನ್ನು ಬದಲಿಸಿದ್ದೀರಿ ಎಂದು ಪ್ರಶ್ನಿಸಿದರು ಮನ್‌ರೇಗಾ ಯೋಜನೆಯ ಮೂಲ ಉದ್ದೇಶವನ್ನು ಮರೆಮಾಚುವ ಮತ್ತು ಬಡವರ ಹಕ್ಕುಗಳ ಮೇಲೆ ರಾಜಕೀಯ ಒತ್ತಡದ ಪ್ರಯತ್ನವನ್ನು ಖಂಡಿಸಿದರು.

ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಪದ್ಮರಾಜ್, ಮಾಜಿ ಶಾಸಕ ಜೆ.ಆರ್.ಲೋಬೋ, ಅಪ್ಪಿ, ಆಡ್ರನ್, ಶಶಿಧರ್ ಹೆಗ್ಡೆ ನಝೀರ್ ಬಜಾಲ್, ಜಲೀಲ್ ಬದ್ರಿಯಾ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!