ಮಂಗಳೂರು:ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆಯು ಡೆಮಾಟ್ರಿಕ್ ಯೂತ್ ವಿಂಗ್ – ‘YOUNG DEMOCRATS’ ಆರಂಭಿಸುವ ನಿರ್ಧಾರವನ್ನು ಕೈಗೊಂಡಿದೆ ಎಂದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರಾದ ಮುಹಮ್ಮದ್ ಶಫಿ ತಿಳಿಸಿದ್ದಾರೆ.ಅವರು ನಗರದ ಎಕ್ಕೂರಿನ ಇಂಡಿಯಾನ್ ಸಭಾಂಗಣದಲ್ಲಿ ನಡೆದ ಎಸ್‌ಡಿಪಿಐ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆಯ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ , ಪಕ್ಷದ ಯುವ ಸಂಘಟನೆ ಆರಂಭಿಸುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಸಂಘಟನಾ ಸಮಿತಿ ಯನ್ನು ರಚಿಸಲಾಗಿದೆ ಎಂದರು .
ರಾಷ್ಟ್ರ ರಾಜ್ಯ ಜಿಲ್ಲೆ, ತಾಲೂಕು ಮಟ್ಟದಲ್ಲಿ ಪಕ್ಷದ ಯುವ ಸಂಘಟನೆ ಯನ್ನು ಬಲಪಡಿಸುವ ನಿರ್ಧಾರವನ್ನು ಕೈಗೊಳ್ಳಲಾಗುವುದು . ದೇಶದ ಬಲಿಷ್ಠ ಶಕ್ತಿಯಾಗಿರುವ ಯುವ ಸಮೂಹ ಬೇರೆ ಬೇರೆ ಕಾರಣಗಳಿಂದ ರಾಜಕೀಯದಿಂದ ದೂರ ಸರಿಯುತ್ತಿದ್ದಾರೆ. ದೇಶದ ಮುಂದಿನ ಭವಿಷ್ಯವಾಗಿರುವ ಅವರನ್ನು ರಾಷ್ಟ್ರ ಕಟ್ಟುವ ಮತ್ತು ಸಂವಿಧಾನವನ್ನು ಉಳಿಸುವ ಕಾರ್ಯಕ್ಕೆ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಉದ್ದೇಶಕ್ಕಾಗಿ ಯೂತ್ ವಿಂಗ್ ಪ್ರಾರಂಭಿಸಲಾಗಿದೆ. 15ರಿಂದ 40 ವರ್ಷ ವರೆಗಿನ ಯುವಜನರಿಗೆ ಯೂತ್ ವಿಂಗ್‌ನಲ್ಲಿ ಸೇರಲು ಅವಕಾಶ ಇದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ಅಧ್ಯಕ್ಷ ಎಂಕೆ ಫೈಝಿ , ಉಪಾಧ್ಯಕ್ಷ ಸೀತಾರಾಮ್ ಖಾಟಿಕ್, ಶೇಖ್ ಮುಹಮ್ಮದ್, ಪ್ರಧಾನ ಕಾರ್ಯದರ್ಶಿಗಳಾದ ಮುಹಮ್ಮದ್ ಅಶ್ರಫ್ ಅಂಕಜಾಲ್, ಮುಹಮ್ಮದ್ ರಿಯಾಝ್, ಅಬ್ದುಲ್ ಮಜೀದ್, ಮೆಹರ್ ಅಪ್ರೋಝ್ ಯಾಸ್ಟೀನ್, ಕಾರ್ಯದರ್ಶಿಗಳಾದ ಅಲ್ಲೋನ್ಸ್ ಫ್ರಾಂಕೊ ತೈದುಲ್ ಉಲ್ ಇಸ್ಲಾಂ, ಸಅದೀಯ ಸಯೀದಾ, ಡಿ.ಎಸ್.ಬಿಂದ್ರಾ, ಅತಿಕಾ ಸಾಜಿದ್‌ಮತ್ತು ಯಾಮೊದ್ದೀನ್, ಖಜಾಂಚಿ ಜಿ. ಅಬ್ದುಲ್ ಸತ್ತಾರ್ ಮತ್ತಿತರರು ಉಪಸ್ಥಿತರಿದ್ದರು.