ರಾಜಕೀಯ ತೆವಳಿಗೋಸ್ಕರ , ಮುಸ್ಲಿಂ ಮತಗಳ ಓಲೈಕೆಗಾಗಿ ಮಾಜಿ ಸಚಿವ ಬಿ. ರಮಾನಾಥ ರೈ ಹಿಂದೂ ನಂಬಿಕೆಗೆ ಘಾಸಿ ಉಂಟು ಮಾಡಿದ್ದಾರೆ :ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಶೇಟ್

ಮಂಗಳೂರು:ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಜಿಲ್ಲಾಧಿಕಾರಿಯವರು ಸಂಪ್ರದಾಯಿಕವಾಗಿ ಭಗವಾಧ್ವಜ ಹಾರಿಸಿರುವುದನ್ನು ಖಂಡನೆ ಮಾಡುವ ಮೂಲಕ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಹಿಂದೂಗಳಿಗೆ ಹಿಂದೂ ಭಾವನೆಗಳಿಗೆ ಧಕ್ಕೆಯನ್ನು ತರುವ ಪ್ರಯತ್ನ ಮಾಡಿದ್ದಾರೆ . ಅವರು ಕೂಡಲೇ ಈ ವಿಚಾರವಾಗಿ ಕ್ಷಮೆ ಕೇಳುವಂತೆ ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಶೇಟ್ ಆಗ್ರಹಿಸಿದರು .

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಮಾನಾಥ ರೈ ಅವರಂತಹ ಹಿರಿಯ ರಾಜಕಾರಣಿಯಿಂದ ಇಂತಹ ಹೇಳಿಕೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ . ಆದರೆ ಅವರು ರಾಜಕೀಯ ತೆವಳಿಗೋಸ್ಕರ , ಮುಸ್ಲಿಂ ಮತಗಳ ಓಲೈಕೆಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ . ದೇವಸ್ಥಾನದಲ್ಲಿ ಭಗವಧ್ವಜ ಹಾರಿಸಬಾರದು ಎಂದು ಹೇಳಿದರೆ ಮತ್ತೆ ಎಲ್ಲಿ ಹಾರಿಸಬೇಕು ಎಂದು ಪ್ರಶ್ನಿಸಿದರು.ಸರಕಾರಿ ಕಾರ್ಯಕ್ರಮದಲ್ಲಿ ಭಗವಾಧ್ವಜ ಹಾರಿಸಿದರೆ ತಪ್ಪು. ಧಾರ್ಮಿಕ ಕಾರ್ಯಕ್ರಮದಲ್ಲಿ ಹಾರಿಸುವುದು ತಪ್ಪಲ್ಲ . ಅಭಿವೃದ್ಧಿ ರಾಜಕಾರಣ ಬಿಟ್ಟು ಹಿಂದೂ ವಿರೋಧಿ ರಾಜಕಾರಣಕ್ಕೆ ಇವರು ಇಳಿದಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಮುಖರಾದ ವಸಂತ ಜೆ ಪೂಜಾರಿ, ಸುಜಿತ್ ಪ್ರತಾಪ್, ಮನೋಹ‌ರ್ ಶೆಟ್ಟಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!