ಡಾ.ಟಿ.ಎಂ.ಎ. ಪೈ ಇಂಟರ್ನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಜನವರಿ 31 ಮತ್ತು ಫೆಬ್ರವರಿ1 ರಂದು ‘ಆಯುಷ್ ಹಬ್ಬ 2026’

ಮಂಗಳೂರು:ಜನವರಿ 31 ಮತ್ತು ಫೆಬ್ರವರಿ1 ರಂದು ನಗರದ ಡಾ.ಟಿ.ಎಂ.ಎ. ಪೈ ಇಂಟರ್ನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಭಾರತೀಯ ವೈದ್ಯ ಪದ್ಧತಿಗಳ ಮಹಾ ಸಂಭ್ರಮ ‘ಆಯುಷ್ ಹಬ್ಬ 2026’ ವಿವಿಧ ಆಯುಷ್ ಕಾಲೇಜುಗಳು , ಸಂಘಟನೆಗಳು ಮತ್ತು ವೃತ್ತಿ ನಿರತ ವೈದ್ಯರ ಸಹಭಾಗಿತ್ವದಲ್ಲಿ ನಡೆಯಲಿದೆ ಎಂದು ಆಯುಷ್ ಹಬ್ಬ ಸಮಿತಿ 2026 ಇದರ ಗೌರವಾಧ್ಯಕ್ಷರಾದ ಡಾ ಆಶಾ ಜ್ಯೋತಿ ಮಾಲಾಡಿ ತಿಳಿಸಿದರು .

ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ಭಾರತೀಯ ವೈದ್ಯ ಪದ್ಧತಿಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಆದ್ಯತೆ ನೀಡಲಾಗಿದೆ. ಶಾಸ್ತ್ರೀಯ ಹಾಗೂ ವೈಜ್ಞಾನಿಕ ಆಯುಷ್ ಪದ್ಧತಿಗಳ ಉನ್ನತ ಮೌಲ್ಯಗಳ ಸಂಗಮ ಆಯುಷ್ ಹಬ್ಬದಲ್ಲಿ ಮೂಡಿಬರಲಿದೆ. ಆಧುನಿಕ ಜೀವನ ಜೀವನ ಶೈಲಿಯಲ್ಲಿ ಕಂಡುಬರುವ ರೋಗಗಳಿಗೆ ಕಾರಣವಾಗುವ ಅಂಶಗಳನ್ನು ಗುರುತಿಸಿ ಅವುಗಳ ನಿಯಂತ್ರಣ ಸಾಧಿಸಲು ಸೂಕ್ತ ಸಲಹೆ, ಮತ್ತು ಆಯುಷ್ ಚಿಕಿತ್ಸಾ ಕ್ರಮಗಳು ಏನೇನಿವೆ, ಎಲ್ಲಿ ಲಭ್ಯವಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಪಡೆಯಲು ಸಾಧ್ಯ. ಅಲ್ಲದೆ ಹಲವು ಚಿಕಿತ್ಸಾ ಉಪಕ್ರಮಗಳು ಲಭ್ಯವಿದೆ ಎಂದರು .

ಈ ಕಾರ್ಯಕ್ರಮದಲ್ಲಿ ಸುಮಾರು5000 ವೈದ್ಯರು, 10000 ಆಯುಷ್ ವೈದ್ಯ ವಿದ್ಯಾರ್ಥಿಗಳು, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು, 20000ಕ್ಕೂ ಅಧಿಕ ಸಾರ್ವಜನಿಕರು ಭೇಟಿ ನೀಡಬಹುದೆಂದು ಅಂದಾಜಿಸಲಾಗಿದೆ.ಇದರಲ್ಲಿ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಮತ್ತು ಹೋಮಿಯೋಪತಿ ವೈದ್ಯಕೀಯ ಸೇವೆಗಳ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಮಹಿಳಾ ಆರೋಗ್ಯಕ್ಕೆ ಹೆಚ್ಚಿನ ಒತ್ತನ್ನು ನೀಡುವ ಸಲುವಾಗಿ ಮಹಿಳಾ ಸ್ವಾಸ್ಥ್ಯ ಹಬ್ಬವನ್ನಾಗಿ ಇದನ್ನು ಆಚರಿಸಲಾಗುವುದು ಎಲ್ಲರಿಗೂ ಉಚಿತ ಪ್ರವೇಶ ಇರಲಿದೆ ಎಂದರು .

ಪತ್ರಿಕಾ ಗೋಷ್ಠಿಯಲ್ಲಿ ಆಯುಷ್ ಹಬ್ಬ 2026 ಸಮಿತಿಯ ಸದಸ್ಯರಾದ ಡಾ.ದೇವದಾಸ್ ಪುತ್ರನ್ , .ಡಾ.ಜ್ಯೋತ್ಸ್ನಾ ,ಡಾ.ಸುಶಿಕ್ಷಿತಾ , ಡಾ. ಶ್ರುತಿ ಶರ್ಮ , ಡಾ.ಚೈತ್ರಾ ಹೆಬ್ಬಾರ್, ಡಾ. ಸಂಗೀತಲಕ್ಷ್ಮಿ ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!