ಆಯುಷ್‌ ಕಾಲೇಜುಗಳಿಂದ ಜನಜಾಗೃತಿ, ವಿಶೇಷ ನಾಡೀ ಪರೀಕ್ಷೆ….!

ಮಂಗಳೂರು:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆಯುಷ್ ಕಾಲೇಜುಗಳ ವತಿಯಿಂದ ಜನವರಿ ದಿನಾಂಕ 31 ಮತ್ತು ಫೆಬ್ರವರಿ1 ರಂದು ಮಂಗಳೂರಿನ ಡಾ.ಟಿ.ಎಂ ಎ ಪೈ ಇಂಟರ್ನ್ಯಾಷನಲ್ ಕನ್ವೆನ್ ಸೆಂಟರ್ ನಲ್ಲಿ ಜರಗುವ ಆಯುಷ್ ಹಬ್ಬ 2026 ನಡೆಯಲಿದೆ ಎಂದು ಶಾರದ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ ಸಂದೀಪ್ ಬೇಕಲ್ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮದಲ್ಲಿ ಆಯುಷ್ ಕಾಲೇಜುಗಳು ಸಾರ್ವಜನಿಕ ಸ್ವಾಸ್ಥ್ಯ ಸಂರಕ್ಷಣೆಗಾಗಿ ಸಾರ್ವಜನಿಕರಿಗೆ ಜನಜಾಗೃತಿ ಅಭಿಯಾನ, ವೈದ್ಯ ವಿದ್ಯಾರ್ಥಿಗಳಿಗಾಗಿ ವೈಜ್ಞಾನಿಕ ಅಧಿವೇಶನ, ಪೋಸ್ಟರ್ ಪ್ರದರ್ಶನ, ಹಮ್ಮಿ ಕೊಳ್ಳುತ್ತಿದೆ ಮತ್ತು ಇಂಜಿನಿಯರಿಂಗ್ ಪದವೀಧರ ರು ಮತ್ತು ವಿದ್ಯಾರ್ಥಿಗಳ ಸಹಕಾರದೊಂದಿಗೆ ಆಯುಷ್ ಹ್ಯಾಕಥಾನ್ ಮತ್ತು ಐಡಿಯಾಥಾನ್ ಜರುಗಲಿದೆ ಎಂದು ತಿಳಿಸಿದರು .

ಭಾರತೀಯ ಪುರಾತನ ವೈದ್ಯ ವಿಜ್ಞಾನ ಆಯುರ್ವೇದವು ತಿಳಿಸಿರುವ ನಾಡೀ ಪರೀಕ್ಷೆಯನ್ನು ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ನಡೆಸಿ ಸಮಗ್ರ ವರದಿಯನ್ನು ನೀಡುವ ವಿಶೇಷ ವ್ಯವಸ್ಥೆ ಇಲ್ಲಿ ಲಭ್ಯವಿದೆ.ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದಾಗಿದೆ.2000 ಜನರಿಗೆ ಉಚಿತವಾಗಿ ಈ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು .

ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಡಾ ಅಜಯ್ ಭಟ್ , ಡಾ ಅಜಿತ್ ಕಾಮತ್ , ಡಾ ಗಣೇಶ್ ನಾಯಕ್ , ಡಾ ಪದ್ಮಶ್ರೀ ರಾವ್‌, ಡಾ ವಿರಾಜ್ ಹೆಗ್ಡೆ, ಡಾ.ಕಾರ್ತಿಕ್ ರೈ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!