ಮಂಗಳೂರು:ಈ ಹಿಂದೆ ಇದ್ದ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳಾದ ಮುಲೈ ಮುಗಿಲನ್ ಇ.ವಿ ರಿಕ್ಷಾಗಳಿಗೆ ದಕ್ಷಿಣ ಕನ್ನಡದಲ್ಲಿ ಮುಕ್ತ ಸಂಚಾರ ಮಾಡಬಹುದೆಂದು ಆದೇಶ ಹೊರಡಿಸಿದ್ದರು . ಈ ಕಾರಣದಿಂದಲೇ ನಾವು ಕಪ್ಪು ರಿಕ್ಷಾವನ್ನು ಮಾರಿ, 4 ಲಕ್ಷ 30,000 ಸಾವಿರ ಬ್ಯಾಂಕ್ ನಲ್ಲಿ ಸಾಲ ಮಾಡಿ ಇ ವಿ ಆಟೋವನ್ನು ಖರೀದಿಸಿದೆವು ಆದರೆ ಇತ್ತೀಚಿಗೆ ಹೊಸದಾಗಿ ಬಂದ ಜಿಲ್ಲಾಧಿಕಾರಿಗಳು ಗ್ರಾಮಾಂತರ ಭಾಗದವರು ನಗರಕ್ಕೆ ಬಂದು ಬಾಡಿಗೆ ಮಾಡಬಾರದೆಂದು ಹೊಸ ಆದೇಶವನ್ನು ಹೊಸ ನಿಯಮ ಬಂದು ಆರು ತಿಂಗಳು ಮುಗಿಯುವುದರೊಳಗೆ ಹೊರಡಿಸಿದ್ದಾರೆ ಇದರಿಂದ ಚಾಲಕರ ಸ್ಥಿತಿ ಅತಂತ್ರವಾಗಿದೆ ಎಂದು ಗ್ರೀನ್ ಸಿಟಿ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಪ್ರಜೇಶ್ ತಮ್ಮ ಅಳಲನ್ನು ತೋಡಿಕೊಂಡರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಹೊಸ ಆದೇಶದಿಂದ ಇ.ವಿ ರಿಕ್ಷಾ ಚಾಲಕರ ಸ್ಥಿತಿ ಚಿಂತಾಜನಕವಾಗಿದೆ . ಇದರಿಂದ ಬ್ಯಾಂಕಿನ ಇಎಂಐ ಕಟ್ಟೋದಾದ್ರೆ ಹೇಗೆ? ಗ್ರಾಮಾಂತರದಲ್ಲೇ ದುಡಿಯಬೇಕೆಂದು ಇದ್ದರೆ ನಾವು 2.50 ಲಕ್ಷ ಕೊಟ್ಟು ಕಪ್ಪು ರಿಕ್ಷವನ್ನೇ ತೆಗೆದುಕೊಳ್ಳುತ್ತಿದ್ದೆವು. ನಮ್ಮ ಜೀವನದಲ್ಲಿ ಡಿಸಿ ಅವರು ಚೆಲ್ಲಾಟ ಆಡುವುದು ಸರಿಯಲ್ಲ ಎಂದು ಹೇಳಿದರು .
ಇವಿ ರಿಕ್ಷಾಗಳಿಗೆ ಮುಕ್ತ ಅವಕಾಶ ಎಲ್ಲೋ ಸಂಚರಿಸಬಹುದು ಹಾಗು ವಲಯ ೧ ಮತ್ತು ೨ ಎನ್ನುವ ವಿಷಯ ಆರ್ ಟಿ ಐ ನಿಬಂಧನೆ ಮುಖಾಂತರ ಹಾಗೂ ಆರ್ ಟಿ ಓ ನಲ್ಲಿ ಬರುವುದಿಲ್ಲ ಎಂದು ಮಾನ್ಯ ಡಿ ಸಿ ಮುಲೆ ಮುಗಿಲನ್ ಸರ್ ಘಂಟಾ ಘೋಷಣೆ ಮಾಡಿರುವುದರಿಂದ ಇ ವಿ ರಿಕ್ಷಾ ಖರೀದಿ ಮಾಡಿದ ನಮಗೆ ಒಮ್ಮಿಂದ ಒಮ್ಮೆಗೆ ಪರ್ಮಿಟ್ ಹಾಕಿ ವಲಯ ಹಾಕಿ ಎಂದು ಬೆದರಿಕೆ ಹಾಕುವ ಆರ್ ಟಿ ಓ ಹಾಗೂ ಡಿ ಸಿ ಯವರ ನೀತಿ ನ್ಯಾಯ ಸಂಮತ್ತವೆ? ಎಂದು ಪ್ರಶ್ನೆ ಮಾಡಿದರು .
ಈ ಮೊದಲು ಸಾರಿಗೆ ಇಲಾಖೆ ನೀಡಿರುವ ಉಚಿತ ಪರವಾನಿಗೆ ಕಾಳಸಂತೆಯಲ್ಲಿ 2. ರಿಂದ 3 ಲಕ್ಷ ಕೊಟ್ಟು ಖರೀದಿ ಮಾಡುತ್ತಾರೆ , ವಲಯ ವಿಂಗಡಣೆ ಮಾಡಿ ಮತ್ತೆ ಪರವಾನಿಗೆ ದಂದೆ ಆರಂಭವಾಗಿದೆ . ಶೀಘ್ರವೇ ಈ ನೀತಿಯಲ್ಲಿ ತಿದ್ದು ಪಡಿ ತರುವಂತೆ ಅವರು ಆಗ್ರಹಿಸಿದರು .ಈ ಸಂದರ್ಭದಲ್ಲಿ ಪರವಾನಿಗೆ ಕಾಳಸಂತೆಯಲ್ಲಿ ಎಷ್ಟು ಲಕ್ಷಕ್ಕೆ ಪರವಾನಿಗೆ ಆಗುತ್ತೆ ಎಂಬುದಾಗಿ ರಿಯಾಲಿಟಿ ಚೆಕ್ ಮಾಡಿದ ಅವರು ನೇರವಾಗಿ ಬ್ರೋಕರ್ ಗೆ ಕರೆಯನ್ನು ಮಾಡುತ್ತಾರೆ . ಈ ಸಂದರ್ಭದಲ್ಲಿ ಬ್ರೋಕರ್ ಅದರಲ್ಲಿ ಪರವಾನಿಗೆಗೆ 3.20 ಲಕ್ಷ ಇದೆ ಎಂದು ಉತ್ತರವನ್ನು ನೀಡುತ್ತಾರೆ .
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಸದಸ್ಯರಾದ ಜೀವನ್ , ಸುದಾಸ್ ಕಾವೂರು , ಮೋಹನ್ ಸಹಿತ ಮುಂತಾದವರು ಉಪಸ್ಥಿತರಿದ್ದರು .