ಕಾಟಿಪಳ್ಳ ನಿವಾಸಿ ಆಟೋ ಚಾಲಕ ವಿಘ್ನೇಶ್ ಕಾಣೆ: ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು- ನಗರದ ಕೃಷ್ಣಪುರ ಕಾಟಿಪಳ್ಳ ನಿವಾಸಿ ವಿಘ್ನೇಶ್ (40) ಬಾಡಿಗೆ ಆಟೋರಿಕ್ಷಾ ಚಾಲಕರಾಗಿ ಕೆಲಸವನ್ನು ಮಾಡಿಕೊಂಡಿದ್ದರು. ಸಾಲವನ್ನು ಪಡೆದುಕೊಂಡಿದ್ದ ಅವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸವನ್ನು ಮಾಡಿಕೊಂಡಿದ್ದರು. ಫೆಬ್ರವರಿ 7 ರಂದು ಬಾಡಿಗೆ ಆಟೋರಿಕ್ಷಾ ತರಲು ಹಾಗೂ ಆರ್.ಟಿ.ಒ ಕಛೇರಿಗೆ ಪರವಾನಿಗೆ ಪಡೆಯುವ ಬಗ್ಗೆ ಮಂಗಳೂರಿಗೆ ತೆರಳಿರುವುದಾಗಿ ತಿಳಿಸಿ ಹೋದವರು ಈವರೆಗೆ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾಣೆಯಾದವರ ಚಹರೆ : ಎತ್ತರ ಸುಮಾರು 5.2 ಅಡಿ, ಗೋಧಿ ಮೈ ಬಣ್ಣ, ಸಪೂರ ಶರೀರ, ಗಡ್ಡ ಮೀಸೆ, ಕಪ್ಪು ತಲೆ ಕೂದಲು ಹೊಂದಿರುತ್ತಾರೆ. ಕನ್ನಡ, ತೆಲುಗು, ತುಳು, ಹಿಂದಿ, ಬ್ಯಾರಿ ಭಾμÉ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಖಾಕಿ ಬಣ್ಣದ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಶೂ ಧರಿಸಿದ್ದರು.ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಸುರತ್ಕಲ್ ಪೆÇಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!