ಮಂಗಳೂರು :ಬಸ್ಸ್ ಸ್ಟಾಂಡ್ ಅಂದ ಕೂಡಲೇ ಅಲ್ಲಿ ಆಸನದ ವ್ಯವಸ್ಥೆ ಮುಖ್ಯವಾಗಿ ಬೇಕಾಗುತ್ತೆ . ಆದರೆ ಕುಳಿತುಕೊಳ್ಳಲು ಆಸದ ವ್ಯವಸ್ಥೆಯೇ ಇಲ್ಲದಿದ್ರೆ ಪ್ರಯಾಣಿಕರಿಗೆ ಸಲ್ಪ ಕಷ್ಟವೇ ಅಂತ ಹೇಳಬಹುದು . ಆಸನವೇ ಇಲ್ಲದ ಒಂದು ಬಸ್ಸ್ ನಿಲ್ದಾಣ ಇರುವುದು ನಗರದ ಹೃದಯ ಭಾಗವೆಂದು ಕರೆಸಿಕೊಳ್ಳುವ ಸ್ಟೇಟ್ ಬ್ಯಾಂಕ್ ನ ಬಸ್ಸ್ ನಿಲ್ದಾಣದಲ್ಲಿ .
ದಿನವೊಂದಕ್ಕೆ ಸಾಕಷ್ಟು ಬಸ್ಸುಗಳು ಓಡಾಟ ನಡೆಸುವ ಈ ನಿಲ್ದಾಣದಲ್ಲಿ ಇನ್ನು ಕೂಡ ಆಸನದ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸವೇ ಆಗಿದೆ .ಅಧಿಕ ಸಂಖ್ಯೆಯ ಪ್ಲಾಟ್ಫಾರ್ಮ್ ಗಳಿದ್ದರೂ ಯಾವುದೇ ಪ್ಲಾಟ್ಫಾರ್ಮ್ ನಲ್ಲಿ ಕುಳಿತುಕೊಳ್ಳುವ ಆಸನ ಇಲ್ಲಿ ಇಲ್ಲ . ಕೆಲವು ಊರಿಗೆ ನಿಮಿಷಕೊಂದು ಬಸ್ಸ್ ಇರುವುದಿಲ್ಲ . ಸಾಕಷ್ಟು ಸಮಯದ ಬಳಿಕ ಇಲ್ಲಿಂದ ಬಸ್ಸ್ ಸಂಚಾರ ಇರುತ್ತದೆ .
ಹೀಗಿರುವಾಗ ವಯಸ್ಕರು , ತಾಯಂದಿರು , ಚಿಕ್ಕ ಮಕ್ಕಳು , ಸಾಕಷ್ಟು ತೊಂದರೆಯನ್ನು ಅನುಭವಿಸ್ತಾ ಇರುತ್ತಾರೆ . ಸ್ಥಳೀಯ ಆಡಳಿತ ಸಂಸ್ಥೆಯು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು .ಮುಂದಿನ ದಿನಗಳಲ್ಲಿ ಇಲ್ಲಿ ಸೀಟ್ ವ್ಯವಸ್ಥೆಯನ್ನು ಮಾಡುವುದರಿಂದ ಪ್ರಯಾಣಿಕರಿಗೆ ಸಹಕಾರಿಯಾಗಲಿದೆ.