ಸ್ಮಾರ್ಟ್ ಸಿಟಿ ಮತ್ತೊಮ್ಮೆ ಸ್ಮಾರ್ಟ್ ಕ್ಲೀನ್ ಸಿಟಿ ಅಲ್ಲವೆಂದು ಸಾಬೀತು-ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಜನರು

ಸ್ಮಾರ್ಟ್ ಸಿಟಿ ಮತ್ತೊಮ್ಮೆ ಸ್ಮಾರ್ಟ್ ಕ್ಲೀನ್ ಸಿಟಿ ಅಲ್ಲವೆಂದು ಸಾಬೀತು ಮಾಡಲು ಹೊರಡ್ತಾ ಇದೆ ಎಂದ್ರೆ ನೀವೆಲ್ಲರೂ ನಂಬಲೇ ಬೇಕು. ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾದಂತಹ ಖಾಯಿಲೆಗಳು ಹರಡದಂತೆ ಎಚ್ಚರ ವಹಿಸೋ ಆರೋಗ್ಯ ಇಲಾಖೆಯ ನಿರ್ದೇಶನಕ್ಕೆ ಇಲ್ಲಿ ಎಳ್ಳು ನೀರು ಬಿಡುವುದು ಸ್ಪಷ್ಟವಾಗಿ ನೋಡ ಬಹುದು . ಕಿವಿ ಕೆಪ್ಪು, ಕಣ್ಣು ಕುರುಡು, ಮೊಸಳೆಯ ಮನಸ್ಸು ಇದ್ದ ಅಧಿಕಾರಿಗಳು ಮಾತ್ರವೇ ಇಂತಹ ಸ್ಥಿತಿಯನ್ನು ನಿರ್ಮಾಣ ಮಾಡಬಲ್ಲರು. ಓಟ್ ಬರುವಾಗ ಹೋದರೆ ಸಾಕು ಅಲ್ಲಿ ತನಕ ಗೋಡೆಗೆ ಕಾಲು ಕೊಟ್ಟು, ಹೊದ್ದು ಮಲಗುವ ಎಂಬ ನಿದ್ರಾಪ್ರಿಯ ಕಾರ್ಪೋರೇಟರ್ ಗಳು ಇದ್ದರೆ ಜನರ ಸ್ಥಿತಿ ಹೇಗಾಗುತ್ತದೆ ಎಂಬುದನ್ನು ಈ ಮಾರುಕಟ್ಟೆಯ ಮೂಲೆ ಮೂಲೆಯು ಹೇಳುತ್ತಿದೆ .

ಅಧಿಕಾರಿಗಳ ಆಲಸ್ಯಕೋ , ಅಧಿಕಾರ ದರ್ಪಕೋ ತೊಂದರೆ ಅನುಭವಿಸುವುದು ಮಾತ್ರ ಸಾಮಾನ್ಯರು. ಸಾಂಕ್ರಾಮಿಕ ರೋಗದ ವಿಷಮ ಸ್ಥಿತಿಯು ತನ್ನ ಕಣ್ಣೆದುರು ಇದ್ದರು, ನಾರುವ ದುರ್ನಾತ ನಾಸವನ್ನು ಕಿಕ್ಕಿರಿಯುತ್ತಿದ್ದರು , ಸುತ್ತ ಮುತ್ತ ಕೊಳಕು ತುಳುಕುತ್ತಿದ್ದರೂ ತನ್ನ ಹೊಟ್ಟೆ ಪಾಡು ನಡೆಯ ಬೇಕೆಂದು ಮೀನು ಮಾರಲು ಇಲ್ಲಿಗೆ ಬರುತ್ತಾರೆ. ಆದ್ರೆ ಗ್ರಾಹಕರು ವಾಸನೆ … ! ಎಲ್ಲಿ ಸಾಂಕ್ರಾಮಿಕ ರೋಗ ಅಂಟಿಕೊಳ್ಳುವುದೋ ಎನ್ನುವ ಭಯದಿಂದ ಇಲ್ಲಿ ಬಾರದೆ ಬೇರೆ ಕಡೆಯಿಂದ ಮೀನನ್ನು ಕೊಂಡು ಕೊಳ್ಳುತ್ತಾರೆ . ಇದು ಮೀನು ಮಾರಾಟಗಾರರು ತಲೆಯ ಮೇಲೆ ಕೈ ಇಟ್ಟುಕೊಂಡು , ಅಧಿಕಾರಿಗಳ ಮೇಲೆ ಹಿಡಿ ಶಾಪ ಹಾಕುವಂತೆ ಮಾಡಿದೆ . ಮೀನು ಮಾರಾಟಗಾರರ ಮರುಕ ಹುಟ್ಟಿಸುವಂತಹ ಕರುಣಾಜನಕ ಕಥೆ , ದಿನ ನಿತ್ಯವೂ ಅನುಭವಿಸುವ ವ್ಯಥೆ ಇರುವುದು ಬೇರೆಲ್ಲಿಯೂ ಅಲ್ಲ ಪ್ರಖ್ಯಾತ ಮೀನು ಮಾರ್ಕೆಟ್ ಎಂದೇ ಹೆಸರು ವಾಸಿಯಾದ ಉರ್ವ ಮೀನು ಮಾರ್ಕೆಟ್ ನಲ್ಲಿ .

ತಾವು ತಂದ ಮೀನು ಮರಾಟವಾಗದೆ ದಿನವೂ ಪ್ರಿಜ್ ನಲ್ಲಿ ಇಡಬೇಕಾದ ಪರಿಸ್ಥಿತಿ. ಇಲ್ಲಿಗೆ ಬರುವ ಗ್ರಾಹಕರು ಮೂಗು ಮುಚ್ಚಿಯೇ ಮೀನು ಕೊಳ್ಳಲು ಬರುತ್ತಾರೆ. ಆದ್ರೆ ಇಂದು ಬಂದ ಗ್ರಾಹಕರು ನಾಳೆ ಬರ್ತಾರೆ ಅಂದು ಕೊಂಡ್ರೆ ಬಿಲ್ಕುಲ್ ಬರದು ಯಾಕೆಂದ್ರೆ ಇಲ್ಲಿನ ನೈಜ್ಯತೆ ಅವರನ್ನು ಬರದಂತೆ ಮಾಡುತ್ತೆ. ದುರ್ನಾತವನ್ನು ಒಮ್ಮೆಗೆ ತಡೆದು ಕೊಳ್ಳಲು ಆಗದೆ ಮೂಗನ್ನು ಮುಚ್ಚುವ ಗ್ರಾಹಕರು ಒಂದೆಡೆ ಆದ್ರೆ , ದಿನವೂ ಈ ದುರ್ನಾತವನ್ನು ಅನುಭವಿಸಿ ಮೀನು ಮಾರಾಟ ಮಾಡುವವರ ಕಥೆ ಹೇಗಿರಬೇಡ ಹೇಳಿ ?.

ಇಲ್ಲಿಯ ಶೌಚಾಲಯಕ್ಕೆ ನೈರ್ಮಲ್ಯ ಎಂದರೆ ಕಡು ದ್ವೇಷ, ಮಹಿಳೆಯರಿಗಂತೂ ಕಡುವೈರಿ. ಚರಂಡಿ ವಾಸನೆ, ತ್ಯಾಜ್ಯ ನೀರು ಜೊತೆಯಾಗಿ ಸಹಬಾಳ್ವೆ ಮಾಡುತ್ತಿರುವ ಈ ಪ್ರದೇಶಕ್ಕೆ ಹೋದವರು ನರಕ ಎಂಬುದಕ್ಕೆ ವ್ಯಾಖ್ಯಾನ ಮತ್ತು ಪ್ರಬಂಧ ಬರೆಯಬಲ್ಲರು. ಇಲ್ಲಿಯವರ ದುಃಖ ದುಮ್ಮಾನಗಳನ್ನು‌ ಕೇಳಿ…

ದೇವಿಕಾ .. ಬೈಟ್ಇಲ್ಲಿನ ಈ ಸ್ಥಿತಿಯು ತಲೆ ಸಿಡಿದು ಹೋಗುವಂತೆ ಮಾಡುತ್ತಿದೆ , ಸಾವಿರಾರು ರುಪಾಯಿ ಕೊಟ್ಟು ತರುವ ಮೀನು ಮರಾಟವಾಗದೇ ಹತಾಶರಾಗಿ ವ್ಯಾಪಾರಸ್ಥರು ಬೇಗನೇ ಮನೆಗೆ ಹೋಗ್ತಾರೆ, ಸ್ಥಳೀಯ ಕಾರ್ಪೊರೇಟರ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಕಾಣ್ತಾ ಇಲ್ಲ, ಮುಂಗಾರು ಮಳೆಯಿಂದ ಕಟ್ಟಿ ನಿಲ್ಲುವ ನೀರು ಡೆಂಗ್ಯೂ ಮಲೇರಿಯಾ ಹರಡಿಸದಿದ್ದರೆ ಸಾಕು , ಇದು ಇಂದು ನಿನ್ನೆಯ ಕಥೆಯಲ್ಲ ವರ್ಷಗಳ ಮೊದಲೇ ಶುರುವಾದ ವ್ಯಥೆ .ಈ ದುರ್ನಾತ ನನ್ನನ್ನು ಆಗಾಗ್ಗೆ ಅರೋಗ್ಯ ಕೆಡಿಸುತ್ತಿದೆ , ಆದರೂ ಉರ್ವ ಮಾರಿಯಮ್ಮ ಮತ್ತು ಅಜ್ಜನ ಆಶೀರ್ವಾದದಿಂದ ಸಹಜ ಸ್ಥಿತಿಗೆ ಬರ್ತಾ ಇದ್ದೇನೆ . ಇದಕ್ಕೆ ಶಾಶ್ವತವಾದ ಪರಿಹಾರ ನೀಡದೆ ಇದ್ದರೆ ಮುಂದಿನ ದಿನಗಳಲ್ಲಿ ಪ್ರಬಲವಾದ ಹೋರಾಟ ಮಾಡುವುದಾಗಿ ಉರ್ವ ಮಾರ್ಕೆಟ್ ನಲ್ಲಿ ಮೀನು ಮಾರಾಟ ಮಾಡುವ ದೇವಿಕರವರು ತನ್ನ ಅಳಲನ್ನು ಮತ್ತು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ .

ಕೇಳಿದ್ರಲ್ಲಾ ವೀಕ್ಷಕರೇ ಪಾಪ ಆ ತಾಯಿ ಯಾವ ರೀತಿಯಾಗಿ ತನ್ನ ಆಳಲನ್ನು ತೋಡಿಕೊಳ್ತಾ ಇದ್ದಾರೆ ಎಂದು .ನಿವೃತ್ತಿಯಾದ ಬಳಿಕ ಹದಿನೈದು ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆರೋಗ್ಯಾಧಿಕಾರಿಯಾಗಿ ಮುಂದುವರಿಯುವಂತಹ ಅವಕಾಶವನ್ನು ಕರುಣಿಸಿರುವ ಸರ್ವಪಕ್ಷದ ರಾಜಕಾರಣಿಗಳಿಗೆ ಮೀನು ಮಾರುವವರ ಸಮಸ್ಯೆಗಳು ಕಾಣುತ್ತಿಲ್ಲ. ಆರೋಗ್ಯಾಧಿಕಾರಿಗೆ ಪಾಲಿಕೆ ಕಾರು ಕೊಟ್ಟಿದೆ, ಅದು ಅವರ ಮನೆ ಮಂದಿಯನ್ನು ಅತ್ತಾವರದಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗೆ‌ ಮನೆ ಮಂದಿಯನ್ನು ಆರೋಗ್ಯ ಪರೀಕ್ಷೆಗೆ ಕರೆದೊಯ್ಯಲು ಬಳಕೆಯಾಗುತ್ತಿದೆ. ಹಿಂದೆ ಕೊರೊನಾ ಕಾಲದಲ್ಲಿ ಶಾಸಕ ಭರತ್ ಶೆಟ್ಟಿ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ನಿಂದ ತೀರಿಕೊಂಡವರ ಶವ ಸಂಸ್ಕಾರಕ್ಕೆ ಅಡ್ಡಿಯುಂಟಾದಾಗ ಈ ಆರೋಗ್ಯಾಧಿಕಾರಿ ಅಲ್ಲಿ ಕಾಣಿಸಿಕೊಂಡಿದ್ದರು. ಡಾಕ್ಟರ್ ಭರತ್ ಶೆಟ್ಟರು ಆಗೊಮ್ಮೆ ಈ ಅಧಿಕಾರಿ ಮೇಲೆ ಗರಂ ಆಗಿದ್ದರು. ಬಳಿಕ ರಾಜಕಾರಣಿಗಳು ಮತ್ತು ಈ ಆರೋಗ್ಯಾಧಿಕಾರಿಯ ಸಹಬಾಳ್ವೆ ‌ಮುಂದುವರಿದಿದೆ. ಆರೋಗ್ಯ ಎಂಬುದು ಅನಾರೋಗ್ಯದೆದುರು ಮಂಡಿಯೂರಿದೆ.ಕೊರೊನಾ ಜಾಲದಲ್ಲು ಮನೆಯಲ್ಲಿ‌ ಗಮ್ಮತ್‌ ಕುಳಿತು ಲಕ್ಷದ ಹತ್ತಿರದ ಸಂಬಳವನ್ನು ಈ ರಿಟೈರ್ ಮನುಷ್ಯ ಕಬಳಿಸಿದೆ. ಇದು ಸಾರ್ವಜನಿಕರಿಗೆ ಗೊತ್ತಾಗಬೇಕಾದರೆ‌ ಲೋಕಾಯುಕ್ತ‌ಪೊಲೀಸರು ದಾಳಿ‌ಮಾಡಬೇಕಾಯಿತು.

ದಪ್ಪ ಚರ್ಮದ ಅಧಿಕಾರಿಗಳು ಈ ಬಗ್ಗೆ ಕೂಡಲೇ ಪರಿಹಾರ ನೀಡಬೇಕು. ಸ್ವಚ್ಚತೆ ಆದ್ಯತೆ ನೀಡುವ ಮಂಗಳೂರು ಮಹಾನಗರ ಪಾಲಿಕೆ ಕೂಡಲೇ ಈ ಬಗ್ಗೆ ಎಚ್ಚೆತು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಅರೋಗ್ಯ ಇಲಾಖೆಯ ಸ್ಪಚ್ಛತೆ ಆದ್ಯತೆ ನಿಲುವು ಇಲ್ಲಿ ಕೂಡ ಜಾರಿಗೆ ಬರಬೇಕು ಅಧಿಕಾರಿಗಳೇ ಈ ಕಣ್ಣೀರ ಕಥೆಯನ್ನು ನೀವು ಸಹ ಕೇಳಿ , ನಿಮ್ಮೊಳಗೆ ಕರುಣೆ , ಸೇವಾ ಮನೋಭಾವ ಇದ್ದರೆ ಅವರಿಗೂ ಸಹಾಯ ಮಾಡಿ . ಅಲ್ಲಿನ ಮೀನು ಮಾರಾಟಗಾರಿಗೆ ಶಾಶ್ವತವಾದ ಪರಿಹಾರ ನೀಡಬೇಕು.

ಸ್ಮಾರ್ಟ್ ಸಿಟಿ ಅಲ್ಲ ಸ್ಮಾರ್ಟ್ ಕ್ಲೀನ್ ಲೆಸ್ ಸಿಟಿ …… !

ಸಾಂಕ್ರಾಮಿಕ ರೋಗದ ಅಡ್ಡೆಯಾದ ಉರ್ವ ಫಿಶ್ ಮಾರ್ಕೆಟ್
ಮಲಿನತೆಯ ವಾತಾವರಣದ ಸುತ್ತಲೂ ಕಣ್ಣೀರ ಕಥೆ
ಅಧಿಕಾರಿಗಳ ಆಲಸ್ಯಕ್ಕೆ ಪರಿಹಾರ ಕಾಣದ ಫಿಶ್ ಮಾರ್ಕೆಟ್
ದುರ್ನಾತ ನಡುವೆಯೇ ಮೀನು ಮಾರಾಟ ಮಾಡಬೇಕಾದ ಪರಿಸ್ಥಿತಿ , ನಾತ ಮಯಕ್ಕೆ ಯಾರು ಇತ್ತ ಬಾರದ ಸ್ಥಿತಿ … !

ಅಧಿಕಾರಿಗಳೇ ಉರ್ವ ಮಾರ್ಕೆಟ್ನ ವಾಸ್ತವ ಕಥೆ ನೀವು ಕೇಳಿ ಅಥವಾ ಅಧಿಕಾರಿಗಳೇ ಉರ್ವ ಮಾರ್ಕೆಟ್ನ ಮೀನು ಕೊಳ್ಳಲು ನೀವು ಒಮ್ಮೆ ಬನ್ನಿ …… !

SHARE
Loading spinner

Leave a Reply

Your email address will not be published. Required fields are marked *

error: Content is protected !!