ಹೈದರಾಬಾದ್ ,ಮುಂಬೈ,ಬೆಂಗಳೂರು ,ಅಹಮದಾಬಾದ್ ನಡೆದ ಭಯೋತ್ಪಾದನಾ ದಾಳಿಯ ಹಿನ್ನಲೆಯಲ್ಲಿ ಬಂದಿಯಾಗಿದ್ದ ಆರೋಪಿ ಯಾಸೀನ್ ಭಟ್ಕಳ ವಿಚಾರಣೆ ಮತ್ತೆ ಆರಂಭ

ಹೈದರಾಬಾದ್ ,ಮುಂಬೈ,ಬೆಂಗಳೂರು ,ಅಹಮದಾಬಾದ್ ನಡೆದ ಭಯೋತ್ಪಾದನಾ ದಾಳಿಯ ಹಿನ್ನಲೆಯಲ್ಲಿ 04-10-2008 ರಂದು ಬಂಧಿಸಲಾಗಿದ್ದ ಯಾಸೀನ್ ಭಟ್ಕಳ ವಿಚಾರಣೆ ಮತ್ತೆ ಆರಂಭವಾಗಿದೆ


ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಯೊಂದಿಗೆ ನಂಟು ಇಟ್ಟುಕೊಂಡಿದ್ದ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಯಾಸೀನ್ ಭಟ್ಕಳ ವಿರುದ್ಧ ದೇಶದ ವಿವಿಧ ಕಡೆಗಳಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಪೂರ್ವ ತಯಾರಿ ಆರೋಪ ಮತ್ತು ಸ್ಪೋಟಕ ವಸ್ತುಗಳನ್ನು ಹಾಗೂ ಸ್ಪೋಟಕಗಳನ್ನು ತಯಾರಿಸುವ ವಸ್ತುಗಳನ್ನು ತನ್ನ ಬಳಿ ಇಟ್ಟುಕೊಂಡ ಆರೋಪದಲ್ಲಿ ಮಂಗಳೂರಿನ ಉಳ್ಳಾಲ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು, ದಕ್ಷಿಣ ಕನ್ನಡ ಜಿಲ್ಲೆಯ ಡಿಸಿಐಬಿ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳು ಪತ್ತೆ ಮಾಡಿ ಯಾಸೀನ್ ಭಟ್ಕಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು

ಬಂದಿಯಾಗಿದ್ದ ಯಾಸೀನ್ ಭಟ್ಕಳನ ವಿಚಾರಣೆ ನಡೆಯದೆ ಉಳಿದಿತ್ತು, ಕೇಸ್ ಇದೀಗ ವಿಚಾರಣೆ ಆರಂಭವಾಗಿದ್ದು ಯಾಸೀನ್ ಭಟ್ಕಳನನ್ನ ವಿಡಿಯೋ ಕಾನ್ಫ್ರೆಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!