ಕೆಪಿಟಿಗೆ ಲಭ್ಯವಾಗದ ಫ್ಲೈಓವರ್ ಭಾಗ್ಯ…

ಮಂಗಳೂರು: ದಿನ ನಿತ್ಯವೂ ವಾಹನ ದಟ್ಟಣೆ , ಒಮ್ಮೆ ಸಿಗ್ನಲ್ ನಲ್ಲಿ ಸಿಕ್ಕಿ ಹಾಕಿಕೊಂಡರಂತೂ ತ್ರಿಶಂಕು ಸ್ಥಿತಿ , ನಾಲ್ಕೂ ಮಾರ್ಗಗಳು ಸೇರುವ ವೃತ್ತ ಇದಾಗಿದ್ದರೂ ಇನ್ನು ಫ್ಲೈ ಓವರ್ ಭಾಗ್ಯ ದೊರೆತಿಲ್ಲ.

ಕೆ.ಪಿ.ಟಿ. ಜಂಕ್ಷನ್ ಅಥವಾ ವಿಶ್ವೇಶ್ವರಯ್ಯ ವೃತ್ತ ಎಂದು ಕರೆಯಲ್ಪಡುವ ‌ಪ್ರಮುಖ ಜಂಕ್ಷನ್ ಸದಾ ಟ್ರ್ರಾಫಿಕ್ ಜಾಮ್ ನಿಂದ ಬಾಧೆ ಕೊಡುತ್ತಿರುತ್ತದೆ . ಇಲ್ಲಿ ಫ್ರೀ ಲೆಷ್ಟ್ ಇದೆಯಾದರೂ ಅದಕ್ಕೆ ಅಡ್ಡವಾಗಿ ನಿಂತು ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡದಿದ್ದರೆ ಖಾಸಗಿ ಬಸ್ಸುಗಳ ಚಾಲಕರಿಗೆ ಉಂಡ ಅನ್ನ ಕರಗುವುದಿಲ್ಲ.

ಕೊಟ್ಟಾರ ದಿಂದ ನಂತೂರು , ಬೋಂದೆಲ್ ನಿಂದ ಬಿಜೈ ಮಾರ್ಗದ ಮದ್ಯೆ ಸಂಚರಿಸುವಾಗ ಈ ವೃತ್ತ ಸಿಗುತ್ತದೆ. ಪ್ರಸಿದ್ಧ ಕದ್ರಿ ಪಾರ್ಕ್ ಬಳಿ‌ಇರುವ ಈ ಕೆ ಪಿ ಟಿ ಜಂಕ್ಷನ್ ಮಾರ್ಗಕ್ಕೆ ಆದಷ್ಟು ಬೇಗನೇ ಫ್ಲೈ ಓವರ್ ನಿರ್ಮಾಣ ಆಗಬೇಕು . ಇದರಿಂದ ತುರ್ತು ಸೇವೆಗೆ ತೆರಳುವ ವಾಹನಗಳಿಗೆ ಅನುಕೂಲ ಆಗಲಿದೆ . ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಈ ಮಾರ್ಗ ಮಂಗಳೂರಿನ ಪ್ರಮುಖ ವಾಹನ ದಟ್ಟಣೆಯ ರಸ್ತೆಗಳಲ್ಲಿ ಒಂದು. ಗಣ್ಯರು ಬಂದರಂತೂ ಅವರಿಗಾಗಿ ಮುಕ್ತ ಮಾರ್ಗ ಮಾಡಲು ಸಾಮಾನ್ಯರ ಸಂಚಾರವನ್ನು ತಡೆ ಹಿಡಿಯಲಾಗುತ್ತದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!