ಸೂಟರ್‌ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಬಲೀಂದ್ರ ಪೂಜೆ

ಮಂಗಳೂರು : ಅತ್ಯಂತ ಪಾರಂಪರಿಕ ರೀತಿಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲ್ಪಡುವ ಬಲೀಂದ್ರ ಪೂಜೆ ಸೂಟರ್‌ಪೇಟೆ  ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ  ಮಂಗಳವಾರ ನಡೆಯಿತು.

ಅಂಧಕಾರವನ್ನು ಕಳೆಯುವ ದೀಪಾವಳಿ ಹಬ್ಬದ  ಬಲಿಪಾಡ್ಯಮಿ ದಿನವೂ ಕೂಡ ವಿಶಿಷ್ಟತೆಯನ್ನು ಪಡೆದಂತಹ ದಿನ. ಪ್ರಜಾಹಿತ ರಾಜನಾಗಿ , ದಾನಶೂರನೆಂದು ಪ್ರಖ್ಯಾತಿ ಪಡೆದ ಬಲೀಂದ್ರನ ಪೂಜೆಯನ್ನು ದೈವಸ್ದಾನಗಳಲ್ಲಿ ದೀಪಾವಳಿ ಹಬ್ಬದಂದು ಆಚರಿಸಲಾಗುತ್ತದೆ.

ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್‌ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಬಲೀಂದ್ರ ಪೂಜೆಯನ್ನು ವಿಶಿಷ್ಟ ರೀತಿಯಲ್ಲಿ  ಆಚರಿಸಲಾಯಿತು.

ದೈವಸ್ಥಾನದ ಗುರಿಕಾರರಾದ ಎಸ್. ರಾಘವೇಂದ್ರ ಅವರು ಬಲೀಂದ್ರ ಪೂಜೆಯ ವಿಧಿವಿಧಾನವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ದೈವಸ್ಥಾನದ ಗೌರವ ಸಲಹೆಗಾರರಾದ ಕೆ.ಪಾಂಡುರಂಗ , ಪ್ರಧಾನ ಕಾರ್ಯದರ್ಶಿ  ಎಸ್. ಜಗದೀಶ್ಚಂದ್ರ ಅಂಚನ್,  ಕೋಶಾಧಿಕಾರಿ  ಎಸ್. ನವೀನ್ , ಪ್ರಧಾನ ಆರ್ಚಕರಾದ ಎಸ್.ಗಣೇಶ್, ಪದಾಧಿಕಾರಿಗಳಾದ ಎಸ್.ಮೋಹನ್ ವಿಶ್ವನಾಥ್ ಸಾಲ್ಯಾನ್,‌ ಎಸ್.ಜನಾರ್ಧನ, ಬಿ.ಗಣೇಶ್,  ಎಸ್.ಉಪೇಂದ್ರ , ಎಸ್. ಪ್ರವೀಣ್, ರಂಜಿತ್ , ಉಮಾಪ್ರಸಾದ್ , ಸುನಿಲ್ ರಾಜ್ ಪದಕಣ್ಣಾಯ , ಕಿರಣ್ ರಾಜ್ ಪದಕಣ್ಣಾಯ , ನಳಿನಿ ,ಅಪ್ಪಿ ಎಸ್.  ಸುದೇಶ್ ಕುಮಾರ್,‌  ತಿಲಕ್ ರಾಜ್ , ರಾಹುಲ್ ಎಸ್, ಸಂತೋಷಕುಮಾರಿ , ಸಂದೀಪ್ , ಕಿಶೋರ್ ಎಸ್, ರಕ್ಷಿತ್,  ಶ್ರೀಮತಿ ಇಂದಿರಾ ಮೋಹನ್ ದಾಸ್ , ಪ್ರಶಾಂತ್ ಪಿ.ಎಸ್,  ಸೂರಜ್ ಸಾಗರ್ ,  ದೀಕ್ಷಿತ್ ಬಿ.ಎಸ್, ರೋಹಿತ್ , ಯಮುನಾ ಜಯ, ಕಿಶೋರ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!