7ರಂದು ನಗರದಲ್ಲಿ ಫಾತಿಮಾ ರಲಿಯಾ ಅವರ ‘ಕೀಮೋ’ ಪುಸ್ತಕ ಬಿಡುಗಡೆ.

ಭಾನುವಾರ  ಸಂಜೆ‌ ನಾಲ್ಕು ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್‌ ಸಿಕ್ವೇರಾ ಸಭಾಂಗಣದಲ್ಲಿ ಫಾತಿಮಾ ರಲಿಯಾ ಅವರ ಅನುಭವ ಕಥನ ‘ಕೀಮೋ’ ಬಿಡುಗಡೆಯಾಗಲಿದೆ.  ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ಪುಸ್ತಕದ ಕುರಿತು ರಮ್ಯ ಕೆ.ಜಿ. ಮೂರ್ನಾಡು ಮತ್ತು ಶರೀಫ್ ಹಿಮಮಿ ಶುಟ್ಟಿಕೊಪ್ಪ ಮಾತನಾಡಲಿದ್ದಾರೆ‌.

ಈ ಪುಸ್ತಕವನ್ನು ‘ಜೀರುಂಡೆ ಪುಸ್ತಕ’ ಪ್ರಕಟಿಸಿದ್ದು ಇದು ಫಾತಿಮಾ ರಲಿಯಾರ ನಾಲ್ಕನೇ ಕೃತಿಯಾಗಿದೆ. ‘ಜೀರುಂಡೆ ಪುಸ್ತಕ’ದ ಎಲ್ಲಾ ಕೃತಿಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!