“ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರು’ಗಳನ್ನು “ನಕಲಿ” ವೈದ್ಯರೆಂದು ಕೆರೆದು ಕಾನೂನು ದಬ್ಬಾಳಿಕೆ ಮಾಡುತ್ತಿದೆ. -ಬಿ.ಎಸ್ ಚಂದ್ರು

ಮಂಗಳೂರು: ದೇಶದಲ್ಲಿಯೇ ಕರ್ನಾಟಕ ಸರ್ಕಾರ ಮಾತ್ರ ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ 2007 ಮತ್ತು ತಿದ್ದುಪಡಿಗಳನ್ನು ಜಾರಿಗೆ ತಂದು ರಾಜ್ಯದಲ್ಲಿ ಸರ್ಕಾರದ ಫಲಪೇಕ್ಷೆಯಿಲ್ಲದೆ, ಜನ ಸಾಮಾನ್ಯರಿಗೆ ಅತಿ ಕಡಿಮೆ ವೆಚ್ಚದಲ್ಲಿ ಸೇವೆ ನೀಡುತ್ತಿರುವ “ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರು’ಗಳನ್ನು “ನಕಲಿ” ವೈದ್ಯರೆಂದು ಕೆರೆದು ಕಾನೂನು ಕಠಣಗೊಳಿಸಿ ಅವರ ಬದುಕಿನ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಸರ್ಕಾರದ ಕ್ರಮವನ್ನು ಸಂಸ್ಥೆಯ ಪ್ರಧಾನ ಸಂಯೋಜಕರಾದ ಬಿ.ಎಸ್ ಚಂದ್ರು ಖಂಡಿಸಿದರು .

ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕರ್ನಾಟಕ ರಾಜ್ಯ ಉಚ್ಛನ್ಯಾಯಾಲಯ WP NO: 51465/2019 ದಿನಾಂಕ: 17/2/2023 ರಂದು ಆದೇಶ ಪ್ರಕಟಿಸುವ ಮೂಲಕ ಅನಭವಿ ಪಾರಂಪರಿಕ ವೈದ್ಯರಿಗೆ ಸರ್ಕಾರಕ್ಕೆ 4 ವಾರದ ಒಳಗೆ ಕಾಯ್ದೆ ತಿದ್ದುಪಡಿ ಮಾಡಿ ನೋಂದಾಣೆ ನೀಡುವಂತೆಯೂ ಸರ್ಕಾರಕ್ಕೂ ಜಿಲ್ಲಾ KPME ಪ್ರಾಧಿಕಾರಕ್ಕೂ 8 ವಾರದ ಒಳಗೆ ಕ್ರಮ ಕೈಗೊಳ್ಳಲು ಆದೇಶಿಸಿದೆ.

ರಾಜ್ಯ ಉಚ್ಚನ್ಯಾಯಾಲಯದ ಆದೇಶವನ್ನು ಕಾರ್ಯಕರ್ತ ಗೊಳಿಸಲು ಉಚ್ಚನ್ಯಾಯಾಲಯ ಅಡ್ವಕೇಟ್ ಜನರಲ್ ಬೆಂಗಳೂರು ಕಾನೂನು ಅಭಿಪ್ರಾಯ ನೀಡಿ ಆದೇಶ ಜಾರಿಗೆ ಅಭಿಪ್ರಾಯ ನೀಡಿರುತ್ತಾರೆ.

ಸಲ್ಲಿಸಲಾದ ಮನವಿಗಳಿಗೆ 31 ಜಿಲ್ಲೆಗಳ ಜಿಲ್ಲಾ ಪ್ರಾಧಿಕಾರ ಹಾಗೂ ಆರೋಗ್ಯ ಇಲಾಖೆ ಮತ್ತು ಸರ್ಕಾರ ಸ್ಪಂದಿಸದಿದ್ದರೆ “ಅಧಿಕಾರಿಗಳ ಅಧಿಕಾರ ದುರುಪಯೋಗ’ ಮತ್ತು “ಕರ್ತವ್ಯಲೋಪಕ್ಕೆ” ಸಾಕ್ಷಿಯಾಗಿದೆ. ಈ ಕುರಿತು ರಾಜ್ಯ ಲೋಕಯುಕ್ತರಲ್ಲಿ ದೂರು ದಾಖಲಿಸಲು ನೋಟಿಸ್ ಸಿದ್ಧತೆ ನಡೆದಿರುತ್ತದೆ.

ತಾಲ್ಲೂಕು ಆರೋಗ್ಯ ಅಧಿಕಾರಿ/ಜಿಲ್ಲಾ ಆರೋಗ್ಯ ಅಧಿಕಾರಿಗಳು “ನಮಗೂ ನ್ಯಾಯಾಲಯದ ಆದೇಶಕ್ಕೂ ಸಂಬಂಧವಿಲ್ಲ” “KPME ನೋಂದಾಣೆ ಇದ್ದರೆ ಮಾತ್ರ ಸೇವೆ ಮಾಡಿ’ “ಇಲ್ಲದಿದ್ದಲ್ಲಿ ನಿಮ್ಮ ವಿರುದ್ಧ FIR ದಾಖಲಿಸಲಾಗುವುದು” ಎಂದು ಬೆದರಿಸುತಿರುವುದು, ತಾವೇ ರಿಟ್ ಅರ್ಜಿಯಲ್ಲಿ ಪ್ರತಿವಾದಿಗಳಿದ್ದರು ಗಮನಿಸದೆ, ಮತ್ತು ಸರಕಾರವೇ “ವೈದ್ಯ ಮಿತ್ರ” ವೆಂದು ಆದೇಶಿಸಿದ್ದರೂ ಪಾಲಿಸುತ್ತಿಲ್ಲ.ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಯಾವುದೇ ಅಧಿಕಾರಿ ನ್ಯಾಯಾಂಗದ ಆದೇಶ ಉಲ್ಲಂಗಿಸಿ ದೂರು ದಾಖಲಿಸಿದರೆ, ಅಂತಹ ಅಧಿಕಾರಿ ವಿರುದ್ಧ ವೈಯಕ್ತಿಕವಾಗಿ ಲೋಕಯುಕ್ತರಿಗೆ ದೂರು ದಾಖಲಿಸುವುದಾಗಿ ಸಂಘ ಎಚ್ಚರಿಕೆ ನೀಡುವುದು ಎಂದರು .

ರಾಜ್ಯದಲ್ಲಿ ೪೮೮೦ ಈ ರೀತಿಯ ವಂಶ ಪಾರಂಪರಿಕ ವೈದ್ಯರು ಕಾರ್ಯ ನಿರ್ವಹಿಸುತ್ತಾ ಇದ್ದಾರೆ , ಅದರಲ್ಲಿ ೨೧೭ ಮಂದಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದ್ದಾರೆ ಎಂದು ತಿಳಿಸಿದರು .ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಫಕ್ರುದಿನ್ , ಧಮಯಂತಿ , ರಾಜ್ ಕುಮಾರ್ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!