ರಾಷ್ಟ್ರೀಯ ವಿಚಾರಗೋಷ್ಠಿಯು ಸೆ. 11,12 ರಂದು ಕೊಂಕಣಿ ಭಾಷೆಯಲ್ಲಿ ನಡೆಯಲಿದೆ-ಡಾ ಆಲ್ಮಿನ್ ಡೇಸಾ

ಮಂಗಳೂರು: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (AICTE) ಇವರ ಸಹಯೋಗದೊಂದಿಗೆ ಸಂತ ಅಲೋಸಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಂಗಳೂರು. ಇಲ್ಲಿ ಸ್ಮಾರ್ಟ್ ವೈದ್ಯಕೀಯ ಉಪಕರಣಗಳು ಮತ್ತು ತಂತ್ರಜ್ಞಾನಗಳ ಮೂಲಕ ಆರೋಗ್ಯ ಸುಧಾರಿಸುವುದು ಎಂಬ ಶೀರ್ಷಿಕೆಯಡಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರಗೋಷ್ಠಿಯು ಸೆಪ್ಟೆಂಬರ್ 11 ಮತ್ತು 12, 2025 ರಂದು ಕೊಂಕಣಿ ಭಾಷೆಯಲ್ಲಿ ನಡೆಯಲಿದೆ ಎಂದು ಸಂತ ಅಲೋಸಿಯಸ್ ಸ್ನಾಯತ್ತ ಕಾಲೇಜಿನ ಕುಲ ಸಚಿವರಾದ ಡಾ ಆಲ್ಮಿನ್ ಡೇಸಾ ತಿಳಿಸಿದರು .

ಅವರು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ವಿಶ್ವದಲ್ಲೇ ಕೊಂಕಣಿ ಭಾಷೆಯಲ್ಲಿ ನಡೆಯುವ ಪ್ರಥಮ ವಿಜ್ಞಾನ ಸಮ್ಮೇಳನ ಇದಾಗಿದೆ. ಈ ವಿಚಾರಸಂಕಿರಣವು ಭಾರತೀಯ ಭಾಷೆಗಳ ಪ್ರಗತಿ ಮತ್ತು ಪೋಷಣೆಗಾಗಿ ಸ್ಪಂದಿಸುವ (AICTE VAANI) ಯೋಜನೆಯಡಿಯಲ್ಲಿ ಪ್ರಾಯೋಜಿತವಾಗಿದೆ.

ಈ ವಿಚಾರಸಂಕಿರಣದಲ್ಲಿ ವೈದ್ಯಕೀಯ ವಲಯದ ಡಾಕ್ಟರುಗಳು, ಸಂಶೋಧಕರೂ, ತಂತ್ರಜ್ಞರೂ, ಶಿಕ್ಷಣ ವಲಯದ ವಿದ್ವಾಂಸರೂ ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ . ಇಲ್ಲಿ ವೈದ್ಯಕೀಯ ವಲಯದ ನೂತನ ಉಪಕರಣಗಳು, ಆರೋಗ್ಯ ಸುಧಾರಣೆಯ ಸಾಧನಗಳ ಬಗ್ಗೆ, ಕೊಂಕಣಿ ಭಾಷೆಯಲ್ಲಿ ಸಂವಹನ ನಡೆಯಲಿದೆ. ಈ ಕಾರ್ಯಕ್ರಮವು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಜ್ಞಾನಗಳ ನಡುವಿನ ಅಂತರವನ್ನು ಕಡಿಮೆ ಮಾಡಲು, ನಾವೀನ್ಯತೆಯನ್ನು ಬೆಳೆಸಲು ಇದು ಸಹಕಾರಿ ಆಗಲಿದೆ ಎಂದರು .

ಸಂತ ಅಲೋಸಿಯಸ್ ಪರಿಗಣಿತ ವಿಶ್ವವಿದ್ಯಾಲಯ ಕುಲಸಚಿವರಾದ ಡಾ ರೊನಾಲ್ಡ್ ನಝರತ್ ಮಾತನಾಡಿ , ಕಾರ್ಯಕ್ರಮದಲ್ಲಿ
ಡಾ ಎಡ್ವರ್ಡ್ ನಜರತ್ ಪ್ರೊಫೆಸರ್, ಶ್ರೀನಿವಾಸ್ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಸೆಂಟರ್ ಇವರು ಮುಖ್ಯ ಅಥಿತಿಗಳಾಗಿ, ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಡಾ. ರಾಕೇಶ್ ಸರಾ, ಸಹಾಯಕ ಪ್ರಾಧ್ಯಾಪಕರು, ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ: ಡಾ ಜಾಯಿನ್ ಡಿ ಅಡಾ, ಪ್ರೊಫೆಸರ್, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಡಾ ನಿತಿನ್ ಪಿ ಲೋಬೋ, ಹಿರಿಯ ವಿಜ್ಞಾನಿ, ಕೇಟರ್ಸ್. ಚೆನ್ನೈ ಡಾ ರಿತೇಶ್ ಡಿಕುನ್ಹಾ, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು: ಡಾ ಸಜ್ಜನ್ ಶೆಣೈ ಮುಂತಾದವರು ಭಾಗವಹಿಸಲಿದ್ದಾರೆ .

‘ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ: ಮತ್ತು ಡಾ ರುಡಾಲ್ಸ್ ಜೋಯರ್ ನೊರೊನ್ಹಾ, ಜನರಲ್ ಮ್ಯಾನೇಜರ್. MRPL ಈ ಸಮಾವೇಶದಲ್ಲಿ ತಮ್ಮ ಪ್ರಬಂಧ ಮಂಡಿಸಲಿದ್ದಾರೆ.ವಿಶ್ವವಿದ್ಯಾಲಯದ ಕುಲಪತಿಗಳಾದ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಎಸ್ ಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು .

ಸುದ್ದಿಗೋಷ್ಠಿಯಲ್ಲಿ . ಕಾರ್ಯಕ್ರಮ ಸಂಯೋಜಕರಾದ ಡಾ.ರೀಟಾ ಕ್ರಾಸ್ತ, ಸಹ ಸಂಯೋಜಕರಾದ ಫ್ಲೋರಾ ಕಾಸ್ತೆಲಿನೊ , ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ.ನೀಲಕಂಠನ್ , ಮಾಹಿತಿ ಸಂಪರ್ಕ ವಿಭಾಗ ಚಂದ್ರಕಲಾ, ಉಪಸ್ಥಿತತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!